ಅಂತರಾಷ್ಟ್ರೀಯ

80 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಚಿಕಿತ್ಸೆ ನಿಲ್ಲಿಸಿದ ಇಟಲಿ

Pinterest LinkedIn Tumblr

ನವದೆಹಲಿ(ಮಾ. 17): ಚೀನಾ ಬಿಟ್ಟರೆ ಕೊರೋನಾ ವೈರಸ್ ಸೋಂಕಿನಿಂದ ಅತಿ ಹೆಚ್ಚು ಬಾಧಿತವಾಗಿರುವ ಇಟಲಿ ದೇಶದಲ್ಲಿ ಈಗ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಹತ್ತಿರ ಹತ್ತಿರ 2 ಸಾವಿರ ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. 12 ಸಾವಿರಕ್ಕೂ ಹೆಚ್ಚು ಜನರು ಸೋಂಕಿತರಾಗಿದ್ಧಾರೆ. ಇಟಲಿಯಲ್ಲಿ ಸಾವನ್ನಪ್ಪಿದವರಲ್ಲಿ ವಯೋವೃದ್ಧರೇ ಹೆಚ್ಚು. ಆದರೆ, ಬೇರೆ ವಯೋಮಾನದವರಿಗೂ ಸೋಂಕು ತಗುಲಿದೆ. ಇದೇ ವೇಳೆ, ಇಟಲಿಯಲ್ಲಿ ಕೊರೋನಾ ವೈರಸ್ ಬಾಧಿತ ರೊಗಿಗಳಿಗೆ ಚಿಕಿತ್ಸೆ ನೀಡಲು ಸಂಪನ್ಮೂಲ ಸಾಕಾಗುತ್ತಿಲ್ಲ. ಅಲ್ಲಿಯ ಆರೋಗ್ಯ ವ್ಯವಸ್ಥೆ ಬಹುತೇಕ ಕುಸಿದಿದೆ. ಮುಗಿಬೀಳುತ್ತಿರುವ ಕೊರೋನಾ ಶಂಕಿತರಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇಟಲಿ ಸರ್ಕಾರ ಒಂದು ನಿರ್ದಯ ನಿರ್ಧಾರಕ್ಕೆ ಬಂದಿದೆ. 80 ವರ್ಷ ಮೇಲ್ಪಟ್ಟ ವೃದ್ಧರಿಗೆ ಕೊರೋನಾ ಚಿಕಿತ್ಸೆ ನೀಡುವುದನ್ನು ನಿಲ್ಲಿಸಿದೆ. ಆ ಸಂಪನ್ಮೂಲವನ್ನು ಬೇರೆ ಪ್ರಾಯದ ರೋಗಿಗಳಿಗೆ ಬಳಸಲು ನಿರ್ಧರಿಸಿದೆ.

Comments are closed.