ಅಂತರಾಷ್ಟ್ರೀಯ

ಇಮ್ರಾನ್ ಗಾಂಜಾ ಸೇವಿಸುವುದನ್ನು ಕಂಡಿದ್ದೇನೆ: ಮಾಜಿ ವೇಗದ ಬೌಲರ್ ಸರ್ಫರಾಜ್

Pinterest LinkedIn Tumblr


ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ (Imran Khan) ಬಗ್ಗೆ ಆಘಾತಕಾರಿ ಹೇಳಿಕೆ ಹೊರಬಿದ್ದಿದ್ದು ಪಾಕಿಸ್ತಾನದ ಮಾಜಿ ವೇಗದ ಬೌಲರ್ ಸರ್ಫರಾಜ್ ನವಾಜ್ ಅವರು ಇಮ್ರಾನ್ ಖಾನ್ ಡ್ರಗ್ಸ್ ಸೇವಿಸುತ್ತಿದ್ದರು ಎಂದು ಹೇಳಿದ್ದಾರೆ. 1987 ರಲ್ಲಿ ಇಮ್ರಾನ್ ಹಲವಾರು ಬಾರಿ ಡ್ರಗ್ಸ್ ತೆಗೆದುಕೊಳ್ಳುವುದನ್ನು ನೋಡಿರುವುದಾಗಿ ಸರ್ಫರಾಜ್ ಹೇಳಿಕೊಂಡಿದ್ದಾರೆ.

1970 ಮತ್ತು 1980ರ ದಶಕಗಳಲ್ಲಿ ನವಾಜ್ ಮತ್ತು ಇಮ್ರಾನ್ ಪಾಕಿಸ್ತಾನದ ಅಗ್ರ ಆಟಗಾರರಾಗಿದ್ದರು ಎಂಬುದು ಗಮನಾರ್ಹ. ಇಬ್ಬರೂ ಒಟ್ಟಿಗೆ ಅನೇಕ ಪಂದ್ಯಗಳನ್ನು ಆಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಸರ್ಫರಾಜ್ ಇಮ್ರಾನ್ ಖಾನ್ ಬಗ್ಗೆ ಮಾತನಾಡುತ್ತಿರುವುದು ಕಂಡುಬರುತ್ತದೆ. ಈ ವೀಡಿಯೊದಲ್ಲಿ ಇಮ್ರಾನ್ ಹೇಗೆ ಮಾದಕ ವ್ಯಸನಿಯಾಗಿದ್ದರು ಎಂಬುದನ್ನು ನವಾಜ್ ವಿವರಿಸಿದ್ದು ಒಂದೊಮ್ಮೆ ತಾವು ಹೇಳುತ್ತಿರುವುದು ಸುಳ್ಳಾಗಿದ್ದರೆ ಇಮ್ರಾನ್ ಖಾನ್ ಅವರನ್ನು ನ್ಯಾಯಾಲಯಕ್ಕೆ ಎಳೆಯಬಹುದು ಎಂದು ಸರ್ಫರಾಜ್ ಸವಾಲು ಹಾಕಿದ್ದಾರೆ.

1987 ರಲ್ಲಿ ನಡೆದ ಒಂದು ಘಟನೆಯನ್ನು ನೆನಪಿಸಿಕೊಂಡ ಸರ್ಫರಾಜ್, “ಪಾಕಿಸ್ತಾನ (Pakistan)ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದ ಸಮಯದಲ್ಲಿ ಇಮ್ರಾನ್ ಉತ್ತಮವಾಗಿ ಆಡಿರಲಿಲ್ಲ, ಆ ಸಂದರ್ಭದಲ್ಲಿ ಅವರು ಇಸ್ಲಾಮಾಬಾದ್‌ಗೆ ಬಂದು ಡ್ರಗ್ಸ್ ಸೇವಿಸಿದರು”. ಅವರು ಪದೇ ಪದೇ ಏನನ್ನೋ ವಾಸನೆ ನೋಡುತ್ತಿದ್ದರು ಮತ್ತು ಅವರು ಗಾಂಜಾ ಸೇವಿಸುವುದನ್ನೂ ಕೂಡ ಕಂಡಿದ್ದೇನೆ ಎಂದು ಸರ್ಫರಾಜ್ ನವಾಜ್ ಇಮ್ರಾನ್ ಖಾನ್ ಬಗ್ಗೆ ತಿಳಿಸಿದ್ದಾರೆ.

ಇಮ್ರಾನ್ ಇದನ್ನು ಲಂಡನ್‌ನಲ್ಲಿ ಮತ್ತು ನನ್ನ ಮನೆಯಲ್ಲಿಯೂ ಮಾಡಿದ್ದಾರೆ. 1987ರಲ್ಲಿ, ಪಾಕಿಸ್ತಾನ ಕ್ರಿಕೆಟ್ ಪಂದ್ಯವೊಂದರಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಿದಾಗ ಮತ್ತು ಅದರ ನಂತರ ಉತ್ತಮವಾಗಿ ಬೌಲಿಂಗ್ ಮಾಡಲು ಸಾಧ್ಯವಾಗದಿದ್ದಾಗ, ಅವರು ಇಸ್ಲಾಮಾಬಾದ್‌ನಲ್ಲಿರುವ ನಮ್ಮ ಮನೆಗೆ ಮೊಹ್ಸಿನ್ ಖಾನ್, ಅಬ್ದುಲ್ ಖಾದಿರ್, ಸಲೀಮ್ ಮಲಿಕ್ ಅವರೊಂದಿಗೆ ಬಂದರು. ಈ ಸಮಯದಲ್ಲಿ, ಇಮ್ರಾನ್ ಆಹಾರವನ್ನು ಸೇವಿಸಿ ಚರಸ್ ತೆಗೆದುಕೊಂಡನು. ಅವರು ಕೊಕೇನ್ ಸೇವಿಸುತ್ತಿದ್ದರು ಎಂದು ಸರ್ಫರಾಜ್ ನವಾಜ್ ವಿವರಿಸಿದ್ದಾರೆ.

ಇಮ್ರಾನ್ ಖಾನ್ ಮಾದಕ ವ್ಯಸನಿ ಎಂದು ಘಂಟಾಘೋಷವಾಗಿ ಹೇಳಿರುವ ಸರ್ಫರಾಜ್ ನನ್ನ ಹೇಳಿಕೆ 100% ಸತ್ಯ. ಇಮ್ರಾನ್ ಖಾನ್ ಅವರನ್ನು ನನ್ನ ಮುಂದೆ ಕರೆತನ್ನಿ ಅವರಿಗೆ ಇದನ್ನು ನಿರಾಕರಿಸಲಿ ಸಾಧ್ಯವೇ? ಅವರ ಈ ವರ್ತನೆಗೆ ಕೇವಲ ನಾನಷ್ಟೇ ಸಾಕ್ಷಿಯಲ್ಲ ಲಂಡನ್‌ನಲ್ಲಿ ಇದಕ್ಕೆ ಹಲವರು ಸಾಕ್ಷಿಯಾಗಿದ್ದಾರೆ ಎಂದು ಅವರು ಬಹಿರಂಗ ಪಡಿಸಿದ್ದಾರೆ.

Comments are closed.