ಅಂತರಾಷ್ಟ್ರೀಯ

ಗುಂಡಿನ ದಾಳಿಗೆ ಕಾಬೂಲ್​ ವಿಶ್ವವಿದ್ಯಾಲಯದಲ್ಲಿ 19 ವಿದ್ಯಾರ್ಥಿಗಳ ಸಾವು

Pinterest LinkedIn Tumblr


ಅಫ್ಘಾನಿಸ್ತಾನದ ಕಾಬೂಲ್​ ವಿಶ್ವವಿದ್ಯಾಲಯದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು, ಕನಿಷ್ಠ 19 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಕ್ಯಾಂಪಸ್​ನಲ್ಲಿ ಗುಂಡಿನ ದಾಳಿ ಬಳಿಕೆ ಪೊಲೀಸರು ಬಿಗಿ ಬಂದೋಬಸ್ತ್​ ನಡೆಸಿದ್ದಾರೆ ಎಂದು ಅಫ್ಘಾನಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ. ಅಫ್ಘಾನ್​ ಮತ್ತು ಇರಾನಿನ ಅಧಿಕಾರಿಗಳು ವಿಶ್ವವಿದ್ಯಾಲಯದಲ್ಲಿ ಪುಸ್ತಕ ಪ್ರದರ್ಶನ ಉದ್ಘಾಟಿಸುವ ವೇಳೆ ಮೂವರು ಗುಂಡಿನ ದಾಳಿ ನಡೆಸಲು ಶುರುಮಾಡಿದರು. ಭಯೋತ್ಪಾದಕರು ವಿದ್ಯಾರ್ಥಿಗಳನ್ನು ನೇರವಾಗಿ ಗುರಿಯಾಗಿಸಿಕೊಂಡು ಈ ದಾಳಿ ನಡೆಸಿದ್ದಾರೆ. ಈ ದಾಳಿ ನಡೆಯುತ್ತಿದ್ದಂತೆ ವಿದ್ಯಾರ್ಥಿಗಳ ತಂಡ ಕ್ಯಾಂಪಸ್​ನಿಂದ ಓಡಿಹೋಗಿ, ದಾಳಿಯಿಂದ ತಪ್ಪಿಸಿಕೊಳ್ಳುವ ಯತ್ನ ನಡೆಸಿದ್ದಾರೆ.

ಕಾಬೂಲ್​ ವಿಶ್ವವಿದ್ಯಾಲಯದಲ್ಲಿ ಗುಂಡಿನ ದಾಳಿ ನಡೆದಿರುವ ಬಗ್ಗೆ ಆಂತರಿಕ ವ್ಯವಹಾರ ಸಚಿವಾಲಯದ ವಕ್ತಾರ ತಾರಿಕ್​ ಅರಿಯನ್​ ದೃಢಪಡಿಸಿದ್ದಾರೆ. ಘಟನಾ ಸ್ಥಳದಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಭಯೋತ್ಪಾದಕರ ದಾಳಿಯನ್ನು ಅಫ್ಘಾನಿಸ್ತಾನದ ಅಧ್ಯಕ್ಷ ಆಶ್ರಫ್​ ಘನಿ ಖಂಡಿಸಿದ್ದಾರೆ. ಹೆಲ್ಮಾಂಡ್​ನಲ್ಲಿ ಸೋತ ಬಳಿಕ ಭಯೋತ್ಪಾದಕರು ಶೆಕ್ಷಣಿಕ ಕೇಂದ್ರದ ಮೇಲೆ ದಾಳಿಗೆ ಮುಂದಾಗಿದ್ದಾರೆ. ಇದೊಂದು ಹೇಯ ಅಪರಾಧ ಎಂದಿದ್ದಾರೆ. ಗುಂಡಿನ ದಾಳಿ ನಡೆದಾಕ್ಷಣ ಆತಂಕಗೊಂಡ ಪೋಷಕರು ಮಕ್ಕಳ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಕ್ಯಾಂಪಸ್​ ಪ್ರವೇಶಕ್ಕೆ ಮುಂದಾಗಿದ್ದಾರೆ.

ಘಟನೆಗೆ ಯಾವ ಭಯೋತ್ಪಾದಕ ಗುಂಪು ಕಾರಣ ಎಂಬ ಬಗ್ಗೆ ತಿಳಿದು ಬಂದಿಲ್ಲ. ಈ ಕುರಿತು ಯಾವುದೇ ಸಂಘಟನೆ ಕೂಡ ಹೊಣೆಗಾರಿಕೆ ಹೊತ್ತುಕೊಂಡಿಲ್ಲ.

Comments are closed.