ಅಂತರಾಷ್ಟ್ರೀಯ

ಪ್ಯಾರೀಸ್​​​​ ನಗರದಾದ್ಯಂತ ಭಾರೀ ಸದ್ದು: ಭೀತಿಯಲ್ಲಿ ಜನತೆ

Pinterest LinkedIn Tumblr
Eiffel Tower

ಪ್ಯಾರೀಸ್: ಫ್ರಾನ್ಸ್​ ರಾಜಧಾನಿ ಪ್ಯಾರೀಸ್​​​​ ನಲ್ಲಿ ಭಾರೀ ಸದ್ದು ಕೇಳಿಸಿದ್ದು, ಜನತೆಯಲ್ಲಿ ಭೀತಿ ಮೂಡಿಸಿದೆ. ಈ ಶಬ್ದ ಕೇಳಿದ ಜನತೆ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ಧಾರೆ.

ಈ ಬೆನ್ನಲ್ಲೇ ಹಲವಾರು ಮಂದಿ ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಪೋಸ್ಟ್​ ಮಾಡಿದ್ದು, ನಮಗೂ ಸದ್ದು ಕೇಳಿಸಿದೆ ಎಂದು ಫೇಸ್​​ಬುಕ್​​ನಲ್ಲಿ ಬರೆದುಕೊಂಡಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಪೊಲೀಸರು ಮಿಲಿಟರಿ ಜೆಟ್​​ ಸೌಂಡ್​​ ಬಾರಿಯರ್​​ನಿಂದ ಈ ಶಬ್ದ ಕೇಳಿಸಿದೆ ಎಂದು ಹೇಳಿದ್ದಾರೆ. ಈ ಸಂಬಂಧ ಪ್ಯಾರೀಸ್​ ನಗರ ಪೊಲೀಸರು ಟ್ವೀಟ್​ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಪ್ಯಾರೀಸ್​​ನ ನಗರದ ಬಹುತೇಕ ಕಡೆ ಈ ಸದ್ದು ಕೇಳಿಸಿದೆ. ಇಲ್ಲಿನ ರೊನಾಲ್ಡ್​ ಗ್ಯಾರೋಸ್​ ಎಂಬಲ್ಲಿ ಫ್ರೆಂಚ್​​ ಓಪನ್​​​ ಟೂರ್ನಮೆಂಟ್​ ಟೆನಿಸ್​​​ ನಡೆಯುತ್ತಿದ್ದಾಗ ಕೂಡ ಭಾರೀ ಸದ್ದು ಕೇಳಿಸಿದೆ. ಈ ಬಗ್ಗೆ ಆಟಗಾರರೊಬ್ಬರು ಟ್ವೀಟ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಭಾರಿ ಸದ್ದು ಕೇಳಿಸಿದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಚರ್ಚೆಯಾಗಿದೆ. ಪ್ಯಾರೀಸ್​ನಲ್ಲಿ ಭೂಕಂಪವಾಗಿದೆಯೇ? ನಗರದಲ್ಲಿ ಭಾರಿ ಸದ್ದು ಕೇಳಿಸಿದೆ ಎಂದು ಜಿಬಿನ್ ಎಂಬುವವರು ಟ್ವೀಟ್​ ಮಾಡಿದ್ದಾರೆ. ಎತ್ತರದಲ್ಲಿ ಈ ಶಬ್ದ ಕೇಳಿಸಿದೆ. ಜೆಟ್‌, ವಿಮಾನ ಹಾರಾಟದ ವೇಳೆ ಈ ರೀತಿಯ ಶಬ್ಧ ಉಂಟಾಗುವ ಸಾಧ್ಯತೆಗಳಿರುತ್ತದೆ ಎಂದು ಕೂಡ ಕೆಲವರು ಚರ್ಚೆ ಮಾಡಿದ್ದಾರೆ.

Comments are closed.