Coronavirus LIVE:ಸೋಮವಾರದಿಂದ ಅಮೇರಿಕಾದಲ್ಲಿ ಮಾರಕ ಕೋರೊನಾ ವೈರಸ್ ಗಾಗಿ ಸಿದ್ಧಪಡಿಸಲಾಗಿರುವ ಲಸಿಕೆಯನ್ನು ಮನುಷ್ಯರ ಮೇಲೆ ಪರೀಕ್ಷೆ ಆರಂಭಗೊಂಡಿದೆ.
ಸೋಮವಾರದಿಂದ ಅಮೇರಿಕಾದಲ್ಲಿ ಮಾರಕ ಕೋರೊನಾ ವೈರಸ್ ಗಾಗಿ ಸಿದ್ಧಪಡಿಸಲಾಗಿರುವ ಲಸಿಕೆಯನ್ನು ಮನುಷ್ಯರ ಮೇಲೆ ಪರೀಕ್ಷೆ ಆರಂಭಗೊಂಡಿದೆ. BBCಯಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ ಒಟ್ಟು 45 ಸ್ವಯಂಸೇವಕರ ಮೇಲೆ ಸಿಯೇಟಲ್ ನ ಕ್ಯಾನ್ಸರ್ ಪರ್ಮನೆಂಟ್ ರಿಸರ್ಚ್ ಕೇಂದ್ರದಲ್ಲಿ ಈ ಪರೀಕ್ಷೆ ನಡೆಸಲಾಗುತ್ತಿದೆ ಎನ್ನಲಾಗಿದೆ.
ಈ ವ್ಯಾಕ್ಸಿನ್ ಬಳಕೆಯಿಂದ ಕೊರೊನಾ ವೈರಸ್ ಸೋಂಕಿಗೆ ಗುರಿಯಾಗುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಇದರಲ್ಲಿ ವೈರಸ್ ನಿಂದ ಕಾಪಿ ಮಾಡಲಾಗಿರುವ ಹಾನಿಕಾರಕ ಜೆನೆಟಿಕ್ ಕೋಡ್ ಗಳಿವೆ ಎನ್ನಲಾಗಿದೆ.
ಈ ಕುರಿತು ಹೇಳಿಕೆ ನೀಡಿರುವ ತಜ್ಞರು ಈ ವ್ಯಾಕ್ಸಿನ್ ಪರೀಕ್ಷೆಗೆ ಹಲವು ತಿಂಗಳುಗಳ ಕಾಲಾವಕಾಶ ಬೇಕಾಗಲಿದೆ ಎಂದಿದ್ದಾರೆ. ವಿಶ್ವಾದ್ಯಂತದ ವಿಜ್ಞಾನಿಗಳೂ ಕೂಡ ಈ ಕುರಿತು ಸಂಶೋಧನೆಯಲ್ಲಿ ನಿರತರಾಗಿದ್ದಾರೆ. ಇದಕ್ಕೂ ಮೊದಲು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಮನುಷ್ಯರ ಮೇಲೆ ಈ ಲಸಿಕೆಯ ಪರೀಕ್ಷಣೆಗಾಗಿ ಧನ ಸಹಾಯ ಒದಗಿಸಿತ್ತು. ಆದರೆ, ಈ ಕಾರ್ಯದಲ್ಲಿ ತೊಡಗಿರುವ ಬಯೋಟೆಕ್ನಾಲಜಿ ಕಂಪನಿ ಮಾಡರ್ನ್ ಥೆರೆಪ್ಯೂಟಿಕ್ಸ್ ಹೇಳುವ ಪ್ರಕಾರ ಈ ವ್ಯಾಕ್ಸಿನ್ ಅನ್ನು ಟೆಸ್ಟ್ ಪ್ರಕ್ರಿಯೆ ಮೂಲಕವೇ ತಯಾರಿಸಲಾಗಿದೆ ಎಂದು ಹೇಳಿಕೊಂಡಿದೆ.
ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಬ್ರಿಟನ್ ನ ಇಂಪೀರಿಯಲ್ ಕಾಲೇಜ್ ಲಂಡನ್ ನ ಸಾಂಕ್ರಾಮಿಕ ರೋಗ ತಜ್ಞ ಜಾನ್ ಟ್ರೇಗೊನಿಂಗ್, “ಈ ವ್ಯಾಕ್ಸಿನ್ ನಲ್ಲಿ ಈ ಮೊದಲು ಉಪಯೋಗದಲ್ಲಿದ್ದ ತಂತ್ರಜ್ಞಾನದ ಬಳಕೆ ಮಾಡಲಾಗಿದೆ” ಎಂದು ಹೇಳಿದ್ದಾರೆ. ಈ ವ್ಯಾಕ್ಸಿನ್ ಅನ್ನು ಉನ್ನತ ಮಾನದಂಡಗಳ ಅಡಿ ಸಿದ್ಧಪಡಿಸಲಾಗಿದೆ. ನಮ್ಮ ಉಪಯೋಗಕ್ಕೆ ಸುರಕ್ಷಿತ ಎಂದು ನಾವು ಭಾವಿಸುವ ವಸ್ತುಗಳನ್ನು ಇದರ ತಯಾರಿಕೆಗೆ ಬಳಸಲಾಗಿದೆ ಹಾಗೂ ಈ ಟೆಸ್ಟ್ ನಲ್ಲಿ ಭಾಗವಹಿಸುವ ಕಾರ್ಯಕರ್ತರ ಮೇಲೆ ನಾವು ಸೂಕ್ಷ್ಮಗಾಗಿ ಗಮನಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

Comments are closed.