ಅಂತರಾಷ್ಟ್ರೀಯ

ಕೋವಿಡ್-19 ಗೆ ಲಸಿಕೆ ಬರಲಿದೆ ಎಂಬುದಕ್ಕೆ ಯಾವುದೇ ಖಾತರಿ ಇಲ್ಲ: ವಿಶ್ವಸಂಸ್ಥೆ!

Pinterest LinkedIn Tumblr

ಲಂಡನ್: ಕೊರೋನಾ ವೈರಸ್ ಗೆ ಲಸಿಕೆಗಾಗಿ ಇಡೀ ಜಗತ್ತೇ ಆಶಾಭಾವನೆಯಿಂದ ಎದುರುನೋಡುತ್ತಿದೆ. ಈ ಬೆನ್ನಲ್ಲೆ ವಿಶ್ವಸಂಸ್ಥೆ ಈ ಬಗ್ಗೆ ಮಾತನಾಡಿದೆ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಹೆಚ್ ಒ)ಯ ವಿಶೇಷ ರಾಯಭಾರಿ, ಡೇವಿಡ್ ನಬರೋ ಕೊರೋನಾ ಬಗ್ಗೆ ಎಚ್ಚರಿಕೆ ನೀಡಿದ್ದು, ಮುಂದಿನ ದಿನಗಳಲ್ಲಿ ಕೋವಿಡ್-19 ಗೆ ಲಸಿಕೆ ಕಂಡುಹಿಡಿಯುವುದು ಯಶಸ್ವಿಯಾಗಲಿದೆ ಎಂಬುದಕ್ಕೆ ಯಾವುದೇ ಖಾತರಿ ಇಲ್ಲ ಎಂದು ಹೇಳಿದ್ದಾರೆ.

ವಿಶ್ವದ ಮುಂಚೂಣಿಯಲ್ಲಿರುವ ತಜ್ಞರಲ್ಲಿ ಒಬ್ಬರಾಗಿರುವ ಡೇವಿಡ್ ನಬರೋ, ಮುಂದಿನ ದಿನಗಳಲ್ಲಿ ಕೊರೋನಾ ವೈರಸ್ ಭೀತಿ, ಅ ಪಾಯಗಳ ನಡುವೆಯೇ ಜನತೆ ಬದುಕಬೇಕಿದೆ, ಏಕೆಂದರೆ ಇದಕ್ಕೆ ಲಸಿಕೆ ಸಿದ್ಧವಾಗಲಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ.

ಕೆಲವು ವೈರಸ್ ಗಳಿಗೆ ಲಸಿಕೆ ಅಭಿವೃದ್ಧಿಪಡಿಸುವುದು ತುಂಬಾ ಕಷ್ಟದ ಕೆಲಸ, ಕೊರೋನಾ ವೈರಸ್ ಗೆ ರೋಗಿಗಳನ್ನು ಹಾಗೂ ಅವರ ಸಂಪರ್ಕದಲ್ಲಿರುವವರಿಂದ ಅಂತರ ಕಾಯ್ದುಕೊಳ್ಳುವುದು ಹಾಗೂ ಐಸೊಲೇಷನ್ ನಲ್ಲಿಡುವುದಷ್ಟೇ ಸಧ್ಯಕ್ಕೆ ಇರುವ ಮಾರ್ಗ ಎಂದು ಡೇವಿಡ್ ನಬರೋ ಅಭಿಪ್ರಾಯಪಟ್ಟಿದ್ದಾರೆ.

Comments are closed.