
ಬ್ರಸೆಲ್ಸ್: ಪಾರಿವಾಳ ಹೆಚ್ಚೆಂದರೆ ಎಷ್ಟು ಹಣಕ್ಕೆ ಮಾರಾಟ ಆಗಬಹುದು… ಇಲ್ಲೊಂದು ಪುಟ್ಟ ಪಾರಿವಾಳ ಬರೋಬ್ಬರಿ 14 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಬೆಲ್ಜಿಯಂನಲ್ಲಿ ಮಾರಾಟ ಆಗಿರುವುದು.
ಪಾರಿವಾಳದ ಮೂಲ ಬೆಲೆಯನ್ನು 237 ಡಾಲರ್ ಎಂದು ನಿಗದಿ ಮಾಡಲಾಗಿತ್ತು. ಆದ್ರೆ ಚೀನಾ ವ್ಯಕ್ತಿಯೋರ್ವ 19 ಲಕ್ಷ ಡಾಲರ್ (14 ಕೋಟಿ 15 ಲಕ್ಷ ರೂಪಾಯಿ) ನೀಡಿ ಮುದ್ದಾದ ಎರಡು ವರ್ಷದ ಪಾರಿವಾಳ ಖರೀದಿಸಿದ್ದಾರೆ.
ತನ್ನ ಪಾರಿವಾಳ 19 ಲಕ್ಷಕ್ಕೆ ಮಾರಾಟವಾದ ಸುದ್ದಿ ಕೇಳಿ ಮಾಲಕ ಆಶ್ಚರ್ಯ ವ್ಯಕ್ತಪಡಿಸಿದ್ದಾನೆ. ಮಾರಾಟದ ಬೆಲೆಯನ್ನ ಹೇಳಿದಾಗ ಆತನ ಕುಟುಂಬಸ್ಥರು ಆರಂಭದಲ್ಲಿ ನಂಬಲಿಲ್ಲ ಎಂದು ವರದಿಯಾಗಿದೆ. ಇದಕ್ಕೂ ಮೊದಲು ನಾಲ್ಕು ವರ್ಷದ ಪಾರಿವಾಳ 14 ಲಕ್ಷ ಡಾಲರ್ ಗೆ ಮಾರಾಟವಾಗಿ ದಾಖಲೆ ಬರೆದಿತ್ತು.
Comments are closed.