ಅಂತರಾಷ್ಟ್ರೀಯ

ಕೊರೋನಾ: ವಿಶ್ವಾದ್ಯಂತ 1,40,902 ಬಲಿ, 21.82 ಲಕ್ಷ ಜನಕ್ಕೆ ಸೋಂಕು

Pinterest LinkedIn Tumblr


ನವದೆಹಲಿ (ಏ. 17): ಜಗತ್ತನ್ನೇ ಕಂಗಾಲಾಗಿಸಿರುವ ಕೊರೋನಾ ವೈರಸ್​​ಗೆ ವಿಶ್ವದ 1,40,902 ಜನರು ಸಾವನ್ನಪ್ಪಿದ್ದಾರೆ. ಸೋಂಕಿತರ ಸಂಖ್ಯೆ 21,82,197ಕ್ಕೆ ಏರಿಕೆಯಾಗಿದೆ. ಅಮೆರಿಕವೊಂದರಲ್ಲೇ 34,617 ಜನರು ಸಾವನ್ನಪ್ಪಿದ್ದು, 6,77,570 ಜನರಿಗೆ ಸೋಂಕು ತಗುಲಿದೆ.

ಅಮೆರಿಕದ ನಂತರದ ಸ್ಥಾನದಲ್ಲಿರುವ ಇಟಲಿಯಲ್ಲಿ 22,170 ಜನ ಸಾವನ್ನಪ್ಪಿದ್ದು, 1,68,941 ಜನರಿಗೆ ಸೋಂಕು ತಗುಲಿದೆ. ಸ್ಪೇನ್​ನಲ್ಲಿ 1,84,948 ಜನರಿಗೆ ಸೋಂಕು ತಗುಲಿದ್ದು, ಈಗಾಗಲೇ 19,315 ಜನ ಸಾವನ್ನಪ್ಪಿದ್ದಾರೆ. ಭಾರತದಲ್ಲಿ 13,430 ಜನರಿಗೆ ಸೋಂಕು ಪತ್ತೆಯಾಗಿದ್ದು, 448 ಜನರು ಸಾವನ್ನಪ್ಪಿದ್ದಾರೆ. ಫ್ರಾನ್ಸ್​ನಲ್ಲಿ ಗುರುವಾರ ಒಂದೇ ದಿನ 753 ಜನರು ಕೊರೋನಾ ವೈರಸ್​ನಿಂದ ಸಾವನ್ನಪ್ಪಿದ್ದಾರೆ. ಇಂಗ್ಲೆಂಡ್​ನಲ್ಲಿ ಕೊರೋನಾ ಅಟ್ಟಹಾಸ ಹೆಚ್ಚುತ್ತಿರುವುದರಿಂದ ಮತ್ತೆ 3 ವಾರಗಳ ಕಾಲ ಲಾಕ್​ಡೌನ್ ಮುಂದುವರಿಸಲಾಗಿದೆ.

ಅಮೆರಿಕದಲ್ಲಿ ಬುಧವಾರ ಒಂದೇ ದಿನ 2,400ಕ್ಕೂ ಹೆಚ್ಚು ಜನರು ಕೊರೋನಾ ವೈರಸ್​ನಿಂದ ಸಾವನ್ನಪ್ಪಿದ್ದರು. ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಕೊರೋನಾ ಸೊಂಕಿತರ ಸಂಖ್ಯೆ ಅಧಿಕವಾಗಿದೆ. ಈ ಸಂಖ್ಯೆಗೆ ಹೋಲಿಸಿದರೆ ಇಂದು ಅಮೆರಿಕದಲ್ಲಿ ಪತ್ತೆಯಾಗಿರುವ ಸೋಂಕಿತರ ಪ್ರಮಾಣ ಕಡಿಮೆಯಿದೆ. ಫ್ರಾನ್ಸ್​ನಲ್ಲಿ ಕೂಡ ಬುಧವಾರ 2,438 ಜನರು ಸಾವನ್ನಪ್ಪಿದ್ದರು. ಆದರೆ, ಗುರುವಾರ ಆ ಸಂಖ್ಯೆ ಇಳಿಮುಖವಾಗಿದೆ.

Comments are closed.