ಅಂತರಾಷ್ಟ್ರೀಯ

ಸ್ನಾನ ಮಾಡುವ ವೇಳೆ ಯುವತಿಗೆ ಏಕಾಏಕಿ ಹೆರಿಗೆ; ಮಗು ಕಂಡು ಹೆದರಿದ ಯುವತಿ ಮಾಡಿದ್ದೇನು ಗೊತ್ತೇ..?

Pinterest LinkedIn Tumblr

ನ್ಯೂಯಾರ್ಕ್: ಯುವತಿಯೊಬ್ಬಳು ಸ್ನಾನ ಮಾಡುತ್ತಿದ್ದ ವೇಳೆ ಏಕಾಏಕಿ ಮಗುವಿಗೆ ಜನ್ಮ ನೀಡಿದ್ದಾಳೆ. ಮಗು ಕಂಡ ಆಕೆ ಮಾಡಿದ್ದು ಮಾತ್ರ ಘ”ನಘೋ”ರ ಕೆಲಸ…ಅಷ್ಟಕ್ಕೂ ಆಕೆ ಗರ್ಭಾವತಿ ಎಂಬುದೇ ಆಕೆಗೆ ತಿಳಿದಿರಲಿಲ್ಲ. ಈ ಘಟನೆ ನಡೆದಿರುವುದು ಅಮೆರಿಕದ ನ್ಯೂಯಾರ್ಕ್ ಕ್ವೀನ್ಸ್‌ನಲ್ಲಿ ನಡೆದಿದೆ.

ವಿಚಿತ್ರವೆಂದರೆ ಭಾರತೀಯ ಮೂಲದ ಸಬಿತಾ ದೂಕ್ರಾಮ್‌ (23) ಎಂಬ ಆ ಮಹಿಳಿಗೆ ತಾನು ಗರ್ಭ ಧರಿಸಿದ್ದೇ ಗೊತ್ತಿಲ್ಲವಂತೆ. ಹೀಗಾಗಿ ಬಾತ್‌ರೂಮ್‌ನಲ್ಲಿ ಮಗು ಕಂಡು ಹೆದರಿದ ಆಕೆ ಮಗುವನ್ನು ಎತ್ತಿ ಕಿಟಕಿಯಿಂದ ಆಚೆ ಎ”ಸೆದಿದ್ದಾಳೆ. ಬಳಿಕ ಸ್ನಾನದ ಕೋಣೆಯನ್ನು ತಾನೇ ಸ್ವಚ್ಛ ಮಾಡಿ, ಸ್ನಾನವನ್ನು ಮುಗಿಸಿ ನಿದ್ದೆ ಮಾಡಿದ್ದಾಳೆ. ಮಗುವಿನ ಚೀರಾಟ ಕೇಳಿದ ನೆರೆಹೊರೆಯವರು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸಬಿತಾ ವಿರುದ್ಧ ಕೊ”ಲೆ ಯತ್ನದ ಕೇ”ಸು ದಾಖಲಾಗಿದೆ. ವಿಚಾರಣೆಯ ವೇಳೆ ಮಗು ಹೇಗೆ ಜನಿಸಿತು ಎಂಬುದು ನನಗೆ ಗೊತ್ತೇ ಇಲ್ಲ. ಸ್ನಾನಕ್ಕೆಂದು ಹೋಗಿದ್ದಾಗ ಮಗು ಜನಿಸಿತು. ಏನು ಮಾಡಬೇಕು ಎಂದು ತಿಳಿಯದೇ ಹೀಗೆ ಮಾಡಿದೆ. ಮಗು ಹೇಗಿದೆ ಎಂದು ಕೂಡ ನಾನು ನೋಡಿಲ್ಲ. ತನ್ನನ್ನು ಕ್ಷಮಿಸಿ ಎಂದು ದೂಕ್ರಾಮ್‌ ಕೇಳಿಕೊಂಡಿದ್ದಾಳೆ.

5 ಅಡಿ ಎತ್ತರದಿಂದ ಬಿದ್ದಿದ್ದರಿಂದ ಮಗುವಿನ ತಲೆಗೆ ಪೆ”ಟ್ಟು ಬಿದ್ದಿದ್ದು, ತೀವ್ರ ನಿಗಾ ಘಟಕದಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

Comments are closed.