ಅಂತರಾಷ್ಟ್ರೀಯ

ಸಿಂಗಾಪುರ್​​ನಲ್ಲಿ 4,800 ಭಾರತೀಯರಿಗೆ ಕೊರೋನಾ ಸೋಂಕು

Pinterest LinkedIn Tumblr


ಸಿಂಗಾಪುರ(ಮೇ.04): ಸಿಂಗಾಪುರ್​​ನಲ್ಲಿ 4,800 ಮಂದಿ ಭಾರತೀಯರಿಗೆ ಕೊರೋನಾ ಬಂದಿದೆ ಎಂದು ತಿಳಿದು ಬಂದಿದೆ. ಇದುವರೆಗೂ ನಮ್ಮ ದೇಶದಲ್ಲಿ 18,205 ಕೋವಿಡ್​​-19 ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 4,800 ಮಂದಿ ಭಾರತೀಯರು ಇದ್ಧಾರೆ ಎಂದು ಸಿಂಗಾಪುರ ಸಚಿವಾಲಯ ಹೇಳಿದೆ. ಜತೆಗೆ 18 ಒಟ್ಟು ಮಂದಿ ಸಾವನ್ನಪ್ಪಿದ್ದು, ಅದೃಷ್ಟವಶಾತ್​​ ಮೃತರಲ್ಲಿ ಭಾರತೀಯರು ಯಾರು ಇಲ್ಲ ಎಂದು ಸ್ಪಷ್ಟಪಡಿಸಿದೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿರುವ ಸಿಂಗಾಪುರ್‌ನಲ್ಲಿರುವ ಭಾರತೀಯ ರಾಯಭಾರಿ ಜವಾದ್ ಅಶ್ರಫ್, ಇಲ್ಲಿನ 4,800 ಮಂದಿ ಭಾರತೀಯರಿಗೆ ಸೋಂಕು ತಗುಲಿದೆ. ಈಗೀಗ ಎಲ್ಲರ ಆರೋಗ್ಯ ಸ್ಥಿತಿ ಸುಧಾರಿಸಿಕೊಳ್ಳುತ್ತಿದೆ. ವಿದ್ಯಾರ್ಥಿಗಳು ಸೇರಿದಂತೆ 3,500ಕ್ಕೂ ಹೆಚ್ಚು ಮಂದಿ ಸಿಂಗಾಪುರ್​​ನಿಂದ ಭಾರತಕ್ಕೆ ಬರಲು ನಮ್ಮ ಕಚೇರಿಯಲ್ಲಿ ಹೆಸರು ನೋಂದಣಿ ಮಾಡಿದ್ದಾರೆ ಎಂದರು.

ಜಗತ್ತಿನಲ್ಲಿ ಕೋವಿಡ್ ರೋಗದಿಂದ ಸಾವಿಗೀಡಾದವರ ಸಂಖ್ಯೆ 247630 ಆಗಿದೆ. ಈ ಪೈಕಿ ಇಟಲಿಯಲ್ಲಿ 28,884 ಮತ್ತು ಬ್ರಿಟನ್‌ನಲ್ಲಿ 28446 ಸಾವು ಸಂಭವಿಸಿದೆ.

ದೇಶದಲ್ಲಿ ಕಳೆದ 24 ಗಂಟೆಯಲ್ಲಿ 1,074 ಮಂದಿ ಕೊರೋನಾ ಸೋಂಕಿನಿಂದ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗಿದ್ದಾರೆ. ಈವರೆಗೂ 11,706 ಸೋಂಕಿಯರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಇದರೊಂದಿಗೆ ಮಾರಕ ಸೋಂಕಿನಿಂದ ಗುಣವಾಗುವ ಪ್ರಮಾಣ ಶೇ.27.52ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಒಟ್ಟು 42,533 ಪ್ರಕರಣಗಳು ಈವರೆಗೆ ದಾಖಲಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ ಲವ ಅಗರವಾಲ್ ಮಾಹಿತಿ ನೀಡಿದ್ದಾರೆ.

Comments are closed.