ವಾಷಿಂಗ್ಟನ್: ಮಹತ್ವದ ಬೆಳವಣಿಗೆಯೊಂದರಲ್ಲಿ ಪೆಸಿಫಿಕ್ ಮಹಾಸಾಗರಕ್ಕೆ ಅಮೆರಿಕ ನೌಕಾಸೇನೆ ತನ್ನ ಮೂರು ಅಣ್ವಸ್ತ್ರ ಯುದ್ಧ ಹಡಗುಗಳನ್ನು ರವಾನಿಸಿದೆ.
ತನ್ನ 11 ಅಣ್ವಸ್ತ್ರ ಯುದ್ಧ ಹಡಗುಗಳ ಪೈಕಿ ಮೂರು ಹಡಗುಗಳನ್ನು ಅಮೆರಿಕ ಪೆಸಿಫಿಕ್ ಮಹಾಸಾಗರಕ್ಕೆ ರವಾನಿಸಿರುವುದು ಜಾಗತಿಕವಾಗಿ ತೀವ್ರ ಕುತೂಹಲ ಮೂಡಿಸಿದೆ.
ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ಅಮೆರಿಕ ನೌಕಾಸೇನೆ, ವಿಶ್ವ ರಾಜಕೀಯ ಬೆಳವಣಿಗೆಗಳಿಗೆ ಪ್ರತತ್ಯುತ್ತರವಾಗಿ ಅಣ್ವಸ್ತ್ರ ಯುದ್ಧ ಹಡಗುಗಳನ್ನು ರವಾನಿಸಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಅಮೆರಿಕ ನೌಕಾಸೇನೆಯ ಏಳನೇ ಫ್ಲೀಟ್‌ನ ವಕ್ತಾರ ಕಮಾಂಡರ್ ರಿಯಾನ್ ಮಾಮ್ಸೆನ್, ಯಾವುದೇ ವಿಶ್ವ ರಾಜಕೀಯ ಬೆಳವಣಿಗೆಗಳಿಗೆ ಪ್ರತ್ಯುತ್ತರವಾಗಿ ಅಣ್ವಸ್ತ್ರ ಯುದ್ಧ ಹಡಗುಗಳನ್ನು ರವಾನಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪೆಸಿಫಿಕ್ ಮಹಾಸಾಗರದಲ್ಲಿ ಅಮೆರಿಕ ನೌಕಾಸೇನೆಯ ಉಪಸ್ಥಿತಿ ಮತ್ತು ಯುದ್ಧ ಹಡಗುಗಳ ರವಾನೆ ನಿರಂತರ ಚಟುವಟಿಕೆ ಎಂದಿರುವ ಕಮಾಂಡರ್ ರಿಯಾನ್ ಮಾಮ್ಸೆನ್, ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದು ಮನವಿ ಮಾಡಿದ್ದಾರೆ.
ಭಾರತ-ಚೀನಾ ಗಡಿ ಘರ್ಷಣೆ ಬಳಿಕ ನಿರ್ಮಾಣವಾಗಿರುವ ಯುದ್ಧದ ಆತಂಕದ ನಡುವೆಯೇ ಅಮೆರಿಕ ನೌಕಾಸೇನೆ ತನ್ನ ಮೂರು ಅಣ್ವಸ್ತ್ರ ಯುದ್ಧ ಹಡಗುಗಳನ್ನು ಪೆಸಿಫಿಕ್ ಮಹಾಸಾಗರಕ್ಕೆ ರವಾನಿಸಿದ್ದು ಭಾರೀ ಕುತೂಹಲ ಮೂಡಿಸಿತ್ತು. ಆದರೆ ಅಮೆರಿಕ ಈ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದೆ.
Comments are closed.