ಅಂತರಾಷ್ಟ್ರೀಯ

30,000 ಸ್ವಯಂಸೇವಕರ ನೆರವಿನೊಂದಿಗೆ ವಿಶ್ವದ ಅತಿದೊಡ್ಡ ಕೋವಿಡ್-19 ಲಸಿಕೆ ಅಧ್ಯಯನ

Pinterest LinkedIn Tumblr


ವಾಷಿಂಗ್ಟನ್: 30 ಸಾವಿರ ಯೋಜಿತ ಸ್ವಯಂಸೇವಕರ ನೆರವಿನೊಂದಿಗೆ ಅಮೆರಿಕ ಸರ್ಕಾರದಿಂದ ವಿಶ್ವದ ಅತಿದೊಡ್ಡ ಕೋವಿಡ್ ಲಸಿಕೆ ಅಧ್ಯಯನವು ಸೋಮವಾರದಿಂದ ನಡೆಯುತ್ತಿದೆ.ಇವರಲ್ಲಿ ಅನೇಕ ಮಂದಿ ಅಂತಿಮ ಹಂತದ ಪರೀಕ್ಷೆಗೊಳಪಡುತ್ತಿದ್ದಾರೆ.

ರಾಷ್ಟ್ರೀಯ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಅಂಡ್ ಮಾಡರ್ನಾ ಇಂಕ್ ಅಭಿವೃದ್ಧಿಪಡಿಸಿರುವ ಪ್ರಾಯೋಗಿಕ ಲಸಿಕೆ ಬಗ್ಗೆ ಯಾವುದೇ ಖಾತ್ರಿಯಾಗಿಲ್ಲ. ಆದರೂ ನೈಜವಾಗಿ ರಕ್ಷಿಸಲಿದೆ ಎನ್ನಲಾಗುತ್ತಿದೆ.

ದುರಾದೃಷ್ಟವೆಂಬಂತೆ ಅಮೆರಿಕಾದಲ್ಲಿ ಹೆಚ್ಚಿನ ಪ್ರಮಾಣದ ಸೋಂಕು ತಗುಲಿದ್ದು, ಅದರ ಬಗ್ಗೆ ಉತ್ತರ ಪಡೆಯಬೇಕಾಗಿದೆ ಎಂದು ಎನ್ ಐಹೆಚ್ ನ ಡಾ. ಆಂಥೋನಿ ಫೌಸಿ ಇತ್ತೀಚಿಗೆ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದರು.

ಸವನ್ನಾ, ಜಾರ್ಜಿಯಾದಲ್ಲಿ ಲಸಿಕೆಯನ್ನು ಹಾಕಲಾಗಿದೆ. ಸೋಂಕಿನ ಪ್ರಮಾಣ ಹೆಚ್ಚಾಗಿರುವ ಇತರ ಏಳು ಡಜನ್ ಗೂ ಹೆಚ್ಚು ಪ್ರದೇಶಗಳಲ್ಲಿ ಪ್ರಯೋಗಿಕ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಮಾಡರ್ನಾ ತಿಳಿಸಿದೆ.

ಚೀನಾ ಮತ್ತು ಬ್ರಿಟನ್ ನ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸುತ್ತಿರುವ ಲಸಿಕೆ ಮೊದಲ ಹಂತದಲ್ಲಿದ್ದು, ಈ ತಿಂಗಳ ಆರಂಭದಲ್ಲಿ ಭ್ರಜಿಲ್ ಮತ್ತು ಮತ್ತಿತರ ಸೋಂಕು ಪೀಡಿತ ರಾಷ್ಟ್ರಗಳಲ್ಲಿ ಸಣ್ಣ ರೀತಿಯ ಪ್ರಯೋಗಿಕ ಪರೀಕ್ಷೆ ನಡೆಸಲಾಗಿದೆ. ಆದರೆ, ಅಮೆರಿಕ ದೇಶದಲ್ಲಿ ಬಳಸಬಹುದಾದ ಯಾವುದೇ ಲಸಿಕೆಯ ಬಗ್ಗೆ ತನ್ನದೇ ಆದ ಪರೀಕ್ಷೆಗಳನ್ನು ಬಯಸುತ್ತದೆ. ಕೋವಿಡ್-19 ನಿಯಂತ್ರಣಕ್ಕಾಗಿ ಪ್ರತಿ ತಿಂಗಳ ಸರ್ಕಾರದ ಅನುದಾನದ ಮೂಲಕ ಸ್ವಯಂ ಸೇವಕರನ್ನು ನೇಮಿಸಿಕೊಳ್ಳುತ್ತಿದೆ.

ಬೃಹತ್ ಅಧ್ಯಯನ ಕೇಲ ಪರೀಕ್ಷೆ ಮಾತ್ರವಲ್ಲ, ಈ ಕಾರ್ಯದಲ್ಲಿ ಲಸಿಕೆಯ ಸುರಕ್ಷತೆಯನ್ನು ಪರಿಶೀಲಿಸಲಾಗುತ್ತದೆ.
ಅಕ್ಸ್ ಫರ್ಡ್ ವಿವಿ ಲಸಿಕೆ ಮೇಲಿನ ಅಂತಿಮ ಪರೀಕ್ಷೆ ಆಗಸ್ಟ್ ನಲ್ಲಿ , ಸೆಪ್ಟೆಂಬರ್ ನಲ್ಲಿ ಜಾನ್ಸನ್ ಅಂಡ್ ಜಾನ್ಸನ್ ಮತ್ತುಅಕ್ಟೋಬರ್ ನಲ್ಲಿ ನೋವಾವಾಕ್ಸ್ ಪರೀಕ್ಷೆಗಳು ನಡೆಯಲಿವೆ. ಫಿಜರ್ ಇಂಕ್ ತನ್ನದೇ ಆದ 30 ಸಾವಿರ ಸ್ವಯಂ ಸೇವಕರ ಮೇಲೆ ಪರೀಕ್ಷೆ ನಡೆಸಲು ಯೋಜನೆ ಹಾಕಿಕೊಂಡಿದೆ.

Comments are closed.