ಅಂತರಾಷ್ಟ್ರೀಯ

ಕೋವಿಡ್ 19 ಬೆನ್ನಲ್ಲೇ ಚೀನಾದಲ್ಲಿ ಬಬೂನಿಕ್ ಪ್ಲೇಗ್; ಲಕ್ಷಣಗಳೇನು, ತಡೆಗಟ್ಟುವುದು ಹೇಗೆ?

Pinterest LinkedIn Tumblr

ಜನರು ಕೊರೊನಾ ವೈರಸ್‌ನಿಂದ ತತ್ತರಿಸಿರುವಂತೆ ಚೀನಾದ ಮಂಗೋಲಿಯಾ ಪ್ರಾಂತ್ಯದಲ್ಲಿ ಬಬೂನಿಕ್‌ ಪ್ಲೇಗ್‌ ಎನ್ನುವ ಹೊಸ ರೋಗವು ಕಾಣಿಸಿಕೊಂಡಿದ್ದು, ಇದರ ಬಗ್ಗೆ ಅಲ್ಲಿನ ಆರೋಗ್ಯ ಅಧಿಕಾರಿಗಳು ಎಚ್ಚರಿಕೆ ಜಾರಿ ಮಾಡಿದ್ದು, ಜನರು 2020ರ ಡಿಸೆಂಬರ್ ತನಕ ಇದರ ಬಗ್ಗೆ ತುಂಬಾ ಎಚ್ಚರದಿಂದ ಇರುವಂತೆ ಮತ್ತು ಮುಂಗುಸಿ ಮಾಂಸವನ್ನು ತಿನ್ನದಂತೆ ಎಚ್ಚರಿಸಿದ್ದಾರೆ.

ಮೊದಲಿಗೆ ಕೊರೊನವೈರಸ್ ಬಗ್ಗೆ ಕೇಳಿ ಬಂದಿದ್ದು ಚೀನಾದ ವುಹಾನ್ ಪ್ರಾಂತ್ಯದಿಂದ. ಈಗ ಆ ವೈರಸ್ ವಿಶ್ವ ವ್ಯಾಪ್ತಿ ಹಬ್ಬಿದ್ದು ಲಕ್ಷಾಂತರ ಜನರು ಆ ವೈರಸ್‌ಗೆ ಬಲಿಯಾಗಿದ್ದಾರೆ.

ಮುಂಗುಸಿ ಮಾಂಸವನ್ನು ತಿಂದಂತಹ ಇಬ್ಬರು ಸೋದರರಲ್ಲಿ ಇದು ಕಾಣಿಸಿಕೊಂಡಿದ್ದು, ಅವರಿಗೆ ಪ್ರತ್ಯೇಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದು ಜನರಿಂದ ಜನರಿಗೆ ಹಬ್ಬುವ ಸಾಧ್ಯತೆಯು ಇರುವ ಕಾರಣದಿಂದಾಗಿ ಇವರಿಬ್ಬರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಲಾಗಿದೆ.

ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹಾಗೂ ಅದಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಏರುತ್ತಲೇ ಹೋಗುತ್ತಿದೆ. ಇದೀಗ ಸ್ವಲ್ಪ ದಿನಗಳ ಹಿಂದೆ ಚೀನಾದ ವಿಜ್ಞಾನಿಗಳು ಮತ್ತೊಂದು ಆಘಾತಕಾರಿ ವರದಿ ನೀಡಿದ್ದರು. ಚೀನಾದಲ್ಲಿ ಹಂದಿ ಜ್ವರ ಕಾಣಿಸಿಕೊಂಡಿದ್ದು ಅದರ ಸಾಂಕ್ರಾಮಿಕ ರೋಗವಾಗುವಂಥ ಶಕ್ತಿಯನ್ನು ಹೊಂದಿದೆ ಹಾಗೂ ಈಗಿರುವ H1N1 ಲಸಿಕೆಗಳು ಆ ವೈರಸ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಇದರ ಬಗ್ಗೆ ಮುನ್ನೆಚ್ಚರಿಕೆವಹಿಸಿ ತಡೆಗಟ್ಟಬೇಕಾಗಿದೆ ಎಂಬ ಎಚ್ಚರಿಕೆ ನೀಡಿದ್ದರು. ಇದೀಗ ಉತ್ತರ ಚೀನಾದ ಮೊಂಗೋಲಿಯಾದಲ್ಲಿ ಬಬೂನಿಕ್‌ ಪ್ಲೇಗ್ ಒಬ್ಬ ವ್ಯಕ್ತಿಗೆ ಬಂದಿದೆ ಎಂದು ದೃಢಪಟ್ಟಿದೆ.

ಬಬೂನಿಕ್‌ ಪ್ಲೇಗ್‌ ಸಾಮಾನ್ಯ ರೀತಿಯ ಪ್ಲೇಗ್ ಆಗಿದ್ದು, ಇದು ಬ್ಯಾಕ್ಟೀರಿಯಾದಿಂದ ಹರಡುತ್ತದೆ. ಮೂರು ರೀತಿಯ ಪ್ಲೇಗ್ ಗಳಿದ್ದು, ಇದರಲ್ಲಿ ಬಬೂನಿಕ್‌, ಸೆಪ್ಟಿಸೆಮಿಕ್ ಮತ್ತು ನ್ಯುಮೋನಿಕ್ ಎಂದು ಕರೆಯಲಾ ಗುತ್ತದೆ. ದೇಹ ಯಾವ ಭಾಗಕ್ಕೆ ಇದು ಬಂದಿದೆ ಎನ್ನುವುದರ ಮೇಲೆ ಇದನ್ನ ನಿರ್ಧರಿಸಲಾಗುತ್ತದೆ.

ಬಬೂನಿಕ್ ಪ್ಲೇಗ್ ಪ್ರತಿರೋಧಕ ವ್ಯವಸ್ಥೆಯ ಭಾಗವಾಗಿರುವಂತಹ ದುಗ್ದನಾಳದ ಮೇಲೆ ಪರಿಣಾಮ ಬೀರುವುದು. ಇದರಿಂದ ದುಗ್ದನಾಳದಲ್ಲಿ ಉರಿಯೂತವು ಕಾಣಿಸುವುದು. ಈ ಸೋಂಕಿಗೆ ತಕ್ಷಣವೇ ಚಿಕಿತ್ಸೆ ನೀಡದೆ ಇದ್ದರೆ ಮಾರಣಾಂತಿಕವಾಗಬಹುದು ಮತ್ತು ದೇಹದ ಇತರ ಭಾಗಗಳಿಗೆ ಕೂಡ ಹರಡಬಹುದು.

ಬ್ಲ್ಯಾಕ್ ಡೆತ್ ಎಂದು ಕರೆಯಲ್ಪಡುವ ಪ್ಲೇಗ್ ಎಂಬ ಮಹಾಮಾರಿ
ಇಡೀ ವಿಶ್ವ ಇದೀಗ ಕೊರೊನಾವೈರಸ್‌ನಿಮದ ತತ್ತರಿಸಿ ಹೋಗಿದೆ, ಇದೀಗ ಬ್ಲ್ಯಾಕ್ ಡೆತ್ ಎಂದು ಕರೆಯಲ್ಪಡುವ ಬಬೂನಿಕ್‌ ಪ್ಲೇಗ್ ಉತ್ತರ ಚೀನಾದಲ್ಲಿ ಒಬ್ಬರಿಗೆ ಬಂದಿದೆ ಎಂಬುವುದು ದೃಢಪಟ್ಟಿದೆ. ಭಾನುವಾರ ಬಯನ್ನೂರ್‌ನ ಆರೋಗ್ಯ ಸಮಿತಿ ಎಚ್ಚರಿಕೆ ನೀಡಿದ್ದು ಇದರ ಅಪಾಯ 2020ರ ಕೊನೆಯವರೆಗೂ ಇರಲಿದೆ ಎಂದಿದೆ.

ಬಬೂನಿಕ್‌ ಪ್ಲೇಗ್ ಎಂದರೇನು?

ಬಬೂನಿಕ್‌ ಪ್ಲೇಗ್ ಎನ್ನುವುದು ಒಂದು ಬಗೆಯ ಪ್ಲೇಗ್ ರೋಗವಾಗಿದ್ದು ಇದು ಬ್ಯಾಕ್ಟಿರಿಯಾಗಳಿಂದ ಉಂಟಾಗುತ್ತದೆ. ಪ್ಲೇಗ್‌ನಲ್ಲಿ ಮುಖ್ಯವಾಗಿ ಬಬೂನಿಕ್‌ ಪ್ಲೇಗ್, ಸೆಪ್ಟಿಸೆಮಿಕ್, ನ್ಯೂಮೋನಿಕ್ ಎಂಬ 3 ಬಗೆಗಳಿಗೆ. ಪ್ಲೇಗ್ ದೇಹದ ಯಾವ ಭಾಗಗಳಿಗೆ ಬಾಧಿಸುತ್ತದೆಯೋ ಅದರ ಆಧಾರದ ಮೇಲೆ ಪ್ಲೇಗ್‌ ಯಾವ ಬಗೆಯದು ಎಂದು ಹೇಳಲಾಗುವುದು. ಬಬೂನಿಕ್‌ ಪ್ಲೇಗ್ ದುಗ್ಧರಸದ ಮೇಲೆ ಪ್ರಭಾವ ಬೀರಿ ರೋಗ ನಿರೋಧಕ ಶಕ್ತಿ ಕುಗ್ಗಿಸುತ್ತದೆ. ಇದು ಭಯಂಕರವಾಗಿದ್ದು ಸರಿಯಾಗಿ ಚಿಕಿತ್ಸೆ ಸಿಗದಿದ್ದರೆ ದೇಹದ ಇತರ ಭಾಗಗಳಿಗೂ ಸುಲಭವಾಗಿ ಹರಡುತ್ತದೆ.

ಬಬೂನಿಕ್‌ ಪ್ಲೇಗ್ ಪ್ಲೇಗ್‌ನ ಲಕ್ಷಣಗಳು
ಚಳಿಜ್ವರ
ತಲೆನೋವು
ಸ್ನಾಯುಗಳಲ್ಲಿ ನೋವು
ತಲೆಸುತ್ತು
ಸುಸ್ತು
ದುಗ್ಧರಸಗಳಲ್ಲಿ ಊತ,
ಕುತ್ತಿಗೆ ಭಾಗದಲ್ಲಿ,
ಮೊಣಕೈ ಭಾಗದಲ್ಲಿ, ತೊಡೆಸಂದುಗಳಲ್ಲಿ ಊತ ಕಂಡು ಬರುವುದು.

ಬಬೂನಿಕ್‌ ಪ್ಲೇಗ್ ಹರಡುತ್ತದೆ
ಬಬೂನಿಕ್‌ ಪ್ಲೇಗ್ ಬ್ಯಾಕ್ಟಿರಿಯಾಗಳಿಂದ ಬರುವಂಥ ರೋಗವಾಗಿದ್ದು ಇದು ಕೀಟಗಳ ಮೂಲಕ ಹರಡುವುದು ಹಾಗೂ ಪ್ಲೇಗ್ ಇರುವ ಪ್ರಾಣಿಗಳ ಸಂಪರ್ಕದಿಂದ ಅಥವಾ ಅವುಗಳನ್ನು ತಿನ್ನುವುದರಿಂದ ಹರಡುವುದು.

ಬಬೂನಿಕ್‌ ಪ್ಲೇಗ್ ಗೆ ಚಿಕಿತ್ಸೆ ಹೇಗೆ?
ಇವುಗಳಿಗೆ ಪರಿಣಾಮಕಾರಿಯಾದ ಆ್ಯಂಟಿಬಯೋಟಿಕ್ ನೀಡಬೇಕು. ಪ್ಲೇಗ್‌ ಲಕ್ಷಣಗಳು ಕಂಡು ಬಂದರೆ ಆ ವ್ಯಕ್ತಿಯನ್ನು ಕೂಡಲೇ ಆಸ್ಪತ್ರೆ ದಾಖಲಿಸಬೇಕು, ಇದನ್ನು ಆರಂಭದಲ್ಲಿ ಗುರುತಿಸಿ ಚಿಕಿತ್ಸೆ ನೀಡಿದರೆ ಗುಣಪಡಿಸಬಹುದು. ಆದರೆ ರಕ್ತನಾಳಗಳಿಗೆ ಅಥವಾ ಶ್ವಾಸಕೋಶಕ್ಕೆ ಕಾಯಿಲೆ ಹರಡಿದರೆ ವ್ಯಕ್ತಿ 24 ಗಂಟೆಯೊಳಗಾಗಿ ಸಾವನ್ನಪ್ಪುತ್ತಾರೆ.

ಬಬೂನಿಕ್‌ ಪ್ಲೇಗ್ ಹೇಗೆ ತಡೆಗಟ್ಟಬಹುದು?
ಇದುವರೆಗೆ ಸೂಕ್ತವಾದ ಲಸಿಕೆ ಈ ರೋಗಕ್ಕೆ ಕಂಡು ಹಿಡಿದಿಲ್ಲ. ಪ್ಲೇಗ್ ರೋಗ ತಡೆಗಟ್ಟಲು ಹಾಗೂ ಇದರ ಅಪಾಯ ತಗ್ಗಿಸಲು ಮಾರ್ಗಗಳಿವೆ, ಸೂಕ್ತ ಮುನ್ನೆಚ್ಚರಿಕೆ ವಹಿಸಿದರೆ ಪ್ಲೇಗ್ ರೋಗ ಹರಡದಂತೆ ತಡೆಗಟ್ಟಬಹುದಾಗಿದೆ. ಪ್ಲೇಗ್‌ ಬಾರದಂತೆ ತಡೆಗಟ್ಟಲು ಮಾಡಬೇಕಾಗಿರುವುದು…

-ಇಲಿ, ಹೆಗ್ಗಣ ಇವುಗಳು ಸೇರದಂತೆ ನಿಮ್ಮ ಮನೆ, ಅಫೀಸ್‌ನಲ್ಲಿ ಎಚ್ಚರಿಕೆವಹಿಸಬೇಕು.
-ಸಾಕು ಪ್ರಾಣಿಗಳ ಮೇಲೆ ಜಿಗಟ, ನೊಣ, ಕೀಟಗಳು ಕೂರದಂತೆ ಅವುಗಳನ್ನು ಸ್ವಚ್ಛವಾಗಿಡಬೇಕು
-ಕಾಯಿಲೆ ಬಿದ್ದ ಪ್ರಾಣಿಗಳ ಆರೈಕೆ ಮಾಡುವಾಗ ಗ್ಲೌಸ್ ಧರಿಸಬೇಕು, ನಿಮ್ಮ ತ್ವಚೆಗೆ ಅವುಗಳ ಗಾಯ ಅಥವಾ ಆ ಪ್ರಾಣಿಗಳ ಶರೀರದ ರಕ್ತ ಅಥವಾ ದ್ರವ ತಾಗದಂತೆ ಎಚ್ಚರಿಕೆವಹಿಸಬೇಕು.
-ಕೀಟಗಳು ಕಚ್ಚದಂತೆ ತುಂಬು ತೋಳಿನ ಬಟ್ಟೆ ಧರಿಸಿ ಹಾಗೂ ಮನೆಗೆ ಕೇಟಗಳು, ನೊಣಗಳು ಬಾರದಂತೆ ಸ್ಪ್ರೇ ಮಾಡಿ.

Comments are closed.