ಅಂತರಾಷ್ಟ್ರೀಯ

ಜಪಾನಿನಲ್ಲಿ ಬೆಳೆಯುವ ವಿಶೇಷ ಕೆಂಪು ದ್ರಾಕ್ಷಿಯ ಒಂದು ಗೊಂಚಲಿಗೆ ಬೆಲೆ ಕೇಳಿದ್ರೆ ಖಂಡಿತಾ ಶಾಕ್ ಆಗ್ತೀರಾ….

Pinterest LinkedIn Tumblr

ಟೊಕಿಯೋ: ಸಾಮಾನ್ಯವಾಗಿ ಇಂದು ಕೆಜಿ ದ್ರಾಕ್ಷಿ 40 ರಿಂದ 50 ರೂ.ಗೆ ಸಿಗುತ್ತೆ. ದುಬಾರಿ ದಿನಗಳಲ್ಲಿ 100 ರೂ. ವರೆಗೂ ಏರಿಕೆ ಆಗಿರುತ್ತದೆ. ಆದ್ರೆ ಜಪಾನಿನಲ್ಲಿ ಬೆಳೆಯುವ ವಿಶೇಷ ಕೆಂಪು ದ್ರಾಕ್ಷಿಯ ಒಂದು ಗೊಂಚಲಿಗೆ ಅಲ್ಲಿಯ ಜನ 7.5 ಲಕ್ಷ ರೂ. ನೀಡಿ ಖರೀದಿಸುತ್ತಾರೆ. ಬೆಲೆ ಹೆಚ್ಚಾಗಿರುವದರಿಂದ ಇದನ್ನು ಶ್ರೀಮಂತರ ದ್ರಾಕ್ಷಿ ಎಂದು ಕರೆಯಲಾಗುತ್ತದೆ. ಒಂದು ಗೊಂಚಲಿನಲ್ಲಿ 24 ದ್ರಾಕ್ಷಿಗಳು ಇರುತ್ತವೆ.

ಈ ದ್ರಾಕ್ಷಿ ಹೆಸರು ರೂಬಿ ರೋಮನ್. ಚೀನಾ ಮತ್ತು ರಷ್ಯಾಗಳಲ್ಲಿ ಈ ದ್ರಾಕ್ಷಿಯನ್ನು ಹೆಚ್ಚು ಬಳಕೆ ಮಾಡಲಾಗುತ್ತದೆ. ಈ ದ್ರಾಕ್ಷಿ ರಸಪೂರಿತವಾಗಿದ್ದು, ಒಂದು ಬೈಟ್ ನಲ್ಲಿ ನಿಮ್ಮ ಬಾಯಿ ಸಂಪೂರ್ಣವಾಗಿ ಸಿಹಿ ರಸದಿಂದ ಕೂಡಿರುತ್ತದೆ. ಜಪಾನ್ ಗಳಲ್ಲಿ ರೂಬಿ ರೋಮನ್ ದ್ರಾಕ್ಷಿಗಳನ್ನು ಬೆಳೆಯಲಾಗುತ್ತದೆ. ಶುಭ ಸಮಾರಂಭಗಳಲ್ಲಿ ಆಪ್ತರಿಗೆ ಉಡುಗೊರೆಯಾಗಿ ನೀಡಲು ಈ ದ್ರಾಕ್ಷಿಯ ಬಳಕೆಯಾಗಿತ್ತದೆ.

1995ರಲ್ಲಿ ಈ ಹೊಸ ಜಾತಿಯ ದ್ರಾಕ್ಷಿಯನ್ನು ಜಪಾನಿನ ಇಶಿಕಿವಾದಲ್ಲಿ ಮೊದಲ ಬಾರಿಗೆ ಬೆಳೆಯಲಾಯ್ತು. ಹೊಸ ತಳಿಯ ಸೃಷ್ಟಿಗಾಗಿ ಪ್ರಿಫ್ರಕ್ಚೂರಲ್ ಅಗ್ರಿಕಲ್ಚರ್ ರಿಸರ್ಚ್ ಸೆಂಟರ್ ರೈತರಿಗೆ ಮನವಿ ಮಾಡಿತ್ತು. ಸುಮಾರು 400 ತಳಿಯ ಮಾದರಿಯಲ್ಲಿ ಒಂದು ವರ್ಷ ಸಂಶೋಧನೆ ಮಾಡಲಾಗಿತ್ತು. 400 ತಳಿಯಲ್ಲಿ ಕೇವಲ 4 ಮಾದರಿಯ ಸಸಿಗಳಲ್ಲಿ ದ್ರಾಕ್ಷಿ ಹಣ್ಣುಗಳು ಬಂದಿದ್ದವು. ಈ ನಾಲ್ಕರಲ್ಲಿ ಒಂದು ತಳಿಯ ದ್ರಾಕ್ಷಿ ಹಣ್ಣು ರುಚಿಯಾಗಿತ್ತು.

ರೂಬಿ ರೋಮನ್, ಕೆಂಪು ದ್ರಾಕ್ಷಿ, ಶ್ರೀಮಂತರ ದ್ರಾಕ್ಷಿ ಮತ್ತು ಇಶಿಕಿವಾದ ದಾಸ್ತಾನು ಅಂತ ಭಿನ್ನ ಭಿನ್ನ ಹೆಸರುಗಳಿಂದಲೂ ಕರೆಯಲಾಗುತ್ತದೆ. ಒಂದು ದ್ರಾಕ್ಷಿ ಸುಮಾರು 20 ಗ್ರಾಂ ತೂಕವನ್ನು ಹೊಂದಿದ್ದು, ಒಂದು ಗೊಂಚಲಿನಲ್ಲಿ 24 ಹಣ್ಣುಗಳಿರುತ್ತವೆ.

Comments are closed.