ಮಾರಕ ಕೊರೋನಾ ವೈರಸ್ ಮಹಾಮಾರಿಗೆ ಈವರೆಗೂ ವಿಶ್ವದಾದ್ಯಂತ 1,70,000 ಜನರನ್ನು ಬಲಿ ಪಡೆದಿದೆ. ಇದರಲ್ಲಿ ಮೂರನೇ ಎರಡರಷ್ಟು ಮಂದಿ ಯುರೋಪ್ನವರೇ ಬಲಿಪಶುಗಳಾಗಿದ್ದಾರೆ ಎಂದು ಎಎಫ್ಪಿ ಮಂಗಳವಾರ ವರದಿ ಮಾಡಿದೆ.
ಜಗತ್ತಿನಾದ್ಯಂತ ಒಟ್ಟು 1,70,226 ಜನರು ಕೊರೋನಾ ವೈರಸ್ನಿಂದ ಮೃತಪಟ್ಟಿದ್ದಾರೆ. ಇದರಲ್ಲಿ ಯುರೋಪ್ನಲ್ಲಿಯೇ 1,06,737 ಜನರ ಅಸುನೀಗಿದ್ದಾರೆ. ಅಮೆರಿಕದಲ್ಲಿ 42,364 ಜನರು ಬಲಿಯಾಗಿದ್ದಾರೆ. ಇಟಲಿಯಲ್ಲಿ 24,114 ಹಾಗೂ ಸ್ಪೇನ್ನಲ್ಲಿ 21,282, ಫ್ರಾನ್ನಲ್ಲಿ 20,265 ಹಾಗೂ ಬ್ರಿಟನ್ನಲ್ಲಿ 16,509 ಜನರು ಈವರೆಗೂ ಮಾರಕ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.
ಜಾಗತಿಕವಾಗಿ 24,83,086 ಜನರು ಸಾಂಕ್ರಾಮಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹಲವು ದೇಶಗಳಲ್ಲಿ ಅತ್ಯಂತ ಗಂಭೀರವಾದ ಪ್ರಕರಣಗಳನ್ನು ಮಾತ್ರ ಪರೀಕ್ಷಿಸುತ್ತಿರುವುದರಿಂದ ನಿಜವಾದ ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.
ಭಾರತದಲ್ಲೂ ಕೊರೋನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು ಈವರೆಗೂ 18,985 ಜನರು ಸೋಂಕಿನಿಂದ ಬಳಲುತ್ತಿದ್ದು, ಒಟ್ಟು 603 ಜನರು ಮೃತಪಟ್ಟಿದ್ದಾರೆ. 3260 ಪ್ರಕರಣಗಳು ಗುಣಮುಖವಾಗಿದ್ದು, 15,122 ಪ್ರಕರಣಗಳು ಚಿಕಿತ್ಸೆಯಲ್ಲಿವೆ. ಕಳೆದ 24 ಗಂಟೆಯಲ್ಲಿ 1329 ಪ್ರಕರಣಗಳು ವರದಿಯಾಗಿದ್ದು, 44 ಜನರು ಅಸುನೀಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
Comments are closed.