ಅಂತರಾಷ್ಟ್ರೀಯ

ಫೇಸ್ ಬುಕ್ ನಲ್ಲಿ ಹೆಂಡತಿಯ ಸ್ನಾನದ ವಿಡಿಯೋ ನೋಡಿ ಪತಿ ಶಾಕ್

Pinterest LinkedIn Tumblr


ಮ್ಯಾಡ್ರಿಡ್: ಮಹಿಳೆ ತನ್ನ ಪತಿಗೆ ಸ್ನಾನದ ವಿಡಿಯೋವನ್ನು ಕಳುಹಿಸುವ ಭರದಲ್ಲಿ ಮಿಸ್ ಆಗಿ ಅದನ್ನು ಫೇಸ್‍ಬುಕ್ ಲೈವ್‍ನಲ್ಲಿ ಪೋಸ್ಟ್ ಮಾಡಿರುವ ಘಟನೆ ಸ್ಪೇನ್‍ನಲ್ಲಿ ನಡೆದಿದೆ.

ಸೋನಾ (ಹೆಸರು ಬದಲಾಯಿಸಲಾಗಿದೆ) ಆಕಸ್ಮಿಕವಾಗಿ ಪತಿಗೆ ಸ್ನಾನದ ವಿಡಿಯೋ ಕಳುಹಿಸುವಾಗ ಅದನ್ನು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾಳೆ. ಸೋನಾ ಮತ್ತು ಸುಹೇಲ್ (ಹೆಸರು ಬದಲಾಯಿಸಲಾಗಿದೆ.) ಕೆಲವು ವರ್ಷಗಳ ಹಿಂದೆ ಮದುವೆಯಾಗಿದ್ದರು.

ಪತಿ ಸುಹೇಲ್ ವಿವಾಹವಾದಗಿನಿಂದ ಉದ್ಯೋಗಕ್ಕಾಗಿ ಬೇರೆ ದೇಶದಲ್ಲಿ ವಾಸಿಸುತ್ತಿದ್ದನು. ಈಕೆ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದಳು. ಹೀಗಾಗಿ ಸೋನಾ ಮತ್ತು ಸುಹೇಲ್ ಸದಾ ಸೆಕ್ಸ್ ಚಾಟ್ ಮಾಡುತ್ತಿದ್ದರು. ಆಗಾಗ ಇಬ್ಬರು ಬೆತ್ತಲೆ ಫೋಟೋ ಮತ್ತು ವಿಡಿಯೋವನ್ನು ಶೇರ್ ಮಾಡಿಕೊಳ್ಳುತ್ತಿದ್ದರು.

ಒಂದು ದಿನ ಪತಿ ಸುಹೇಲ್, ಸ್ನಾನ ಮಾಡುವ ವಿಡಿಯೋ ಕಳುಹಿಸುವಂತೆ ಸೋನಾ ಬಳಿ ಕೇಳಿಕೊಂಡಿದ್ದಾನೆ. ಹೀಗಾಗಿ ಸೋನಾ ಕೂಡ ಸ್ನಾನ ಮಾಡಿ ಅದನ್ನು ತನ್ನ ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿಕೊಂಡು ಪತಿಗೆ ಕಳುಹಿಸಿದ್ದಾಳೆ. ಆದರೆ ಪತಿ ತನಗೆ ಸ್ನಾನದ ವಿಡಿಯೋ ಸಿಗಲಿಲ್ಲ ಎಂದು ಹೇಳಿದ್ದಾನೆ. ಜೊತೆಗೆ ಫೇಸ್‍ಬುಕ್ ಮೆಸೆಂಜರ್ ಮೂಲಕ ಕಳುಹಿಸುವಂತೆ ಹೇಳಿದ್ದಾನೆ.

ಸೋನಾ ಪತಿಗೆ ಫೇಸ್‍ಬುಕ್ ಮೆಸೆಂಜರ್‍ ಗೆ ವಿಡಿಯೋ ಕಳಿಸುವಾಗ ಆಕಸ್ಮಿಕಾಗಿ ಫೇಸ್‍ಬುಕ್ ಲೈವ್‍ನಲ್ಲಿ ಅಪ್ಲೋಡ್ ಮಾಡಿದ್ದಾಳೆ. ಸ್ವಲ್ಪ ಸಯಮದ ನಂತರ ಸುಹೇಲ್, ಪತ್ನಿಯ ಫೇಸ್‍ಬುಕ್ ಖಾತೆಯನ್ನು ನೋಡಿ ಶಾಕ್ ಆಗಿದ್ದಾನೆ. ಯಾಕೆಂದರೆ ಅಲ್ಲಿ ಪತ್ನಿ ಸ್ನಾನ ಮಾಡುವ ವಿಡಿಯೋ ಲೈವ್ ಹೋಗುತ್ತಿತ್ತು. ತಕ್ಷಣ ಸೋನಾಗೆ ಫೋನ್ ಮಾಡಿ ಈ ಬಗ್ಗೆ ತಿಳಿಸಿ ಡಿಲೀಟ್ ಮಾಡುವಂತೆ ಹೇಳಿದ್ದಾನೆ.

ಸೋನಾ ಕೂಡ ತಕ್ಷಣ ವಿಡಿಯೋವನ್ನು ಡಿಲೀಟ್ ಮಾಡಿದ್ದಾಳೆ. ಆದರೆ ವಿಡಿಯೋ ಅಪ್ಲೋಡ್ ಅದ 5 ನಿಮಿಷಗಳಲ್ಲಿ ಸುಮಾರು 2 ಸಾವಿರ ಜನರು ಅದನ್ನು ನೋಡಿದ್ದರು. ಅಲ್ಲದೇ ಆ ವಿಡಿಯೋವನ್ನು ಡೌನ್‍ಲೋಡ್ ಮಾಡಿ ಪೋರ್ನ್ ವೆಬ್‍ಸೈಟ್‍ನಲ್ಲಿ ಅಪ್ಲೋಡ್ ಕೂಡ ಮಾಡಿದ್ದರು. ಹೀಗಾಗಿ ಸೋನಾ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾಳೆ. ಅಲ್ಲದೇ ಶೀಘ್ರದಲ್ಲೇ ಆ ವಿಡಿಯೋವನ್ನು ಡಿಲೀಟ್ ಮಾಡುವಂತೆ ಮನವಿ ಮಾಡಿಕೊಂಡಿದ್ದಾಳೆ.

Comments are closed.