
ನ್ಯೂಯಾರ್ಕ್: ಕರೊನಾ ಸೋಂಕಿತರು ಮಧುಮೇಹಿ, ಹೃದ್ರೋಗಿ ಆಗಿದ್ದರೆ ಅಪಾಯ ಹೆಚ್ಚು ಎಂಬುದು ಹಳೆ ಸುದ್ದಿಯಾಗಿದೆ. ಹೊಸ ಸುದ್ದಿ ಕರೊನಾದಿಂದ ದೇಹದ ಪ್ರಮುಖ ಅಂಗವೊಂದಕ್ಕೆ ಅಪಾಯ ಹೆಚ್ಚು ಎಂಬುದು ಹೊಸ ಸುದ್ದಿಯಾಗಿದೆ.
ಕೊರೋನಾ ಸೋಂಕಿತರಲ್ಲಿ ಮೂತ್ರಪಿಂಡದ ವೈಫಲ್ಯ ಸಮಸ್ಯೆ ಸಂಭವಿಸುವ ಸಾಧ್ಯತೆ ಹೆಚ್ಚು ಎಂದು ಅಮೆರಿಕನ್ ಸೊಸೈಟಿ ಆಫ್ ನೆಫ್ರಾಲಜಿ ಎಂಬ ಜರ್ನಲ್ನಲ್ಲಿ ಪ್ರಕಟವಾಗಿದೆ.
ಮೂತ್ರಪಿಂಡದ ಸಮಸ್ಯೆ ಇರುವ ಸಾವಿರಾರು ರೋಗಿಗಳಲ್ಲಿ ಈ suPAR ಕಾರಣವಾಗಿದ್ದನ್ನು ಗಮನಿಸಿದ್ದಾಗಿ ಸಂಶೋಧಕರು ಹೇಳಿದ್ದಾರೆ.
ಇದಕ್ಕಾಗಿ 352 ಮಂದಿ ಕರೊನಾ ಸೋಂಕಿತರನ್ನು ಸಂಶೋಧನೆಗೆ ಒಳಪಡಿಸಿದ್ದು, ಅವರಲ್ಲಿ ಕಾಲುಭಾಗದಷ್ಟು ಜನರಲ್ಲಿ ಕಿಡ್ನಿ ಸಮಸ್ಯೆ ಕಂಡುಬಂದಿದ್ದು, ಅವರ suPAR ಮಟ್ಟ ಉಳಿದವರಿಗಿಂತ ಶೇ. 60 ಹೆಚ್ಚಿತ್ತು ಎಂದು ಅಧ್ಯಯನ ಹೇಳಿದೆ.
Comments are closed.