ಕೊರೊನಾವೈರಸ್ ಭೀತಿ ಇಂದು ಇಡೀ ವಿಶ್ವವನ್ನೇ ಆವರಿಸಿದೆ. ದೇಶಗಳು ತಮ್ಮ ಗಡಿಗಳನ್ನು ಮುಚ್ಚುತ್ತಿವೆ. ಶೇರು ಮಾರುಕಟ್ಟೆಗಳು ಪಾತಾಳಕ್ಕೆ ಕುಸಿದಿವೆ. ವಿಶ್ವದ ಆರ್ಥಿಕತೆಯು ಬದುಕುಳಿಯಲು ಹೆಣಗಾಡುತ್ತಿದೆ.
ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ(ಸಿಡಿಸಿ)ಗಳ ಇತ್ತೀಚಿನ ದತ್ತಾಂಶಗಳಂತೆ ಈ ಋತುವಿನಲ್ಲಿ ಫ್ಲೂ ಪಿಡುಗಿಗೆ 18,000ಕ್ಕೂ ಅಧಿಕ ಅಮೆರಿಕನ್ನರು ಬಲಿಯಾಗಿದ್ದಾರೆ. ಸಿಡಿಸಿ ಅಂದಾಜಿನಂತೆ 2018ರಲ್ಲಿ ಫ್ಲೂನಿಂದಾಗಿ 80,000 ಸಾವುಗಳು ಸಂಭವಿಸಿದ್ದವು. ಇದಕ್ಕೆ ಹೋಲಿಸಿದರೆ ಅಮೆರಿಕದಲ್ಲಿ ಈವರೆಗೆ 470 ಕೊರೊನಾವೈರಸ್ ಪ್ರಕರಣಗಳಲ್ಲಿ 19 ಜನರು ಸಾವನ್ನಪ್ಪಿದ್ದಾರೆ.
ವಿಶ್ವಾದ್ಯಂತ ಈವರೆಗೆ ಸುಮಾರು ಒಂದು ಲಕ್ಷ ದೃಢೀಕೃತ ಕೊರೊನಾವೈರಸ್ ಪ್ರಕರಣಗಳಲ್ಲಿ 3,400 ಜನರು ಮೃತಪಟ್ಟಿದ್ದಾರೆ. ಹಾಗೆ ನೋಡಿದರೆ ಫ್ಲೂಗೆ ಹೋಲಿಸಿದರೆ ಕೊರೊನಾವೈರಸ್ ಏನೂ ಅಲ್ಲ. ಏಕೆಂದರೆ ಫ್ಲೂ ಪ್ರತಿವರ್ಷ ಸುಮಾರು 2,91,000ದಿಂದ 6,46,000 ಜನರನ್ನು ನಿರ್ದಯವಾಗಿ ಬಲಿ ತೆಗೆದುಕೊಳ್ಳುತ್ತಿದೆ.
ಚೀನಾ ಕೊರೊನಾವೈರಸ್ ನ ಮೂಲವಾಗಿದ್ದು, ಈಗಲೂ ವಿಶ್ವಾದ್ಯಂತ ಶೇ.80ಕ್ಕೂ ಅಧಿಕ ಕೊರೊನಾವೈರಸ್ ಪ್ರಕರಣಗಳು ಮತ್ತು ಸಾವುಗಳಿಗೆ ಅದು ಸಾಕ್ಷಿಯಾಗಿದೆ. ಚೀನಾದಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ)ಯ ಕೊರೊನಾ ವಿರುದ್ಧದ ಅಭಿಯಾನದ ನೇತೃತ್ವ ವಹಿಸಿದ್ದ ಕೆನಡಾದ ಸಾಂಕ್ರಾಮಿಕ ರೋಗಶಾಸ್ತ್ರಜ್ಞರ ವರದಿಯಂತೆ ಆ ದೇಶದಲ್ಲಿ ಒಂದು ತಿಂಗಳ ಹಿಂದೆಯೇ ಉತ್ತುಂಗಕ್ಕೇರಿದ್ದ ಕೊರೊನಾವೈರಸ್ ಪ್ರಕರಣಗಳು ಆಗಿನಿಂದಲೇ ಇಳಿಮುಖವಾಗುತ್ತಿವೆ. ಕೊರೊನಾವೈರಸ್ ಉತ್ತುಂಗದಲ್ಲಿದ್ದಾಗ ಚೀನಾದಲ್ಲಿ ಪ್ರತಿದಿನ 4,000 ಹೊಸ ಪ್ರಕರಣಗಳು ವರದಿಯಾಗುತ್ತಿದ್ದರೆ ಅದೀಗ 200ಕ್ಕೂ ಕೆಳಗಿಳಿದಿದೆ.
‘ಫಾರ್ಸ್ ಲಾ’ದಂತೆ ಇತರ ದೇಶಗಳೂ ಇದೇ ಮಾದರಿಯನ್ನು ಅನುಸರಿಸಲಿವೆ. ಬ್ರಿಟಿಷ್ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ.ವಿಲಿಯಂ ಫಾರ್ ಅವರು 1840ರಲ್ಲಿ ರೂಪಿಸಿದ್ದ ‘ಫಾರ್ಸ್ ಲಾ’ದಂತೆ ಸಾಂಕ್ರಾಮಿಕ ರೋಗಗಳು ಸಮಸ್ವರೂಪದ ಮಾದರಿಯಲ್ಲಿ ಉತ್ತುಂಗಕ್ಕೇರುತ್ತವೆ ಮತ್ತು ಇಳಿಯುತ್ತವೆ. ಏಡ್ಸ್, ಸಾರ್ಸ್ ಮತ್ತು ಎಬೋಲಾ ಈ ಎಲ್ಲ ರೋಗಗಳೂ ಇದೇ ಮಾದರಿಯನ್ನು ಅನುಸರಿಸಿವೆ. ಅದೇ ರೀತಿ ಪ್ರತಿವರ್ಷ ಫ್ಲೂ ಕೂಡ ಪ್ರತಿ ವರ್ಷ ಫಾರ್ಸ್ ಲಾ ಅನ್ನು ಅನುಸರಿಸುತ್ತದೆ.
ಡಬ್ಲುಎಚ್‌ಒ ಗಮನಿಸಿರುವಂತೆ ಹೊಸದಾಗಿ ದಾಂಗುಡಿಯಿಟ್ಟಿರುವ ಕೊರೊನಾವೈರಸ್ ಗಿಂತ ಫ್ಲೂ ಅತ್ಯಂತ ಹೆಚ್ಚು ಸಾಂಕ್ರಾಮಿಕವಾಗಿದೆ. ಮೊದಲ ಕೊರೊನಾವೈರಸ್ ಪ್ರಕರಣ ಕಳೆದ ವರ್ಷದ ಡಿಸೆಂಬರ್ ಆರಂಭದಲ್ಲಿ ವರದಿಯಾಗಿದ್ದು, ಆಗಿನಿಂದ ಕೆಲವೇ ದಿನಗಳಲ್ಲಿ ಫ್ಲೂಗೆ ಗುರಿಯಾಗುವ ಒಟ್ಟು ಪ್ರಕರಣಗಳಿಗಿಂತ ಅತ್ಯಂತ ಕಡಿಮೆ ಜನರಿಗೆ ಕೊರೊನಾ ಸೋಂಕು ಹರಡಿದೆ.
ಸಾವುಗಳ ದರಕ್ಕೆ ಸಂಬಂಧಿಸಿದಂತೆ ಸರಳ ಲೆಕ್ಕಾಚಾರ ಇಲ್ಲಿ ಸೂಕ್ತವಲ್ಲ. ಆದರೆ ಪ್ರತಿಯೊಬ್ಬರೂ ಅದನ್ನೇ ಮಾಡುತ್ತಿದ್ದಾರೆ ಮತ್ತು ಎಷ್ಟು ಪ್ರಕರಣಗಳಲ್ಲಿ ಎಷ್ಟು ಸಾವುಗಳು ಸಂಭವಿಸಿವೆ ಎಂದು ನೋಡಲಾಗುತ್ತಿದೆ. ಏಕೆಂದರೆ ಅವೆಲ್ಲ ವರದಿಯಾಗಿರುವ ಪ್ರಕರಣಗಳು. ಫ್ಲು ಮತ್ತು ಖಚಿತವಾಗಿ ಕೊರೊನಾವೈರಸ್ ಪ್ರಕರಣಗಳಲ್ಲಿ ಪೀಡಿತರಲ್ಲಿ ಲಕ್ಷಣಗಳೇನಾದರೂ ಇದ್ದರೆ ಅವು ಎಷ್ಟು ಸೌಮ್ಯವಾಗಿರುತ್ತವೆ ಎಂದರೆ ಕೆಲವರು ವೈದ್ಯಕೀಯ ನೆರವು ಪಡೆದುಕೊಳ್ಳುವ ಗೋಜಿಗೇ ಹೋಗುವುದಿಲ್ಲ ಮತ್ತು ಒಟ್ಟು ಪ್ರಕರಣಗಳ ಸಂಖ್ಯೆಯಲ್ಲಿ ಇವು ಸೇರುವುದೇ ಇಲ್ಲ.
ಸಾವುಗಳ ದರವೂ ವಯಸ್ಸಿಗೆ ಅನುಗುಣವಾಗಿ ಬಹುವಾಗಿ ಬದಲಾಗುತ್ತದೆ. ಶೇ.0.2ರಷ್ಟು ಕೊರೋನವೈರಸ್ ಸಾವುಗಳು 40 ವರ್ಷಕ್ಕಿಂತ ಕಡಿಮೆ ವಯೋಮಾನದ ಗುಂಪಿನಲ್ಲಿ ವರದಿಯಾಗಿದ್ದರೆ ಶೇ.14.8ರಷ್ಟು ಸಾವುಗಳು 80 ವರ್ಷಕ್ಕೂ ಹೆಚ್ಚಿನ ವಯೋಮಾನದವರಲ್ಲಿ ಉಂಟಾಗಿವೆ ಎನ್ನುವುದನ್ನು ಚೀನಾ ಸರಕಾರದ ವಿಶ್ಲೇಷಣೆಯು ತೋರಿಸಿದೆ. ಒಂಭತ್ತು ವರ್ಷ ಮತ್ತು ಅದಕ್ಕಿಂತ ಕಡಿಮೆ ವಯೋಮಾನದಲ್ಲಿ ಒಂದೂ ಸಾವು ಸಂಭವಿಸಿಲ್ಲ ಎನ್ನುವುದನ್ನು ಕಳೆದ ತಿಂಗಳು ‘ಜರ್ನಲ್ ಆಫ್ ದಿ ಮೆಡಿಕಲ್ ಅಸೋಸಿಯೇಷನ್’ನಲ್ಲಿ ಪ್ರಕಟಿತ ಅಧ್ಯಯನ ವರದಿಯು ಬೆಳಕಿಗೆ ತಂದಿದೆ.
ಫ್ಲೂದಂತೆ ಕೊರೋನವೈರಸ್ ಕೂಡ ಮಧುಮೇಹ, ಹೃದ್ರೋಗದಿಂದ ನರಳುತ್ತಿರುವ, ರೋಗ ನಿರೋಧಕ ಶಕ್ತಿ ದುರ್ಬಲಗೊಂಡಿರುವ, ಹೆಚ್ಚಿನ ಅಪಾಯವನ್ನು ಹೊಂದಿರುವ ಹಿರಿಯರನ್ನೇ ಹೆಚ್ಚಾಗಿ ಕಾಡುತ್ತಿದೆ.
ಶೀಘ್ರ ಕೊನೆಯಾಗಲಿದೆ ಕೊರೊನಾ ಪಿಡುಗು
ಒಳ್ಳೆಯ ಸುದ್ದಿಯೆಂದರೆ ಹೆಚ್ಚಿನ ಕೊರೋನವೈರಸ್ ಪ್ರಕರಣಗಳಿರುವ ದೇಶಗಳನ್ನೊಳಗೊಂಡಿರುವ ಉತ್ತರ ಗೋಳಾರ್ಧದಲ್ಲಿ ಈ ತಿಂಗಳಿನಿಂದ ತಾಪಮಾನ ಏರಿಕೆ ಆರಂಭಗೊಳ್ಳುತ್ತದೆ. ಉಸಿರಾಟ ರೋಗಗಳಿಗೆ ಸಂಬಂಧಿಸಿದ ಹೆಚ್ಚುಕಡಿಮೆ ಎಲ್ಲ ವೈರಸ್ ಗಳು ಬಿಸಿಯಾದ ಮತ್ತು ತೇವದ ವಾತಾವರಣದಲ್ಲಿ ಬದುಕುಳಿಯುವುದಿಲ್ಲ. ಇದೇ ಕಾರಣದಿಂದ ಪ್ರತಿ ವರ್ಷ ಮೇ ತಿಂಗಳಿನೊಳಗೆ ಫ್ಲೂ ಪಿಡುಗು ತನ್ನಿಂತಾನೇ ನಿರ್ಮೂಲನಗೊಳ್ಳುತ್ತದೆ. ಲ್ಯಾಟಿನ್ ಅಮೆರಿಕಾದಲ್ಲಿ ಕೇವಲ 25 ಕೊರೋನವೈರಸ್ ಪ್ರಕರಣಗಳು ವರದಿಯಾಗಿರುವುದಕ್ಕೆ ಬಹುಶಃ ಇದು ಕಾರಣವಾಗಿದೆ. ಅಮೆರಿಕದ ಮೂರನೇ ಒಂದು ಭಾಗದಷ್ಟು ಜನಸಂಖ್ಯೆ ಹೊಂದಿರುವ ಫಿಲಿಪ್ಪೀನ್ಸ್ ನಲ್ಲಿ ಎಷ್ಟೊಂದು ಬಿಸಿಯಾದ ಮತ್ತು ಆರ್ದ್ರ ಹವಾಮಾನವಿದೆ ಎಂದರೆ ಈವರೆಗೆ ಒಂದೇ ಒಂದು ಕೊರೋನವೈರಸ್‌ನ ದೃಢೀಕೃತ ಪ್ರಕರಣ ಆ ದೇಶದಲ್ಲಿಲ್ಲ.
Comments are closed.