
ಮಾಸ್ಕೋ: ಹದಿಮೂರು ವರ್ಷದ ಶಾಲಾಬಾಲಕಿಯೊಬ್ಬಳು ಹೆಣ್ಣು ಮಗುವಿಗೆ ಜನ್ಮ ನೀಡಿರುವ ವಿರಳಾತಿವಿರಳ ಘಟನೆ ರಷ್ಯಾದಲ್ಲಿ ನಡೆದಿದೆ. ಮತ್ತೊಂದು ಅಚ್ಚರಿಯೆಂದರೆ ಮಗುವಿನ ತಂದೆ ತನ್ನ ಹತ್ತು ವರ್ಷದ ಬಾಯ್ಫ್ರೆಂಡ್ ಎಂದು ಬಾಲಕಿ ಹೇಳಿಕೊಂಡಿದ್ದಾಳೆ.
ಬಾಲಕಿಯ ಹೆಸರು ದರ್ಯಾ ಸುಡ್ನಿಶ್ನಿಕೋವಾ (13). ತನ್ನ ಹತ್ತು ವರ್ಷದ ಬಾಯ್ಫ್ರೆಂಡ್ ಇವಾನ್ನಿಂದ ಗರ್ಭಿಣಿಯಾಗಿದ್ದೇನೆ ಎಂದು ಹೇಳಿಕೊಂಡ ಬೆನ್ನಲ್ಲೇ ದರ್ಯಾ, ರಷ್ಯಾದಲ್ಲಿ ಪ್ರಖ್ಯಾತಿ ಗಳಿಸಿದ್ದಾಳೆ. ಆದರೂ ತನ್ನ ತವರು ಹೆಲೆಜ್ನೋಗೊರ್ಸ್ಕ್ ನಗರದಲ್ಲಿ 16 ವರ್ಷದ ಹುಡುಗನಿಂದ ಅತ್ಯಾಚಾರಕ್ಕೆ ಒಳಗಾಗಿದ್ದೆ ಎಂತಲೂ ತದನಂತರದಲ್ಲಿ ದರ್ಯಾ ಒಪ್ಪಿಕೊಂಡಿದ್ದಳು. ಆದರೆ, ಇದೀಗ ತನ್ನ ಮಗುವಿಗೆ ಹತ್ತು ವರ್ಷದ ಬಾಲಕನೇ ತಂದೆ ಎನ್ನುತ್ತಿದ್ದಾಳೆ.
ಅಂದಹಾಗೆ ದರ್ಯಾ, ಸೈಬಿರಿಯಾದ ಕ್ರಾಸ್ನೊಯಾರ್ಸ್ಕ್ ನಗರದಲ್ಲಿನ ಕ್ಲೀನಿಕ್ ಒಂದರಲ್ಲಿ ನಿನ್ನೆಯಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಆಕೆಯ ಹೆರಿಗೆ ಸುಲಭವಾಗಿರಲಿಲ್ಲ ಎಂದು ತಿಳಿದುಬಂದಿದೆ. ದರಿಯಾ ಮಗುವಿನ ಫೋಟೋವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ. ಅಲ್ಲದೆ, ವಿಶ್ರಾಂತಿ ಪಡೆಯುವಂತೆ ಆಕೆಗೆ ವೈದ್ಯರು ಸೂಚಿಸಿದ್ದಾರೆ. ಮಗು ಸುಮಾರು 8ಎಲ್ಬಿ (3 ಕೆ.ಜಿ) ತೂಕವಿದೆ ಎನ್ನಲಾಗಿದೆ.
ದರ್ಯಾ ಸಾಮಾಜಿಕ ಜಾಲತಾಣದಲ್ಲಿ ಬರೋಬ್ಬರಿ 351,000 ಹಿಂಬಾಲಕರನ್ನು ಹೊಂದಿದ್ದಾಳೆ. ಇದಕ್ಕೆ ಕಾರಣ ಆಕೆಯ ವಯೋಸಹಜವಲ್ಲದ ಗರ್ಭಾವಸ್ಥೆ. ಅಲ್ಲದೆ, 10 ವರ್ಷದ ಬಾಯ್ಫ್ರೆಂಡ್ ಇದಾನೆ ಎಂಬುದು ಆಕೆಗೆ ರಷ್ಯಾದಲ್ಲಿ ಪ್ರಖ್ಯಾತಿ ತಂದುಕೊಟ್ಟಿದೆ.
ಇನ್ನೊಂದೆಡೆ ದರ್ಯಾ 16 ವರ್ಷದ ಬಾಲಕನ ಅತ್ಯಾಚಾರದಿಂದ ಗರ್ಭಿಣಿಯಾಗಿದ್ದಾಳೆಂದು ನಂಬಲಾಗಿದೆ. ಇದನ್ನು ಒಪ್ಪಿಕೊಳ್ಳಲು ಮುಜುಗರ ಅನುಭವಿಸಬೇಕಾಗುತ್ತದೆ ಎಂಬ ಕಾರಣದಿಂದ 10 ವರ್ಷ ಬಾಯ್ಫ್ರೆಂಡ್ ತನ್ನ ಮಗುವಿನ ತಂದೆ ಎಂದು ಹೇಳಿಕೊಂಡಿದ್ದಾಳೆ ಎನ್ನಲಾಗಿದೆ.a
Comments are closed.