
ವಾಷಿಂಗ್ಟನ್: ಅಮೆರಿಕಾದಲ್ಲಿ ಕೊರೋನಾ ರಣಕೇಕೆ ಹಾಕುತ್ತಿದ್ದು, ಮಹಾಮಾರಿ ವೈರಸ್ ಒಂದೇ ದಿನ ಬರೋಬ್ಬರಿ 2,333 ಮಂದಿಯನ್ನು ಬಲಿಪಡೆದುಕೊಂಡಿದೆ.
ಈವರೆಗೂ ಅಮೆರಿಕಾದಲ್ಲಿ ಹೆಮ್ಮಾರಿಗೆ 71,022 ಮಂದಿ ಬಲಿಯಾಗಿದ್ದು ಸೋಮವಾರವಷ್ಟೇ ಅಮೆರಿಕಾದಲ್ಲಿ 1,015 ಮಂದಿ ಬಲಿಯಾಗಿದ್ದರು. ಇದು ಅಮೆರಿಕಾದಲ್ಲಿ ದಾಖಲಾದ ಒಂದು ದಿನದ ಕನಿಷ್ಟ ಸೋಂಕಿತರ ಪ್ರಮಾಣವೆಂದೇ ಹೇಳಲಾಗಿತ್ತು.
ಅಮೆರಿಕಾ ರಾಷ್ಟ್ರದಲ್ಲಿ ವೈರಸ್ ನಿಯಂತ್ರಮಕ್ಕೆ ಬರುವ ಬೆಳವಣಿಗೆಗಳು ಕಂಡು ಬರುತ್ತಿದೆ ಎಂಬ ಭರವಸೆಗಳು ಜನರಲ್ಲಿ ಮೂಡುತ್ತಿರುವ ನಡುವಲ್ಲೇ ಇದೀಗ ಮತ್ತೆ ಅಮೆರಿಕಾದಲ್ಲಿ ಮಹಾಮಾರಿ 2,333 ಮಂದಿಯನ್ನು ಬಲಿ ಪಡೆದುಕೊಂಡಿದೆ. ಇದರಿಂದಾಗಿ ಅಲ್ಲಿನ ಜನತೆಯಲ್ಲಿ ವೈರಸ್ ಕುರಿತ ಆತಂಕ ಮತ್ತಷ್ಟು ಹೆಚ್ಚಾಗಿದೆ.
Comments are closed.