ಅಂತರಾಷ್ಟ್ರೀಯ

ತಮ್ಮ ದೇಶಕ್ಕೆ ಮರಳಿದ ನಂತರ ಇಂಡಿಯಾದ ಕುರಿತು ಟ್ರಂಪ್ ಮಹತ್ವದ ಹೇಳಿಕೆ!

Pinterest LinkedIn Tumblr


ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತಮ್ಮ ದೇಶಕ್ಕೆ ಮರಳಿದ್ದಾರೆ. ಅವರು ಭಾರತ ಭೇಟಿಯಿಂದ ತುಂಬಾ ಸಂತೋಷಪಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಡಿ ಹೊಗಳಿದರು.

‘ಭಾರತ ಭವ್ಯವಾದ ದೇಶ. ಅಲ್ಲಿನ ಔಪಚಾರಿಕತೆ ಬಹಳ ಅಮೋಘವಾಗಿತ್ತು. ಭಾರತ ಭೇಟಿಯನ್ನು ನಾವು ತುಂಬಾ ಆನಂದಿಸಿದೆವು. ಪ್ರಧಾನಿ ನರೇಂದ್ರ ಮೋದಿ ಒಬ್ಬ ಮಹಾನ್ ವ್ಯಕ್ತಿ. ‘ಸಂಬಂಧದಲ್ಲಿ ಸಾಕಷ್ಟು ಪ್ರಗತಿ ಕಂಡುಬಂದಿದೆ. ನಾವು ಈಗ ಭಾರತದೊಂದಿಗೆ ಅಸಾಧಾರಣ ಸಂಬಂಧವನ್ನು ಹೊಂದಿದ್ದೇವೆ. ನಾವು ಭಾರತದೊಂದಿಗೆ ಸಾಕಷ್ಟು ವ್ಯವಹಾರ ಮಾಡುತ್ತಿದ್ದೇವೆ. ಅವರು ಅಮೆರಿಕಕ್ಕೆ ಶತಕೋಟಿ ಡಾಲರ್‌ಗಳನ್ನು ಕಳುಹಿಸುತ್ತಿದ್ದಾರೆ’ ಎಂದು ಡೊನಾಲ್ಡ್ ಟ್ರಂಪ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

‘ಈಗಷ್ಟೇ ಲ್ಯಾಂಡ್ ಆದೆ. ಭಾರತ ಒಂದು ದೊಡ್ಡ ದೇಶ. ಪ್ರಯಾಣ ಬಹಳ ಯಶಸ್ವಿಯಾಗಿದೆ’ ಎಂದು ಭಾರತದಿಂದ ಅಮೆರಿಕಕ್ಕೆ ಮರಳಿದ ಕೂಡಲೇ ಟ್ರಂಪ್ ಟ್ವೀಟ್ ಮಾಡಿದ್ದಾರೆ. . ಈ ಹಿಂದೆ ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್, “ಪ್ರಧಾನಿ ಮೋದಿ ಬಹಳ ಧಾರ್ಮಿಕ ಮತ್ತು ಶಾಂತ ವ್ಯಕ್ತಿ. ಆದರೆ ಅವರು ನಿಜಕ್ಕೂ ತುಂಬಾ ಕಟ್ಟುನಿಟ್ಟಿನ ವ್ಯಕ್ತಿ. ನಾನು ಅವರನ್ನು ಕಾರ್ಯರೂಪದಲ್ಲಿ ನೋಡಿದೆ” ಎಂದು ಹೇಳಿದರು.

ಮಂಗಳವಾರ ರಾತ್ರಿ 10 ಗಂಟೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡು ದಿನಗಳ ಭಾರತ ಪ್ರವಾಸದ ನಂತರ ಅಮೆರಿಕಕ್ಕೆ ತೆರಳಿದರು. ಇದಕ್ಕೂ ಮೊದಲು ದೆಹಲಿಯಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಟ್ರಂಪ್ ತಮ್ಮ ಪ್ರವಾಸದ ಸಮಯದಲ್ಲಿ ಅಹಮದಾಬಾದ್‌ನ ಸಬರಮತಿ ಆಶ್ರಮ ಮತ್ತು ಆಗ್ರಾದ ತಾಜ್‌ಮಹಲ್‌ಗೆ ಭೇಟಿ ನೀಡಿದರು.

Comments are closed.