ಅಂತರಾಷ್ಟ್ರೀಯ

ವಿಶ್ವ ಮಟ್ಟದಲ್ಲಿ 4 ಲಕ್ಷದ 25 ಸಾವಿರ ಮಂದಿಯನ್ನು ಬಲಿ ತೆಗೆದುಕೊಂಡಿರುವ ಕೊರೋನಾ ವೈರಸ್; 76 ಲಕ್ಷಕ್ಕೂ ಅಧಿಕ ಸೋಂಕಿತರು !

Pinterest LinkedIn Tumblr

ಪ್ಯಾರಿಸ್: ವಿಶ್ವ ಮಟ್ಟದಲ್ಲಿ 4 ಲಕ್ಷದ 25 ಸಾವಿರ ಮಂದಿಯನ್ನು ಬಲಿ ತೆಗೆದುಕೊಂಡಿರುವ ಕೊರೋನಾ ವೈರಸ್ ನ ಸೋಂಕಿತ ಪ್ರಕರಣಗಳು ಇದುವರೆಗೆ 76 ಲಕ್ಷದ 32 ಸಾವಿರದ 517 ಆಗಿದೆ. ಅವರಲ್ಲಿ 4 ಲಕ್ಷದ 25 ಸಾವಿರದ 282 ಮಂದಿ ಮೃತಪಟ್ಟಿದ್ದಾರೆ ಎಂದು ಎಎಫ್ ಸಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಯುರೋಪ್ ಖಂಡದಲ್ಲಿ 1 ಲಕ್ಷದ 86 ಸಾವಿರದ 843 ಸಾವು ಸಂಭವಿಸಿದರೆ ಇಲ್ಲಿ ಸೋಂಕಿತರ ಸಂಖ್ಯೆ 23 ಲಕ್ಷದ 63 ಸಾವಿರದ 538 ಆಗಿದೆ. ಲ್ಯಾಟಿನ್ ಅಮೆರಿಕದಲ್ಲಿ ಪ್ರಕರಣಗಳು ಅತಿ ಹೆಚ್ಚಾಗುತ್ತಿದ್ದು ಇಲ್ಲಿ ಇದುವರೆಗೆ 76 ಸಾವಿರದ 343 ಮಂದಿ ಮೃತಪಟ್ಟಿದ್ದಾರೆ. ಸೋಂಕಿತರ ಸಂಖ್ಯೆ 15 ಲಕ್ಷದ 69 ಸಾವಿರದ 938 ಆಗಿದೆ.

ಅಮೆರಿಕದಲ್ಲಿ ಇಲ್ಲಿಯವರೆಗೆ ಕೊರೋನಾದಿಂದ ಹೆಚ್ಚು ಸಾವು ಸಂಭವಿಸಿದ್ದು 1 ಲಕ್ಷದ 14 ಸಾವಿರದ 643 ಮಂದಿ ಮೃತಪಟ್ಟಿದ್ದಾರೆ.

ನಂತರದ ಸ್ಥಾನದಲ್ಲಿ ಬ್ರೆಜಿಲ್ ದೇಶವಿದೆ. ಇಲ್ಲಿ ಕೊರೋನಾ ಸೋಂಕಿಗೆ ಮೃತಪಟ್ಟವರ ಸಂಖ್ಯೆ 41 ಸಾವಿರದ 828. ಬ್ರಿಟನ್ ಮೂರನೇ ಸ್ಥಾನದಲ್ಲಿದ್ದು 41 ಸಾವಿರದ 481 ಮಂದಿ ಮೃತಪಟ್ಟಿದ್ದಾರೆ. ನಂತರದ ಸ್ಥಾನಗಳಲ್ಲಿ ಇಟಲಿ(34 ಸಾವಿರದ 223 ಸಾವಿನ ಸಂಖ್ಯೆ) ಮತ್ತು ಫ್ರಾನ್ಸ್ (29 ಸಾವಿರದ 374)ಗಳಿವೆ.

Comments are closed.