ಅಂತರಾಷ್ಟ್ರೀಯ

ಚೀನಾದಲ್ಲಿ ಸದ್ದಿಲ್ಲದೇ ಕೊರೋನಾ ವೈರಸ್ ವಿರುದ್ಧದ ಲಸಿಕೆಯ ಪ್ರಯೋಗ ಯಶಸ್ವಿ

Pinterest LinkedIn Tumblr

ಬೀಜಿಂಗ್: ಕೊರೋನಾ ವೈರಸ್ ವಿರುದ್ಧ ಲಸಿಕೆ ಸಿದ್ಧಪಡಿಸಲು ಇಡೀ ಪ್ರಪಂಚವೇ ಹೆಣಗುತ್ತಿದೆ. ಆದರೆ ಚೀನಾ ಮಾತ್ರ ಸದ್ದಿಲ್ಲದೇ ಕೊರೋನಾ ವೈರಸ್ ವಿರುದ್ಧದ ಲಸಿಕೆಯ ಪ್ರಯೋಗವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದೆ.

ವರದಿಗಳ ಪ್ರಕಾರ ಚೀನಾ ಮೊದಲ ಕೊರೋನಾ ಲಸಿಕೆ-PiCoVacc ಪ್ರಯೋಗವನ್ನು ಪ್ರಾಣಿಗಳ ಮೇಲೆ ನಡೆಸಲಾಗಿದೆ. ಮಂಗಗಳಿಗೆ ನೀಡಿರುವ ಈ ಲಸಿಕೆ ಪರಿಣಾಮಕಾರಿಯಾದ ಫಲಿತಾಂಶ ನೀಡಿದೆ ಎನ್ನಲಾಗುತ್ತಿದೆ. ಕೋವಿಡ್-19 ಲಸಿಕೆ PiCoVaccಯನ್ನು ಬೀಜಿಂಗ್ ಮೂಲದ ಸಿನೋವಾಕ್ ಬಯೋಟೆಕ್ ಅಭಿವೃದ್ಧಿಪಡಿಸಿದೆ.

ವಿಶಿಷ್ಟ ವಿಧಾನದ ಮೂಲಕ ಈ ಲಸಿಕೆಯನ್ನು ಕೊರೋನಾ ವೈರಸ್ ಸೋಂಕಿಗೆ ಕಂಡುಹಿಡಿಯಲಾಗಿದ್ದು, ದುರ್ಬಲಗೊಂಡ ಕೊರೋನಾ ವೈರಸ್ ನ್ನು ಪ್ರಾಣಿಗಳ ದೇಹಕ್ಕೆ ಸೇರಿಸಿ ಸಹಜವಾಗಿಯೇ ಕೊರೋನಾ ವಿರುದ್ಧ ಪ್ರತಿಕಾಯಗಳು ಸೃಷ್ಟಿಯಾಗುವಂತೆ ಮಾಡಲಾಗುತ್ತದೆ. ಈ ಪ್ರತಿಕಾಯಗಳು ಸಾಮಾನ್ಯ ವೈರಾಣುಗಳನ್ನೂ ಸಹ ಕೊಲ್ಲಲಿದೆ.

ಭಾರತದ ಮೂಲದ ರೀಸಸ್ ಮಕಾಕ್ ಎಂಬ ಪ್ರಬೇಧದ ಮಂಗಗಳ ಮೇಲೆ ಈ ಲಸಿಕೆಯನ್ನು ಚೀನಾ ಪ್ರಯೋಗಿಸಿ ಮೂರು ವಾರಗಳ ನಂತರ ಕೊರೋನಾ ವೈರಾಣು ಸೋಂಕು ತಗುಲುವಂತೆ ಮಾಡಿದೆ. ಹೆಚ್ಚು ಪ್ರಮಾಣದ ಲಸಿಕೆಯನ್ನು ನೀಡಿದ್ದ ಮಂಗಳಲ್ಲಿ ಕೊರೋನಾ ಕಂಡುಬಂದಿಲ್ಲ. ಲಸಿಕೆ ನೀಡದೇ ಇದ್ದ ಮಂಗಳಲ್ಲಿ ಕೊರೋನಾ ಉಲ್ಬಣಗೊಂಡಿದೆ. ಏಪ್ರಿಲ್ ಮಧ್ಯ ಭಾಗದಿಂದ ಈ ಲಸಿಕೆಯನ್ನು ಚೀನಾ ಮನುಷ್ಯರ ಮೇಲೆಯೂ ಪ್ರಯೋಗಿಸುತ್ತಿದ್ದು, ಕೋವಿಡ್ ತಡೆಗೆ ಇದು ಆಶಾದಾಯಕವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Comments are closed.