ಅಂತರಾಷ್ಟ್ರೀಯ

ಅಮೆರಿಕಾದಲ್ಲಿ ಶುಕ್ರವಾರ ಒಂದೇ ದಿನ 2,000 ಮಂದಿ ಕೊರೋನಾಗೆ ಬಲಿ; 5 ಲಕ್ಷಕ್ಕೇರಿದ ಸೋಂಕಿತರ ಸಂಖ್ಯೆ

Pinterest LinkedIn Tumblr

ವಾಷಿಂಗ್ಟನ್: ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸಲು ಅಮೆರಿಕಾ ಹೆಣಗಾಡುತ್ತಿದ್ದು, ಶುಕ್ರವಾರ ಒಂದೇ ದಿನ 2,000 ಮಂದಿ ವೈರಸ್’ಗೆ ಬಲಿಯಾಗಿದ್ದಾರೆ. ಇದರಂತೆ ಒಂದೇ ದಿನದಲ್ಲಿ ಈ ಮಟ್ಟದಲ್ಲಿ ಜನರು ಸಾವನ್ನಪ್ಪಿದ ಮೊದಲ ದೇಶವಾಗಿದೆ ಎಂದು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.

ಈ ನಡುವೆ ಅಮೆರಿಕಾದಲ್ಲಿ 5 ಲಕ್ಷಕ್ಕೂ ಹೆಚ್ಚು ಮಂದಿ ವೈರಸ್ ನಿಂದ ಬಳಲುತ್ತಿದ್ದು, ಈವರೆಗೂ 18,693 ಮಂದಿ ಸಾವನ್ನಪ್ಪಿದ್ದಾರೆ. ಸೋಂಕಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 28,837 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಕೊರೋನ ವೈರಸ್ ವಿರುದ್ಧದ ಹೋರಾಟದಲ್ಲಿ ಅಮೆರಿಕಾ ಹಾಗೂ ಇಟಲಿ ಎರಡೂ ರಾಷ್ಟ್ರಗಳೂ ಒಂದೇ ಹಾದಿಯಲ್ಲಿ ಸಾಗುತ್ತಿದ್ದು, ಇಟಲಿಯಲ್ಲಿ 18,849 ಮಂದಿ ಸಾವನ್ನಪ್ಪಿದ್ದರೆ, ಅಮೆರಿಕಾದಲ್ಲಿ 18,693 ಮಂದಿ ಸಾವನ್ನಪ್ಪಿದ್ದಾರೆ. ಎರಡೂ ರಾಷ್ಟ್ರಗಳ ನಡುವೆ ಕೇವಲ 156 ಸಂಖ್ಯೆಯಷ್ಟೇ ವ್ಯತ್ಯಾಸಗಳಿದೆ ಎಂದು ಹೇಳಲಾಗುತ್ತಿದೆ.

Comments are closed.