ಅಂತರಾಷ್ಟ್ರೀಯ

ಅಮೆರಿಕದಲ್ಲಿ ಜಾಗಿಂಗ್ ಮಾಡುತ್ತಿದ್ದ ಭಾರತೀಯ ಮೂಲದ ಸಂಶೋಧಕಿಯನ್ನು ಹತ್ಯೆ

Pinterest LinkedIn Tumblr

ವಾಷಿಂಗ್ಟನ್: ಜಾಗಿಂಗ್ ಮಾಡುತ್ತಿದ್ದ 43 ವರ್ಷದ ಭಾರತೀಯ ಮೂಲದ ಸಂಶೋಧಕಿಯನ್ನು ಹತ್ಯೆ ಮಾಡಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಈ ಬಗ್ಗೆ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.

ಟೆಕ್ಸಾಸ್ ರಾಜ್ಯದ ಪ್ಲ್ಯಾನೊ ನಗರದ ನಿವಾಸಿ ಶರ್ಮಿಷ್ಠಾ ಸೇನ್ ಆಗಸ್ಟ್ 1 ರಂದು ಚಿಶೋಮ್ ಟ್ರೈಲ್​ ಪಾರ್ಕ್ (Chisholm Trail Park)ಬಳಿ ಜಾಗಿಂಗ್ ಮಾಡುತ್ತಿದ್ದ ವೇಳೆ ಅವರ ಮೇಲೆ ಹಲ್ಲೆ ನಡೆಸಿ, ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ವತಃ ಅಥ್ಲೀಟ್ ಆಗಿದ್ದ ಜಾರ್ಖಂಡ್ ಮೂಲದ ಶರ್ಮಿಷ್ಠಾ ಶವವನ್ನು ಲೆಗೆಸಿ ಡ್ರೈವ್ ಬಳಿಯ ಕಾಲುವೆಯೊಂದರ ಬಳಿ ಹಾಕಲಾಗಿದ್ದು, ಅದನ್ನು ದಾರಿಹೋಕರು ಪತ್ತೆ ಹಚ್ಚಿ, ಪೊಲೀಸರಿಗೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ಶರ್ಮಿಷ್ಠಾಗೆ ಇಬ್ಬರು ಮಕ್ಕಳಿದ್ದು, ಒಬ್ಬರು ಫಾರ್ಮಸಿಸ್ಟ್ ಮತ್ತು ಸಂಶೋಧಕರಾಗಿ ಕೆಲಸ ಮಾಡುತ್ತಿರುವುದಾಗಿ ಫಾಕ್ಸ್ 4 ನ್ಯೂಸ್ ವರದಿ ಮಾಡಿದೆ. ಈ ಪ್ರಕರಣದಲ್ಲಿ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

Comments are closed.