
ಮಹಿಳೆಯೊಬ್ಬಳು ಸೂಪರ್ ಮಾರ್ಕೆಟ್ ಗೆ ಶಾಪಿಂಗ್ಗೆ ಎಂದು ಬಂದವಳು ಕದಿಯುತ್ತಿರುವ ದೃಶ್ಯ ವೈರಲ್ ಆಗಿದೆ. ಕದ್ದ ವಸ್ತುಗಳನ್ನ ತನ್ನ ಒಳ ಉಡುಪಿನಲ್ಲಿ ಮಹಿಳೆ ಅಡಗಿಸಿಕೊಂಡಿದ್ದಾಳೆ. ಆದರೆ ಆಕೆ ಕದಿಯುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ರಷ್ಯಾದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಬೂದು ಬಣ್ಣದ ಬಟ್ಟೆ ಧರಿಸಿರುವ ಮಹಿಳೆ. ಫ್ರೀಜರ್ನಿಂದ ಜ್ಯೂಸ್ ಬಾಟಲಿಯನ್ನ ಎತ್ತಿಕೊಂಡಿದ್ದಾಳೆ. ನಂತರ ಅಲ್ಲಿಯೇ ತನ್ನ ಒಳ ಉಡುಪಿನಲ್ಲಿ ಹಾಕಿಕೊಂಡಿದ್ದಾಳೆ. ಆದರೆ ಆಕೆಯ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.
ಮಹಿಳೆ ಶಾಪಿಂಗ್ ಮಾಲಿಗೆ 5.20ಕ್ಕೆ ತೆರಳಿದ್ದಾಳೆ. ನಂತರ ಯಾರು ಇಲ್ಲದಿರುವುದನ್ನು ಗಮನಿಸಿ ವಸ್ತುಗಳನ್ನು ಕದಿಯುತ್ತಾಳೆ. ಸುಮಾರು 6 ವಸ್ತುಗಳನ್ನು ತನ್ನ ಒಳ ಉಡುಪಿನಲ್ಲಿ ಹಾಕಿಕೊಂಡಿದ್ದಾಳೆ. ಆದರೆ ಸೂಪರ್ ಮಾರ್ಕೆಟ್ ನ ಮಾಲೀಕನಿಗೆ ಈ ಘಟನೆ ತಡವಾಗಿ ಗೊತ್ತಾಗಿದೆ. ಸದ್ಯ ಪೊಲೀಸರು ಮಹಿಳೆಯನ್ನು ಹುಡುಕುತ್ತಿದ್ದಾರೆ.
Comments are closed.