ಅಂತರಾಷ್ಟ್ರೀಯ

ಮಹಾಮಾರಿ ಕೊರೋನಾಗೆ ಕಂಗಾಲಾದ ಅಮೆರಿಕಾ; ಒಂದೇ ದಿನ ಬರೋಬ್ಬರಿ 53,000 ಮಂದಿಯಲ್ಲಿ ಸೋಂಕು ಪತ್ತೆ

Pinterest LinkedIn Tumblr

ವಾಷಿಂಗ್ಟನ್; ಮಹಾಮಾರಿ ಕೊರೋನಾಗೆ ವಿಶ್ವದ ದೊಡ್ಡಣ್ಣ ಅಮೆರಿಕಾ ಕಂಗಾಲಾಗಿದ್ದು, ಒಂದೇ ದಿನ ರಾಷ್ಟ್ರದಲ್ಲಿ ಬರೋಬ್ಬರಿ 53,000 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಇದು ಒಂದು ದಿನದಲ್ಲಿ ವಿಶ್ವದ ಯಾವುದೇ ದೇಶದಲ್ಲಿ ಬೆಳಕಿಗೆ ಬಂದ ಅತೀ ಹೆಚ್ಚಿನ ಪ್ರಕರಣವಾಗಿದೆ. ನಾಗರೀಕರು ಮಾಸ್ಕ್ ಧರಿಸದೇ ಇರುವುದು ಹಾಗೂ ದೈಹಿಕ ಅಂತರ ಕಾಯ್ದುಕೊಳ್ಳದೇ ಇರುವುದು ಪ್ರಕರಣಗಳು ಹೆಚ್ಚಾಗಲು ಕಾರಣ ಎಂದು ಹೇಳಲಾಗಿದೆ.

ದೇಶದ ದಕ್ಷಿಣ ಹಾಗೂ ಪಶ್ಚಿಮ ಭಾಗದಲ್ಲಿ ಲಾಕ್’ಡೌನ್ ತೆರವಿನ ಬಳಿಕ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಅದರಲ್ಲೂ ಇದೀಗ ಯುವ ವಯಸ್ಕರಲ್ಲೇ ಹೆಚ್ಚಿನ ಕೇಸು ದಾಖಲಾಗುತ್ತಿದೆ. ಇದುವರೆಗೆ ಅಮೆರಿಕಾದಲ್ಲಿ 27.81 ಲಕ್ಷ ಸೋಂಕಿತರು ಪತ್ತೆಯಾಗಿದ್ದು, 1.30 ಲಕ್ಷ ಜನರು ಸಾವನ್ನಪ್ಪಿದ್ದಾರೆ.

Comments are closed.