ಅಂತರಾಷ್ಟ್ರೀಯ

ಕೊರೋನ ನಿಯಂತ್ರಣಕ್ಕಾಗಿ ಜಾರಿಗೊಳಿಸಲಾದ ಲಾಕ್‌ಡೌನ್ ಅವಧಿಯಲ್ಲಿ 270 ಕೋಟಿ ಜನ ಆರ್ಥಿಕ ನೆರವಿನಿಂದ ವಂಚಿತ

Pinterest LinkedIn Tumblr


ನೈರೋಬಿ (ಕೆನ್ಯ): ಕೊರೋನಾ ನಿಯಂತ್ರಿಸಲು ಜಾರಿಗೊಳಿಸಲಾದ ಲಾಕ್‌ಡೌನ್ ಅವಧಿಯಲ್ಲಿ ಕೋಟ್ಯಂತರ ಜನರ ಮೇಲೆ ಗಂಭೀರ ಪರಿಣಾಮಗಳನ್ನು ಬೀರಿವೆ ಎಂದು ಜಾಗತಿಕ ಬಡತನ ನಿವಾರಣೆಯ ಗುರಿ ಹೊಂದಿರುವ ಹಲವು ಸಂಘಟನೆಗಳ ಒಕ್ಕೂಟ ‘ಆಕ್ಸ್‌ಫಾಮ್’ ನೂತನ ವರದಿಯೊಂದರಲ್ಲಿ ಹೇಳಿದೆ.

ತಕ್ಷಣ ಸೂಕ್ತ ನಿವಾರಕ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ದಶಕಗಳಲ್ಲೇ ಮೊದಲ ಬಾರಿಗೆ ಬಹುತೇಕ ಪ್ರತಿ ದೇಶದಲ್ಲಿ ಬಡತನ ಹೆಚ್ಚಾಗುವ ಎಲ್ಲ ಸಾಧ್ಯತೆಗಳಿವೆ ಎಂದು ಅದು ತಿಳಿಸಿದೆ.

ಕೋಟ್ಯಂತರ ಜನರು ತಮ್ಮ ಉದ್ಯೋಗ ಮತ್ತು ಆದಾಯಗಳನ್ನು ಕಳೆದುಕೊಂಡಿದ್ದಾರೆ ಹಾಗೂ ಕೊರೋನ ವೈರಸ್ ಸಾಂಕ್ರಾಮಿಕ ತಂದೊಡ್ಡಿದ ಆರ್ಥಿಕ ವಿನಾಶವನ್ನು ಎದುರಿಸಲು 270 ಕೋಟಿ ಜನರಿಗೆ ಸಾರ್ವಜನಿಕ ಆರ್ಥಿಕ ನೆರವು ಲಭಿಸಿಲ್ಲ ಎಂದು ಮಂಗಳವಾರ ಬಿಡುಗಡೆಯಾದ ಆಕ್ಸ್‌ಫಾಮ್ ವರದಿ ಹೇಳಿದೆ.

Comments are closed.