ಅಂತರಾಷ್ಟ್ರೀಯ

ಶ್ರೀಕೃಷ್ಣ ಜನ್ಮಾಷ್ಟಮಿಗೆ ಹಿಂದೂ ಸಮುದಾಯಕ್ಕೆ ಶುಭ ಕೋರಿದ ಬಾಂಗ್ಲಾದೇಶ ಅಧ್ಯಕ್ಷ ಅಬ್ದುಲ್ ಹಮೀದ್, ಪ್ರಧಾನಿ ಶೇಖ್ ಹಸೀನಾ

Pinterest LinkedIn Tumblr

ಢಾಕಾ: ಭಗವಾನ್ ಶ್ರೀ ಕೃಷ್ಣನ ಜನ್ಮದಿನವಾದ ಜನ್ಮಾಷ್ಟಮಿ ಸಂದರ್ಭದಲ್ಲಿ ಬಾಂಗ್ಲಾದೇಶ ಅಧ್ಯಕ್ಷ ಎಂಡಿ ಅಬ್ದುಲ್ ಹಮೀದ್ ಮತ್ತು ಪ್ರಧಾನಿ ಶೇಖ್ ಹಸೀನಾ ಮಂಗಳವಾರ ಪ್ರತ್ಯೇಕ ಸಂದೇಶಗಳಲ್ಲಿ ಹಿಂದೂ ಸಮುದಾಯಕ್ಕೆ ಶುಭ ಕೋರಿದ್ದಾರೆ.

ಈ ಸಂದರ್ಭದ ಮುನ್ನಾದಿನ ನೀಡಿರುವ ಸಂದೇಶವೊಂದರಲ್ಲಿ ಜನ್ಮಾಷ್ಟಮಿಯು ಹಿಂದೂ ಸಮುದಾಯದ ಪ್ರಮುಖ ಧಾರ್ಮಿಕ ಹಬ್ಬಗಳಲ್ಲಿ ಒಂದಾಗಿದೆ ಎಂದು ಅಧ್ಯಕ್ಷರು ಹೇಳಿದ್ದಾರೆ.

ಶ್ರೀ ಕೃಷ್ಣ ಮಾನವೀಯತೆ ಮತ್ತು ಸಮಾಜ ಸುಧಾರಣೆಯ ಸಂಕೇತವಾಗಿದ್ದು, ಜನರಲ್ಲಿ ನಿಜವಾದ ಪ್ರೀತಿ ಮತ್ತು ಸಾಮರಸ್ಯದ ಬಂಧವನ್ನು ರೂಪಿಸುವುದು, ಅನ್ಯಾಯ, ದಬ್ಬಾಳಿಕೆ, ಕಿರುಕುಳ ಮತ್ತು ಸಂಘರ್ಷಗಳನ್ನು ಸಮಾಜದಿಂದ ತೆಗೆದುಹಾಕುವುದು ಅವರ ಮುಖ್ಯ ತತ್ತ್ವವಾಗಿದೆ ಎಂದು ಹೇಳಿದ್ದಾರೆ.

ಭಗವಾನ್ ಶ್ರೀ ಕೃಷ್ಣನು ಧಾರ್ಮಿಕ ಮತ್ತು ಒಳ್ಳೆಯ ಜನರನ್ನು ರಕ್ಷಿಸಲು ಮತ್ತು ಜನರ ಪಾಪಗಳನ್ನು ಮತ್ತು ದುಷ್ಕೃತ್ಯಗಳನ್ನು ನಾಶಮಾಡಲು ಪ್ರತಿ ಯುಗದಲ್ಲಿಯೂ ಅವತಾವೆತ್ತುತ್ತಾನೆ ಎಂದು ಹಿಂದೂ ಧರ್ಮದಲ್ಲಿ ನಂಬಿಕೆಯಿದೆ. ಕೋಮು ಸಾಮರಸ್ಯ ನಮ್ಮ ದೊಡ್ಡ ಪರಂಪರೆಯಾಗಿದೆ. ನಮ್ಮ ಒಗ್ಗಟ್ಟಿನ ಪ್ರಯತ್ನಗಳೊಂದಿಗೆ ಪರಸ್ಪರ ಸೌಹಾರ್ದತೆ ಮತ್ತು ಸಾಮರಸ್ಯವನ್ನು ನಾವು ಹಾಗೇ ಉಳಿಸಿಕೊಳ್ಳಬೇಕಾಗುತ್ತದೆ ಎಂದು ಅಧ್ಯಕ್ಷರು ಹೇಳಿದ್ದಾರೆ.

ಮನುಕುಲದ ಕಲ್ಯಾಣವು ಎಲ್ಲಾ ಧರ್ಮಗಳ ಮೂಲತತ್ವವಾಗಿದೆ, ಸಮಾಜದಲ್ಲಿ ಅಸ್ತಿತ್ವದಲ್ಲಿರುವ ಭ್ರಾತೃತ್ವ ಮತ್ತು ಸ್ನೇಹ ಬಂಧವನ್ನು ಬಲಪಡಿಸುವ ಮೂಲಕ ರಾಷ್ಟ್ರೀಯ ಪ್ರಗತಿಗೆ ಒಟ್ಟಾಗಿ ಕೆಲಸ ಮಾಡುವಂತೆ ಎಲ್ಲಾ ಧಾರ್ಮಿಕ ಧರ್ಮಗಳ ಅನುಯಾಯಿಗಳಿಗೆ ಕರೆ ನೀಡಿದ್ದಾರೆ. ಪ್ರಧಾನಿ ಶೇಖ್ ಹಸೀನಾ ತಮ್ಮ ಸಂದೇಶದಲ್ಲಿ, ಶ್ರೀ ಕೃಷ್ಣ ತಮ್ಮ ಜೀವನದುದ್ದಕ್ಕೂ ಮಾನವೀಯತೆ ಮತ್ತು ನ್ಯಾಯಕ್ಕಾಗಿ ಶಾಂತಿ ಮತ್ತು ಪ್ರೀತಿಯ ಧ್ವಜವನ್ನು ಎತ್ತಿಹಿಡಿದಿದ್ದಾರೆ ಎಂದು ಹೇಳಿದ್ದಾರೆ.

ಬಾಂಗ್ಲಾದೇಶವು ಕೋಮು ಸೌಹಾರ್ದತೆಯ ದೇಶವಾಗಿದ್ದು, ಅಲ್ಲಿ ಎಲ್ಲಾ ಜಾತಿ ಮತ್ತು ಧರ್ಮದ ಜನರು ಯುಗಯುಗದಲ್ಲಿ ಸಾಮರಸ್ಯದಿಂದ ಬದುಕುತ್ತಿದ್ದಾರೆ. ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ಹರಡಿದ ಹಿನ್ನೆಲೆಯಲ್ಲಿ ಸಾಮಾಜಿಕ ದೂರವನ್ನು ಕಾಪಾಡಿಕೊಂಡು ಹಬ್ಬವನ್ನು ಆಚರಿಸಬೇಕೆಂದು ಅವರು ಎಲ್ಲರನ್ನು ಕೋರಿದ್ದು, ದೇಶದ ಎಲ್ಲ ನಾಗರಿಕರಿಗೆ ಸಂತೋಷ, ಶಾಂತಿ ಮತ್ತು ಕಲ್ಯಾಣವನ್ನು ಪ್ರಧಾನಿ ಹಾರೈಸಿದ್ದಾರೆ.

Comments are closed.