ಅಂತರಾಷ್ಟ್ರೀಯ

ಪತ್ರಕರ್ತರ ಮೇಲೆ ಸಿಡಿಮಿಡಿಗೊಂಡು ಸುದ್ದಿಗೋಷ್ಠಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ, ಶ್ವೇತಭವನದಿಂದ ಹೊರನಡೆದ ಟ್ರಂಪ್

Pinterest LinkedIn Tumblr

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುದ್ದಿಗೋಷ್ಠಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ, ಪತ್ರಕರ್ತರ ಮೇಲೆ ಸಿಡಿಮಿಡಿಗೊಂಡು ಶ್ವೇತಭವನದಿಂದ ತೆರಳಿದ ಘಟನೆ ತಡವಾಗಿ ವರದಿಯಾಗಿದೆ.

ಸಿಬಿಎಸ್ ನ್ಯೂಸ್ನ ವರದಿಗಾರ ಕರೋನ ದೇಶದಲ್ಲಿ ಹೆಚ್ಚಾಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಸಿಡಿಮಿಡಿಗೊಂಡ ಅಧ್ಯಕ್ಷ ಟ್ರಂಪ್ ಪ್ರತಿಕ್ರಿಯಿಸಿ ಬಹುಶಃ ನೀವು ಇದನ್ನು ಚೀನಾದ ಬಳಿಯೇ ಈ ರೀತಿಯ ಪ್ರಶ್ನೆ ಕೇಳಬೇಕು ಎಂದು ಖಾರವಾಗಿಯೇ ಉತ್ತರಿಸಿದರು.

ಅವರಿಗೆ ಸಮರ್ಪಕ ಉತ್ತರ ಸಿಗದ ಕಾರಣ ಸರ್ ನೀವು ಇದನ್ನು ನನಗೇಕೆ ಹೇಳುತ್ತೀರಿ ಎಂದರು. ಹೌದು ನಿಮಗೇ ಹೇಳುತ್ತಿರುವುದುಏಕೆಂದರೆ ನೀವು ನಿನಗೆ ಬೊಟ್ಟು ಮಾಡಿ ತೋರಿಸಿ .ಕಿರಿಕಿರಿ ಉಂಟು ಮಾಡುತ್ತಿದ್ದೀರಿ ನನಗೆ ಕಿರಿಕಿರಿ ಮಾಡಿ ಯಾರೇ ,ಈ ರೀತಿ ಪ್ರಶ್ನೆ ಕೇಳಿದರೂ ನನ್ನ ಉತ್ತರ ಇದೆ ರೀತಿ, ಹೀಗೆಯೆ ಇರಲಿದೆ ಎಂದು ಟ್ರಂಪ್ ಹೇಳಿ ಇನ್ನೂ ಅನೇಕ ಪ್ರಶ್ನೆಗಳು ಮುಗಿಯುವ ಮುನ್ನವೇ ಥ್ಯಾಂಕ್ಯೂ ವೆರಿಮಚ್ ಎಂದು ರೋಸ್ ಗಾರ್ಡನ್ನಿಂದ ಹಠಾತ್ತನೆ ನಿರ್ಗಮಿಸಿದರು.

Comments are closed.