ಅಂತರಾಷ್ಟ್ರೀಯ

ಕೊರೊನಾ ವೈರಸ್: ವೃದ್ಧ ದಂಪತಿ ಕಿಟಕಿ ಸಂಭಾಷಣೆ ಫೋಟೋ ವೈರಲ್

Pinterest LinkedIn Tumblr


ವಾಷಿಂಗ್ಟನ್: ಚೀನಾದಲ್ಲಿ ಹುಟ್ಟಿಕೊಂಡ ಕೊರೊನಾ ವೈರಸ್ ಮಹಾಮಾರಿ ಇದೀಗ ವಿಶ್ವದ ಬಹುತೇಕೆ ದೇಶಗಳಿಗೆ ಕಾಲಿಟ್ಟು ಅಲ್ಲಿನ ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ. ಈ ವೈರಸ್ ನ ಬೀತಿಯಿಂದಾಗಿ ಜನರು ಪರಸ್ಪರ ಮುಖಕೊಟ್ಟು ಮಾತನಾಡದ ಪರಿಸ್ಥಿತಿ ಉಂಟಾಗಿದೆ.

ಕೊರೊನಾ ಪ್ರಕರಣಗಳು ವರದಿಯಾಗತೊಡಗಿದ ಸಮಯದಿಂದ ಹಲವಾರು ಮನಕಲುಕುವ ಸುದ್ದಿಗಳು ವರದಿಯಾಗುತ್ತಲೇ ಇವೆ. ಇದಕ್ಕೊಂದು ಹೊಸ ಸೇರ್ಪಡೆ ಎಂಬಂತೆ ವೃದ್ಧ ದಂಪತಿ ಕಿಟಕಿ ಗಾಜಿನ ಮೂಲಕ ಸಂವಹನ ನಡೆಸುತ್ತಿರುವ ಫೋಟೋ ಒಂದು ಇದೀಗ ಇಂಟರ್ನೆಟ್ ಜಗತ್ತನ್ನೇ ತಲ್ಲಣಗೊಳಿಸಿದೆ.

ವಾಷಿಂಗ್ಟನ್ ನ ಕಿರ್ಕ್ ಲ್ಯಾಂಡ್ ನಲ್ಲಿರುವ ಜೆನೆ ಕ್ಯಾಂಪ್ ಬೆಲ್ ಮತ್ತು ಅವರ 60 ವರ್ಷ ಪ್ರಾಯದ ಪತ್ನಿ ಡೊರೊತಿ ಕ್ಯಾಂಪ್ ಬೆಲ್ ಕಿಟಕಿ ಗಾಜಿನ ಮೂಲಕ ಸಂವಹನ ನಡೆಸುತ್ತಿದ್ದಾರೆ. ಕಿರ್ಕ್ ಲ್ಯಾಂಡ್ ನಲ್ಲಿರುವ ಲೈಫ್ ಕೇರ್ ಸೆಂಟರ್ ನಲ್ಲಿ ಈ ಘಟನೆ ನಡೆದಿದ್ದು ಜೆನೆ ಅವರ ಪತ್ನಿ ಈ ಆರೋಗ್ಯ ಪಾಲನಾ ಕೇಂದ್ರದಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಈ ಭಾಗದಲ್ಲಿ ಹಲವು ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿರುವುದಾಗಿ ವರದಿಯಾಗಿದೆ.

Comments are closed.