ಅಂತರಾಷ್ಟ್ರೀಯ

ಮದುವೆಯಲ್ಲಿ ವರನಿಗೆ ಎಕೆ-47 ಗಿಫ್ಟ್!

Pinterest LinkedIn Tumblr


ಇಸ್ಲಾಮಾಬಾದ್‌:ಮದುವೆಯಲ್ಲಿ ರಿಸೆಪ್ಷನ್‌ ವೇದಿಕೆಯ ಮೇಲೆ ನಿಂತ ವರನಿಗೆ ಎಕೆ-47 ರೈಫಲ್‌ ಅನ್ನು ಉಡುಗೊರೆಯಾಗಿ ನೀಡಿದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ವೈರಲ್‌ ಆಗಿದೆ. ಜತೆಗೆ ಬಿಸಿಬಿಸಿ ಚರ್ಚೆಗೂ ಅದು ಗ್ರಾಸವಾಗಿದೆ. ಪಾಕ್‌ ಸುದ್ದಿ ವಾಹಿನಿ ಎಆರ್‌ವೈ ಪ್ರಕಾರ, ಈ ಉಡುಗೊರೆ ನೀಡಿದ್ದು ವರನ ಅತ್ತೆಯೇ! ವೇದಿಕೆ ಮೇಲೆ ಬರಿಗೈಲಿ ಹೋಗುವ ಮಹಿಳೆ, ಉಡುಗೊರೆ ತರುವಂತೆ ಅಲ್ಲಿದ್ದ ಹುಡುಗರಿಗೆ ಸೂಚಿಸುತ್ತಾರೆ. ಅವರು ಎಕೆ-47 ರೈಫಲ್‌ ತಂದು ಆಕೆಯ ಕೈಗಿಡುತ್ತಾರೆ. ಆಕೆ ಅದನ್ನು ವರನ ಕೈಗೆ ಕೊಟ್ಟು ಶುಭ ಹಾರೈಸುತ್ತಾರೆ.

ಮದುವೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿ ವಿಜಯೋತ್ಸವ ಆಚರಿಸುವ ಸಂಪ್ರದಾಯ ಭಾರತ ಸೇರಿದಂತೆ ದಕ್ಷಿಣ ಏಷ್ಯಾದ ಹಲವು ದೇಶಗಳಲ್ಲಿದೆ. ಆದರೆ, ಹೀಗೆ ರೈಫಲ್‌ ಉಡುಗೊರೆ ನೀಡುವ ಸಂಪ್ರದಾಯ ಇಲ್ಲ. ಬಹುಶಃ ಇದು ನಿರ್ದಿಷ್ಟವಾಗಿ ಆ ಕುಟುಂಬದಲ್ಲಿ ನಡೆದುಕೊಂಡು ಬಂದಿರುವ ಸಂಪ್ರದಾಯ ಇರಬಹುದೇ ಎಂಬ ಚರ್ಚೆ ಅನ್‌ಲೈನ್‌ನಲ್ಲಿ ನಡೆದಿದೆ.

ಏಕೆಂದರೆ ಎಕೆ-47 ಉಡುಗೊರೆಯಾಗಿ ನೀಡಿದರೂ ವರನ ಮೊಗದಲ್ಲಿ ಯಾವುದೇ ಅಚ್ಚರಿ ಕಾಣುವುದಿಲ್ಲ. ಹೀಗಾಗಿ ಇದು ನಿರೀಕ್ಷಿತವಾಗಿದ್ದು, ಅವರ ಸಂಪ್ರದಾಯವಿರಬಹುದೇ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಮತ್ತೆ ಕೆಲವರು ಪಾಕ್‌ನಲ್ಲಿ ಗನ್‌ ಬಳಕೆ ಬಗ್ಗೆ ನಿಯಂತ್ರಣ ಇಲ್ಲದಿರುವ ಬಗ್ಗೆ ಕಿಡಿಕಾರಿದ್ದಾರೆ.

Comments are closed.