ಅಂತರಾಷ್ಟ್ರೀಯ

ಈಕೆ ಮೊಣಕಾಲಿನ ಫೋಟೊ ಮಾರಾಟದಿಂದ ತಿಂಗಳಿಗೆ 4 ಲಕ್ಷ ರೂ. ಸಂಪಾದನೆ

Pinterest LinkedIn Tumblr


ಇಂಗ್ಲೆಂಡ್ ನ ಯುವತಿಯೊಬ್ಬಳು ತನ್ನ ಸೆಲ್ಫಿ ಫೋಟೋ ಮಾರಾಟ ಮಾಡಿ ತಿಂಗಳಿಗೆ 4 ಲಕ್ಷ ರೂಪಾಯಿ ದುಡಿಯುತ್ತಿದ್ದಾಳೆ!

ಇದು ಅಚ್ಚರಿ ಎನಿಸಿದರೂ ಸತ್ಯ!, ಸ್ವೀಟ್ ಆ್ಯಚಸ್ ಎಂಬುದು ಆಕೆಯ ಹೆಸರು. ವಯಸ್ಸು 28. ಈಕೆ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾಳೆ.

ಎಲ್ಲರೂ ಓದಿಗಾಗಿ ಹಣ ಹೊಂದಿಸಲು ಅಂಗಡಿಯಲ್ಲೋ ಅಥವಾ ಹೋಟೆಲ್ನಲ್ಲೋ ಕೆಲಸ ಮಾಡಿದರೆ, ಈಕೆ ಮಾತ್ರ ಸೆಲ್ಫೀ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದಾಳೆ. ಇದಕ್ಕಾಗಿ ನಿತ್ಯ 4-5 ಗಂಟೆ ವ್ಯಯಿಸುತ್ತಾಳೆ.

ಇಲ್ಲೊಂದು ಅಚ್ಚರಿಯ ವಿಚಾರವಿದೆ. ಎಲ್ಲರೂ ಮುಖ ನೋಡಲು ಬೇಡಿಕೆ ಇಡುವುದು ಸಹಜ. ಆದರೆ, ಸ್ವೀಟ್ ಆ್ಯಚಸ್​​ಗೆ ಬೇಡಿಕೆ ಇಡುವುದು ಕಾಲ ಪಾದದ ಫೋಟೋ ತೋರಿಸುವಂತೆ!

! ದಿನಕ್ಕೆ ಕನಿಷ್ಠ 100 ಜನರು ಸೆಲ್ಫಿ ಕಳಿಸುವಂತೆ ಬೇಡಿಕೆ ಇಟ್ಟರೆ ಇದರಲ್ಲಿ 70 ಮಂದಿ, ಕಾಲ್ಗೆರಳು, ಕಾಲಿನ ಪಾದ, ಮೊಣಕಾಲಿನ ಫೋಟೊ ಕಳಿಸುವಂತೆ ಕೇಳಿಕೊಳ್ಳುತ್ತಾರಂತೆ!

ಆರಂಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಕಾಲಿನ ಫೋಟೋ ನೋಡಿದ ಕೆಲವರು, ಮತ್ತಷ್ಟು ಫೋಟೋಕ್ಕೆ ಬೇಡಿಕೆ ಇಟ್ಟಿದ್ದರು. ಅಲ್ಲದೆ, ಇದಕ್ಕೆ ಹಣ ನೀವುದಾಗಿಯೂ ಹೇಳಿದ್ದರು. ನಂತರ ಇದನ್ನೇ ಆಕೆ ಉದ್ಯಮನ್ನಾಗಿ ಮಾಡಿಕೊಂಡಿದ್ದಾಳೆ.

ಇನ್ನು, ಈಕೆಗೆ ನ್ಯೂಡ್ ಫೋಟೋಗಳನ್ನು ಕಳುಹಿಸುವಂತೆಯೂ ಬೇಡಿಕೆ ಬಂದಿತ್ತಂತೆ. ಆದರೆ, ಇದನ್ನು ಆಕೆ ತಿರಸ್ಕರಿಸಿದ್ದಾಳೆ. ಅಷ್ಟೇ ಅಲ್ಲ, ಈ ರೀತಿ ಫೋಟೋಗಳನ್ನು ಕಳುಹಿಸುವಿದಲ್ಲ ಎಂದು ಹೇಳಿದ್ದಾಳೆ.

Comments are closed.