ಅಂತರಾಷ್ಟ್ರೀಯ

ಇಲ್ಲೊಬ್ಬಳು ಪತ್ನಿ ತನ್ನ ಬೆಡ್ ರೂಂನಲ್ಲಿದ್ದ ಇಲಿಯನ್ನು ಓಡಿಸಲು ನಿರಾಕರಿಸಿದ ಪತಿಯ ಜನನಾಂಗವನ್ನೇ ಕಚ್ಚಿದ್ದಾಳೆ…..

Pinterest LinkedIn Tumblr

ಲುಸಾಕಾ(ಪೂರ್ವ ಆಫ್ರಿಕಾ: ಮಹಿಳೆಯೊಬ್ಬರು 52 ವರ್ಷದ ತನ್ನ ಪತಿಯ ಜನನಾಂಗವನ್ನೇ ಕಚ್ಚಿದ ಅಚ್ಚರಿಯ ಘಟನೆಯೊಂದು ಜಾಂಬಿಯಾದ ಕಿಟ್ವೆ ಪಟ್ಟಣದಲ್ಲಿ ನಡೆದಿದೆ.

ಮಹಿಳೆಯನ್ನು ಮುಕುಪಾ(40) ಎಂದು ಗುರುತಿಸಲಾಗಿದೆ. ಈಕೆ ತನ್ನ ಬೆಡ್ ರೂಂನಲ್ಲಿದ್ದ ಇಲಿಯನ್ನು ಓಡಿಸಲು ನಿರಾಕರಿಸಿದ ಪತಿಗೆ ಈ ರೀತಿಯ ಶಿಕ್ಷೆ ನೀಡಿದ್ದಾಳೆ.

ಮಹಿಳೆ ತನ್ನ ಗೆಳೆಯರ ಜೊತೆ ಪಾರ್ಟಿ ಮಾಡಿ ಮದ್ಯದ ಅಮಲಿನಲ್ಲಿ ಮನೆಗೆ ಹಿಂದಿರುಗಿದ್ದಾಳೆ. ಈ ವೇಳೆ ಬೆಡ್ ರೂಮಿನಲ್ಲಿ ಇಲಿ ಓಡಾಡುತ್ತಿರುವನ್ನು ಕಂಡಿದ್ದಾಳೆ. ಅಲ್ಲದೆ ಇಲಿ ಓಡಾಡುತ್ತಿರುವುದರಿಂದ ನಿದ್ದೆಯೂ ಬರುತ್ತಿರಲಿಲ್ಲ. ಇದರಿಂದ ಕಂಗಾಲಾದ ಆಕೆ ತನ್ನ ಪತಿಯ ಬಳೀ ಹೋಗಿ ಇಲಿ ಓಡಿಸುವಂತೆ ಹೇಳಿದ್ದಾಳೆ.

ಇತ್ತ ನಿದ್ದೆಯ ಮಂಪರಿನಲ್ಲಿದ್ದ ಪತಿ, ಪತ್ನಿ ಮಾತನ್ನು ನಿರಾಕರಿಸಿದ್ದಾನೆ. ಹೀಗಾಗಿ ಇಲಿ ಓಡಾಡುತ್ತಾ ಮಹಿಳೆಯ ಕ್ವಾಟ್ಲೆ ಕೊಡುವುದನ್ನು ಮುಂದವರಿಸಿತ್ತು. ಇದರಿಂದ ಸಿಟ್ಟಿಗೆದ್ದ ಮಹಿಳೆ ತನ್ನ ಪತಿಯ ಜೊತೆ ವಾಗ್ವಾದಕ್ಕಿಳಿದಿದ್ದಾಳೆ. ಈ ವೇಳೆ ಇಬ್ಬರ ನಡುವೆ ಜಗಳ ತಾರಕಕ್ಕೇರಿದ್ದು, ಪತಿಯ ಜನನಾಂಗವನ್ನೇ ಕಚ್ಚುವ ಮೂಲಕ ಶಿಕ್ಷೆ ನೀಡಿದ್ದಾಳೆ.

ಘಟನೆಯಿಂದ ಗಾಯಗೊಂಡ ಪತಿಯನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರು ಒಂದೇ ಮನೆಯಲ್ಲಿದ್ದರೂ ಪತಿ ಹಾಗೂ ಪತ್ನಿ ಬೇರೆ ಬೇರೆ ರೂಮಿನಲ್ಲಿ ಇರುತ್ತಿದ್ದರು ಎಂದು ಉಪ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Comments are closed.