ಅಂತರಾಷ್ಟ್ರೀಯ

ಯುರೋಪಿನಿಂದ ನಮ್ಮ ದೇಶಕ್ಕೆ ಬರುವ ಎಲ್ಲಾ ಪ್ರಯಾಣ ಮಾರ್ಗ ರದ್ದು: ಟ್ರಂಪ್

Pinterest LinkedIn Tumblr


ವಾಷಿಂಗ್ಟನ್: ಮುಂದಿನ 30 ದಿನಗಳವರೆಗೆ ಯುರೋಪಿನಿಂದ ಅಮೆರಿಕಾಕ್ಕಿರುವ ಎಲ್ಲಾ ಪ್ರಯಾಣ ಮಾರ್ಗವನ್ನು 30 ದಿನಗಳವರೆಗೂ ರದ್ದುಗೊಳಿಸವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ, ಇದು ಅಡಳಿತಾತ್ಮಕ ದೃಷ್ಟಿಯಲ್ಲಿ ಕರೋನವೈರಸ್ ಹರಡುವಿಕೆಯನ್ನು ತಡೆಗಟ್ಟಲು ತೆಗೆದುಕೊಂಡಿರುವ ಅತೀ ದೊಡ್ಡ ಕ್ರಮ ಮಾದ್ಯಮದ ವರದಿ ತಿಳಿಸಿದೆ.

“ವಿದೇಶಿ ವೈರಸ್” ಎಂದು ಹೆಸರಿಸಿರುವ ಅವರು, ರೋಗದ ಶೀಘ್ರ ಹರಡುವಿಕೆಯನ್ನು ತಡೆಗಟ್ಟಲು ಈ ಈ ನಿಯಮವನ್ನು ರೂಪಿಸಲಾಗಿದೆ. ಈಗಾಗಲೇ ಅಮೆರಿಕಾದಲ್ಲಿ 1,100 ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ. ಷೇರು ಮಾರುಕಟ್ಟೆಗಳನ್ನು ಕುಸಿದು ಬಿದ್ದಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಆದರೇ ಇದು ಆರ್ಥಿಕ ಬಿಕ್ಕಟ್ಟು ಅಲ್ಲ, ನಿರ್ಬಂಧಗಳು ಕೇವಲ ತಾತ್ಕಲಿಕ, ನಾವು ರಾಷ್ಟ್ರವಾಗಿ ಮತ್ತು ಪ್ರಪಂಚವಾಗಿ ಜಯಿಸುತ್ತೇವೆ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ವೈರಸ್ ಅನ್ನು ಸಾಂಕ್ರಮಿಕ ರೋಗ ಎಂದು ಪರಿಗಣಿಸಿದ್ದು , ಈಗಾಗಲೇ ಈ ಮಾರಕ ಸೋಂಕಿಗೆ 1,23,000ಕ್ಕಿಂತ ಹೆಚ್ಚು ಜನರು ತುತ್ತಾಗಿದ್ದಾರೆ. ಹಾಗೂ 3200ಕ್ಕಿಂತ ಹೆಚ್ಚು ಜನರು ಮೃತಪಟ್ಟಿದ್ದಾರೆ.

Comments are closed.