ಅಂತರಾಷ್ಟ್ರೀಯ

ಕೊರೋನಾ ವೈರಸ್​ನ ಜೀವಿತಾವಧಿ ಎಷ್ಟು?

Pinterest LinkedIn Tumblr


ಕೊರೋನಾ ವೈರಸ್ ದಾಳಿಗೆ ಚೀನಾದಲ್ಲಿ ಈಗಾಗಲೇ 3,227 ಜನರು ಸಾವನ್ನಪ್ಪಿದ್ದಾರೆ. ಜಗತ್ತಿನಾದ್ಯಂತ ಸಾವನ್ನಪ್ಪಿದವರ ಸಂಖ್ಯೆ 7,970 ಏರಿಕೆಯಾಗಿದೆ. ಈ ಮಧ್ಯೆ ಕೊರೋನಾ ವೈರಸ್ ಎಷ್ಟು ದಿನ ಜೀವಂತ ಇರಲಿದೆ ಎನ್ನುವ ಬಗ್ಗೆ ವಿಜ್ಞಾನಿಗಳು ಸಂಶೋಧನೆ ನಡೆಸಿದ್ದಾರೆ.

ಕೊರೋನಾ ವೈರಸ್ ದಾಳಿಗೆ ಚೀನಾದಲ್ಲಿ ಈಗಾಗಲೇ 3,227 ಜನರು ಸಾವನ್ನಪ್ಪಿದ್ದಾರೆ. ಜಗತ್ತಿನಾದ್ಯಂತ ಸಾವನ್ನಪ್ಪಿದವರ ಸಂಖ್ಯೆ 7,970 ಏರಿಕೆಯಾಗಿದೆ. 1,98,318 ಕ್ಕೂ ಅಧಿಕ ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಈ ಮಧ್ಯೆ ಕೊರೋನಾ ವೈರಸ್ ಎಷ್ಟು ದಿನ ಜೀವಂತ ಇರಲಿದೆ ಎನ್ನುವ ಬಗ್ಗೆ ವಿಜ್ಞಾನಿಗಳು ಸಂಶೋಧನೆ ನಡೆಸಿದ್ದಾರೆ.

ಕೊರೋನಾ ವೈರಸ್ ಇರುವ ವ್ಯಕ್ತಿ ಕೆಮ್ಮಿದಾಗ ಎಂಜಲಿನ ಮೂಲಕ ವೈರಸ್ ವರ್ಗಾವಣೆಗೊಳ್ಳುತ್ತದೆ. ಈ ಎಂಜಲು ಯಾವುದಾದರೂ ವಸ್ತುವಿನ ಮೇಲೆ ಬಿದ್ದರೆ ಅಲ್ಲಿಗೆ ಕೊರೋನಾ ವೈರಸ್ ಹಸ್ತಾಂತರಗೊಳ್ಳುತ್ತದೆ.

ಹೀಗೆ ವಸ್ತುವಿನ ಮೇಲೆ ಬಿದ್ದ ಕೊರೋನಾ ವೈರಸ್​ 2-3 ದಿನ ಬದುಕಿರುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಭೀಕರ ವೈರಸ್​ ಪ್ಲಾಸ್ಟಿಕ್ ಹಾಗೂ ಸ್ಟೀಲ್ ಮೇಲೆ 2-3 ದಿನ, ಕಾರ್ಡ್​ಬೋರ್ಡ್ ಮೇಲೆ 24 ಗಂಟೆ ಜೀವಿತಾವಧಿ ಹೊಂದಿರುವುದು ಸಂಶೋಧನೆಯಿಂದ ತಿಳಿದು ಬಂದಿದೆ.

ಕೊರೋನಾ ವ್ಯಕ್ತಿ ಸೀನಿದರೆ ಈ ವೈರಸ್ ಗಾಳಿಯೊಂದಿಗೆ ಬೆರೆಯುತ್ತದೆ. ಗಾಳಿಯಲ್ಲಿ ಈ ವೈರಸ್ 2-3 ಗಂಟೆ ಉಳಿದುಕೊಳ್ಳುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. .

ಕೊರೋನಾ ವ್ಯಕ್ತಿ ಸೀನಿದರೆ ಈ ವೈರಸ್ ಗಾಳಿಯೊಂದಿಗೆ ಬೆರೆಯುತ್ತದೆ. ಗಾಳಿಯಲ್ಲಿ ಈ ವೈರಸ್ 2-3 ಗಂಟೆ ಉಳಿದುಕೊಳ್ಳುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

Comments are closed.