ಅಂತರಾಷ್ಟ್ರೀಯ

ಅಮೆರಿಕಾದಲ್ಲಿ ಭಾರತೀಯ ಮೂಲದ ದಂಪತಿಯ ನಿಗೂಢ ಹತ್ಯೆ !

Pinterest LinkedIn Tumblr

ನ್ಯೂಯಾರ್ಕ್: ಭಾರತ ಮೂಲದ ಗಂಡಹೆಂಡತಿ ನ್ಯೂಯಾರ್ಕ್​ನಲ್ಲಿ ವಾಸವಾಗಿದ್ದರು. ನಿನ್ನೆ ಅವರಿಬ್ಬರೂ ನಿಗೂಢವಾಗಿ ಸಾವನ್ನಪ್ಪಿದ್ದು, ಹೆಂಡತಿ ಅಪಾರ್ಟ್​ಮೆಂಟ್​ನಲ್ಲಿ ಕೊಲೆಯಾಗಿದ್ದಾರೆ. ಹಾಗೇ, ಗಂಡ ಅಪಾರ್ಟ್​ಮೆಂಟ್​ ಸಮೀಪದ ಬಳಿಯ ನದಿಯಲ್ಲಿ ಹೆಣವಾಗಿ ಪತ್ತೆಯಾಗಿದ್ದಾರೆ.

35 ವರ್ಷದ ಭಾರತ ಮೂಲದ ಗರೀಮಾ ಕೊಠಾರಿ ಅವರನ್ನು ಅಪಾರ್ಟ್​ಮೆಂಟ್​ನಲ್ಲಿ ಕೊಲೆ ಮಾಡಲಾಗಿದೆ. ಆಕೆ ಸಾಯುವಾಗ 5 ತಿಂಗಳ ಗರ್ಭಿಣಿಯಾಗಿದ್ದರು ಎಂದು ವೈದ್ಯಕೀಯ ವರದಿಯಲ್ಲಿ ತಿಳಿದುಬಂದಿದೆ. ಆಕೆಯ ಗಂಡ 37 ವರ್ಷದ ಮೋಹನ್ ಲಾಲ್​ ನದಿಯಲ್ಲಿ ಹೆಣವಾಗಿ ಪತ್ತೆಯಾಗಿದ್ದಾರೆ. ಮೋಹನ್ ಲಾಲ್​ ಅವರೇ ಹೆಂಡತಿಯನ್ನು ಕೊಲೆ ಮಾಡಿ, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ. ಅಥವಾ ಯಾರೋ ದುಷ್ಕರ್ಮಿಗಳು ಇಬ್ಬರನ್ನೂ ಕೊಲೆ ಮಾಡಿ ಬೇರೆ ಬೇರೆ ಕಡೆ ಹೆಣವನ್ನು ಹಾಕಿರುವ ಸಾಧ್ಯತೆಯೂ ಇದೆ ಎಂದು ಇಂಡಿಯನ್ ಎಕ್ಸ್​ಪ್ರೆಸ್ ವರದಿ ಮಾಡಿದೆ.

5 ತಿಂಗಳ ಗರ್ಭಿಣಿಯಾಗಿದ್ದ ಗರೀಮಾ ಅವರ ದೇಹದ ಮೇಲೆ ಚಾಕುವಿನಿಂದ ಸಾಕಷ್ಟು ಬಾರಿ ಚುಚ್ಚಿ, ಹಿಂಸೆ ನೀಡಿ ಸಾಯಿಸಿರುವ ಗುರುತುಗಳು ಪತ್ತೆಯಾಗಿವೆ. ಇವರು ನ್ಯೂಯಾರ್ಕ್​ನ ರೆಸ್ಟೋರೆಂಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು.

ಇವರಿಬ್ಬರ ಸಾವಿಗೆ ನಿಖರ ಕಾರಣವೇನೆಂದು ತಿಳಿದುಬಂದಿಲ್ಲ. ಮೋಹನ್ ಲಾಲ್​ ಐಐಟಿಯಲ್ಲಿ ವ್ಯಾಸಂಗ ಮಾಡಿ ನ್ಯೂಯಾರ್ಕ್​ನಲ್ಲಿ ಕೆಲಸ ಮಾಡುತ್ತಿದ್ದರು. ಜೊತೆಗೆ ಕೊಲಂಬಿಯಾ ಯೂನಿವರ್ಸಿಟಿಯಲ್ಲಿ ಮಾಸ್ಟರ್​ ಡಿಗ್ರಿ ವಿದ್ಯಾಭ್ಯಾಸವನ್ನೂ ಮಾಡುತ್ತಿದ್ದರು. ಅವರ ಸಹೋದ್ಯೋಗಿಗಳ ಪ್ರಕಾರ ಮೋಹನ್ ಮತ್ತು ಗರೀಮಾ ಬಹಳ ಅನ್ಯೋನ್ಯವಾಗಿದ್ದರು. ಇಬ್ಬರೂ ಎಲ್ಲರೊಂದಿಗೆ ಬಹಳ ಆತ್ಮೀಯರಾಗಿರುತ್ತಿದ್ದರ. ಕೊಲೆಯ ಹಿಂದಿನ ರಹಸ್ಯ ಭೇದಿಸಲು ಅಲ್ಲಿನ ಸ್ಥಳೀಯರು ತನಿಖೆ ನಡೆಸುತ್ತಿದ್ದಾರೆ.

Comments are closed.