
ಲಂಡನ್: ಮಹಾಮಾರಿ ಕೋವಿಡ್ 19 ವೈರಸ್ ವಿಶ್ವವ್ಯಾಪಿಯಾಗಿರುವುದು ಮಾತ್ರವಲ್ಲ ಎಲ್ಲಾ ವರ್ಗದ ಜನರನ್ನೂ ತನ್ನ ಕಬಂಧ ಬಾಹುಗಳಲ್ಲಿ ಸೆಳೆದುಕೊಳ್ಳುತ್ತಿದೆ. ಇದಕ್ಕೊಂದು ನಿದರ್ಶನವೆಂಬಂತೆ ಇಂಗ್ಲಂಡ್ ದೇಶದ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಅವರೂ ಸಹ ಇದೀಗ ಕೋವಿಡ್ 19 ವೈರಸ್ ಸೋಂಕಿಗೆ ಒಳಪಟ್ಟಿರುವ ಶಾಕಿಂಗ್ ನ್ಯೂಸ್ ಲಭಿಸಿದೆ. ಇದೀಗ ಜಾನ್ಸನ್ ಅವರಲ್ಲಿ ಸೋಂಕು ಪಾಸಿಟಿವ್ ಪತ್ತೆಯಾಗಿರುವುದರಿಂದ ಅವರು ಡೌನಿಂಗ್ ಸ್ಟ್ರೀಟ್ ನಲ್ಲಿರುವ ಪ್ರಧಾನಿ ನಿವಾಸದಲ್ಲೇ ಐಸೋಲೇಷನ್ ನಲ್ಲಿರಲಿದ್ದಾರೆ ಎಂದು ತಿಳಿದುಬಂದಿದೆ.
ಕೋವಿಡ್ 19 ಸೋಂಕಿಗೆ ಸಂಬಂಧಿಸಿದ ಕೆಲವೊಂದು ಲಕ್ಷಣಗಳು ಜಾನ್ಸನ್ ಅವರಲ್ಲಿ ಕಂಡುಬಂದ ಕಾರಣ ಅವರು ಇಂಗ್ಲಂಡ್ ನ ವೈದ್ಯಕೀಯ ಮುಖ್ಯಸ್ಥರ ವೈಯಕ್ತಿಕ ಸಲಹೆಯ ಮೇರೆಗೆ ಸೋಂಕು ತಪಾಸಣೆಗೆ ಒಳಪಟ್ಟರು ಮತ್ತು ಈ ಪರೀಕ್ಷೆಯ ಫಲಿತಾಂಶ ಪಾಸಿಟಿವ್ ಬಂದಿದೆ ಎಂದು ಪ್ರಧಾನಿ ನಿವಾಸ ಡೌನಿಂಗ್ ಸ್ಟ್ರೀಟ್ ನ ವಕ್ತಾರರು ಮಾಹಿತಿ ನೀಡಿದ್ದಾರೆ.
Comments are closed.