ಅಂತರಾಷ್ಟ್ರೀಯ

ಗರ್ಭಿಣಿಯ ಸೋಗಿನಲ್ಲಿದ್ದ ಮಹಿಳೆಯೊಬ್ಬಳನ್ನು ಚೆಕ್ ಮಾಡಿದಾಗ ಪೊಲೀಸರಿಗೆ ಶಾಕ್!

Pinterest LinkedIn Tumblr


ಬ್ರಾಸಿಲಿಯಾ: ಗರ್ಭಿಣಿ ಅಂದುಕೊಂಡ ಪೊಲೀಸರು, ಆದ್ರೂ ಅನುಮಾನ ಪರಿಹರಿಸಿಕೊಳ್ಳಲು ಮುಂದಾದಾಗ ಕಾದಿತ್ತು ಅಚ್ಚರಿ. ಗರ್ಭಿಣಿಯ ಸೋಗಿನಲ್ಲಿ ಕಲ್ಲಂಗಡಿ ಹಣ್ಣಿನಲ್ಲಿ ಕೊಕೇನ್ ಕಳ್ಳಸಾಗಾಟ ಮಾಡಲು ಯತ್ನಿಸಿದ ಮಹಿಳೆಯೊಬ್ಬಳು ಪೊಲೀಸ್​ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿರುವ ಘಟನೆ ಬ್ರೆಜಿಲ್​ನಲ್ಲಿ ನಡೆದಿದೆ.

ಗರ್ಭಿಣಿಯ ಅವತಾರದಲ್ಲಿ ಮಹಿಳೆಯೊಬ್ಬಳು ರಿಯಾಡಿ ಜನೈರೋಗೆ ತೆರಳುವ ಬಸ್​ ಹತ್ತಿದ್ದಳು. ಇದರ ಬೆನ್ನಲ್ಲೇ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹುಡುಕಾಟ ನಡೆಸಿದಾಗ ಮಾದಕ ಜಾಲ ಬೆಳಕಿಗೆ ಬಂದಿದೆ.

ಮೊದಲಿಗೆ ಮಿಲಿಟರಿ ಪೊಲೀಸರು​ ಮಹಿಳೆಯ ಹೊಟ್ಟೆಯನ್ನು ನೋಡಿದಾಗ ಕಲ್ಲಂಗಡಿ ಹಣ್ಣು ಕಂಡು ದಂಗಾಗಿದ್ದಾರೆ. ಬಳಿಕ ಹಣ್ಣನು ಕತ್ತಿರಿಸಿ ನೋಡಿದಾಗ ಅದರಲ್ಲಿ ಇಟ್ಟಿಗೆ ಗಾತ್ರದ ನಾಲ್ಕು ಕೊಕೇನ್​ ಬಾಕ್ಸ್​ ಪತ್ತೆಯಾಗಿವೆ. ಕೊಕೇನ್​ ಡ್ರಗ್ಸ್​ ಸುಮಾರು 4 ಪೌಂಡ್​​ ತೂಕವಿತ್ತು ಎಂದು ಸಾವಪೊಲೋ ಅಧಿಕಾರಿಗಳು ಸೋಮವಾರ ಮಾಹಿತಿ ನೀಡಿದ್ದಾರೆ.

ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿರುವ ಮಹಿಳೆ, ಪೆರುಗ್ವೇಯಲ್ಲಿ ಡ್ರಗ್ಸ್​ ಸ್ವೀಕರಿಸಿದೆ. ಅದನ್ನು ರಿಯೋಗೆ ತೆಗೆದುಕೊಂಡು ಹೋಗುತ್ತಿದೆ ಎಂದು ಹೇಳಿದ್ದಾಳೆ. ಆಕೆಯನ್ನು ಗುವಾರಾದಲ್ಲಿ ಬಂಧಿಸಲಾಗಿದೆ. ಪ್ರಕರಣ ದಾಖಲಿಸಲಾಗಿದ್ದು, ಆರೋಪಿ ಮಹಿಳೆ ದಂಡದ ಜತೆಗೆ ಜೈಲು ಶಿಕ್ಷೆಗೆ ಗುರಿಯಾಗಲಿದ್ದಾಳೆ.

ಕಲ್ಲಂಗಡಿಯಲ್ಲಿ ಕೊಕೇನ್​ ಕಳ್ಳಸಾಗಾಣೆ ಮಾಡುತ್ತಿದ್ದ ಫೋಟೋಗಳನ್ನು ಜಾಲತಾಣಗಳಲ್ಲಿ ಬ್ರೆಜಿಲ್​ ಪೊಲೀಸರು ಹಂಚಿಕೊಂಡಿದ್ದು, ವೈರಲ್​ ಆಗಿವೆ. ಇತ್ತೀಚಿನ ದಿನಗಳಲ್ಲಿ ದಕ್ಷಿಣ ಅಮೆರಿಕ ಮತ್ತು ಬ್ರೆಜಿಲ್​ ಯೂರೋಪ್​ಗೆ ಪ್ರಮುಖ ಡ್ರಗ್​ ಪೂರೈಕೆದಾರರಾಗಿದ್ದು, ಡ್ರಗ್ಸ್​ ದಂಧೆ ವ್ಯಾಪಕವಾಗಿದೆ. ಹೀಗಾಗಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

Comments are closed.