ಅಂತರಾಷ್ಟ್ರೀಯ

ಅಮೆರಿಕಾ ಪಡೆಗಳಿಂದ ಅಲ್ ಖೈದಾ ನಾಯಕನ ಹತ್ಯೆ: ಟ್ರಂಪ್

Pinterest LinkedIn Tumblr


ಅಮೆರಿಕಾ: ಯೆಮನ್‌ನಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ, ಅರೇಬಿಯನ್ ಪೆನಿನ್ಸುಲಾದ (AQAP) ಇಸ್ಲಾಮಿಸ್ಟ್ ಗುಂಪಿನ ಅಲ್ ಖೈದಾ ನಾಯಕ ಖಾಸಿಮ್ ಅಲ್-ರೇಮಿ ಅವರನ್ನು ಅಮೆರಿಕ ಹತ್ಯೆಗೈದಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಹೇಳಿದ್ದಾರೆ ಎಂದು ವರದಿಯಾಗಿದೆ.

“ರೇಮಿ ನಾಯಕತ್ವದಲ್ಲಿ ಎಕ್ಯೂಎಪಿ, ಯೆಮನ್‌ನಲ್ಲಿ ನಾಗರಿಕರ ವಿರುದ್ಧ ಹಲವು ಹಿಂಸಾಚಾರವನ್ನು ನಡೆಸಿದ್ದು ಮಾತ್ರವಲ್ಲದೆ, ಅಮೆರಿಕಾ ಪಡೆಗಳ ವಿರುದ್ಧವೂ ದಾಳಿಗಳನ್ನು ನಡೆಸಲು ಯೋಜನೆ ರೂಪಿಸಿತ್ತು ಎಂದು ಟ್ರಂಪ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆದರೇ ಅಲ್ ಖೈದಾ ನಾಯಕ ರೆಮಿಯನ್ನು ಯಾವಾಗ ಹತ್ಯೆಮಾಡಲಾಯಿತು ಎಂಬುದನ್ನು ಡೊನಾಲ್ಡ್ ಟ್ರಂಪ್ ಪ್ರಸ್ತಾಪಿಸಲಿಲ್ಲ. ಈ ಹತ್ಯೆಯಿಂದ ಜಾಗತಿಕವಾಗಿ ಅಲ್ ಖೈದಾದ ಪ್ರಭಾವ ಮತ್ತಷ್ಟು ಕಡಿಮೆಯಾಗಲಿದ್ದು ರಾಷ್ಟ್ರೀಯ ಭದ್ರತೆಗೆ ಅಪಾಯ ಒಡ್ಡುವವರನ್ನು ಇದೇ ರೀತಿ ಹತ್ಯೆ ಮಾಡಲಾಗುವುದು ಎಂದಿದ್ದಾರೆ.

ಒಸಾಮಾ ಬಿನ್ ಲಾಡೆನ್ ಸಂಘಟಿಸಿದ ಅಲ್ ಖೈದಾ ಉಗ್ರರ ಮಾರಕ ಶಾಖೆಗಳಲ್ಲಿ ಎಕ್ಯೂಎಪಿ ಕೂಡ ಒಂದು ಎಂದು ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

Comments are closed.