ಅಂತರಾಷ್ಟ್ರೀಯ

ಕೊರೋನಾದಿಂದ ಕಂಗೆಟ್ಟಿರುವ ಪಾಕ್‌ ಗೆ ಐಎಂಎಫ್ ನಿಂದ 1.39 ಬಿಲಿಯನ್ ಡಾಲರ್ ತುರ್ತು ಸಾಲ

Pinterest LinkedIn Tumblr


ಇಸ್ಲಾಮಾಬಾದ್: ಆರ್ಥಿಕ ದಿವಾಳಿತನಿಂದ ಕಂಗೆಟ್ಟಿರುವ ಪಾಕಿಸ್ತಾನ ಇದೀಗ ಕೊರೋನಾ ವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ 1. 39 ಬಿಲಿಯನ್ ಡಾಲರ್ ನಷ್ಟು ತುರ್ತು ಸಾಲವನ್ನು ಪಡೆದುಕೊಂಡಿದೆ

ಆದಾಯ ಅಸಮತೋಲನ ಸಮಸ್ಯೆಯಿಂದಾಗಿ 6 ಬಿಲಿಯನ್ ಡಾಲರ್ ಆರ್ಥಿಕ ನೆರವಿಗಾಗಿ ಕಳೆದ ವರ್ಷ ಜುಲೈ ತಿಂಗಳಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಸಹಿ ಹಾಕಿದ ಪಾಕಿಸ್ತಾನ ಇದೀಗ ಹೆಚ್ಚುವರಿಯಾಗಿ 1.39 ಬಿಲಿಯನ್ ನಷ್ಟು ಸಾಲವನ್ನು ಪಡೆದುಕೊಂಡಿದೆ.

ಕ್ಷಿಪ್ರ ಹಣಕಾಸು ಸಾಧನ- ಆರ್ ಪಿಐ ಅಡಿಯಲ್ಲಿ ಐಎಂಎಫ್ ನಿಂದ 1. 39 ಬಿಲಿಯನ್ ಡಾಲರ್ ನ್ನು ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ ಪಡೆದುಕೊಂಡಿರುವುದಾಗಿ ಸೆಂಟ್ರಲ್ ಬ್ಯಾಂಕ್ ಬುಧವಾರ ಟ್ವಿಟ್ ಮಾಡಿದೆ.

ಕೋವಿಡ್ -19ನಿಂದ ಆರ್ಥಿಕತೆ ಮೇಲೆ ತೀವ್ರ ರೀತಿಯ ಪರಿಣಾಮ ಬೀರಿದ್ದು, ಆರ್ ಪಿಐ ಅಡಿಯಲ್ಲಿ ತುರ್ತು ಸಾಲ ಬಿಡುಗಡೆ ಮಾಡುವಂತೆ ಮಾರ್ಚ್ ತಿಂಗಳಿನಲ್ಲಿ ಪಾಕಿಸ್ತಾನ ಐಎಂಎಫ್ ಬಳಿ ಮನವಿ ಮಾಡಿಕೊಂಡಿತ್ತು.

ಕೋವಿಡ್-19 ವಿರುದ್ಧದ ಹೋರಾಟಕ್ಕಾಗಿ ಪಾಕಿಸ್ತಾನಕ್ಕೆ ತುರ್ತು ಸಾಲ ಮಂಜೂರು ಮಾಡಲು ಐಎಂಎಫ್ ಕಾರ್ಯಾಕಾರಿ ಮಂಡಳಿ ಕಳೆದ ವಾರ ಅನುಮತಿ ನೀಡಿತ್ತು ಎಂದು ಐಎಂಎಫ್ ಇತ್ತೀಚಿಗೆ ಹೇಳಿಕೆಯಲ್ಲಿ ತಿಳಿಸಿತ್ತು.

Comments are closed.