
ಮಾಸ್ಕೋ: ತಂದೆ 98 ಸಾವಿರ ಕೋಟಿಯ ಒಡೆಯನಾದರೂ ರಷ್ಯಾದ ವ್ಯಕ್ತಿಯೊಬ್ಬ ಬಾಡಿಗೆ ಮನೆಯಲ್ಲಿ ವಾಸಿಸುವ ಮೂಲಕ ವಿಶ್ವಾದ್ಯಂತ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ರಷ್ಯಾದ 11ನೇ ಶ್ರೀಮಂತನಾಗಿರುವ ಮಿಖಾಯಿಲ್ ಫ್ರಿಡ್‍ಮ್ಯಾನ್ 13.7 ಬಿಲಿಯನ್ ಡಾಲರ್ (98 ಸಾವಿರ ಕೋಟಿ ರೂ.)ಯ ಒಡೆಯ. ಹೀಗಿದ್ದರೂ ಸಹ ಅವರ 19 ವರ್ಷದ ಮಗ ಅಲೆಕ್ಸಾಂಡರ್ ಫ್ರಿಡ್‍ಮ್ಯಾನ್ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.
ಅಲೆಕ್ಸಾಂಡರ್ ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಎರಡು ರೂಮ್ ಇರುವ ಮನೆಯನ್ನು ಬಾಡಿಗೆಗೆ ಪಡೆದಿದ್ದಾರೆ. ಪ್ರತಿ ತಿಂಗಳು ಆ ಮನೆಗೆ 500 ಡಾಲರ್ (35 ಸಾವಿರ ರೂ.) ಬಾಡಿಗೆ ನೀಡುತ್ತಿದ್ದಾರೆ. ಅಲೆಕ್ಸಾಂಡರ್ ಕೋಟ್ಯಧೀಶನ ಮಗನಾಗಿದ್ದು, ದುಬಾರಿ ಕಾರನ್ನು ಖರೀದಿಸಬಹುದಿತ್ತು. ಆದರೆ ಅವರು ಕಾರನ್ನು ಖರೀದಿಸಲಿಲ್ಲ. ಅಲೆಕ್ಸಾಂಡರ್ ಟ್ಯಾಕ್ಸಿ ಅಥವಾ ಮೆಟ್ರೋದಲ್ಲಿ ತಮ್ಮ ಆಫೀಸ್‍ಗೆ ಪ್ರಯಾಣಿಸುತ್ತಾರೆ.
ನನ್ನ ಸ್ವಂತ ಸಂಪಾದನೆಯಿಂದ ನಾನು ನನ್ನ ಉಡುಪುಗಳನ್ನು ಖರೀದಿಸಿದ್ದೇನೆ. ನಾನು ನನ್ನದೆ ಆದ ಹೆಸರನ್ನು ಮಾಡಬೇಕು ಎಂದು ಬಯಸುತ್ತೇನೆ. ಕಳೆದ ವರ್ಷ ಲಂಡನ್‍ನ ಹೈಸ್ಕೂಲ್‍ವೊಂದರಲ್ಲಿ ಪದವಿ ಪಡೆದು ಮಾಸ್ಕೋಗೆ ಹಿಂತಿರುಗಿದೆ. 5 ತಿಂಗಳ ಹಿಂದೆ ನಾನು ಐವರು ಉದ್ಯೋಗಿಗಳೊಂದಿಗೆ ಸುಮಾರು 3 ಕೋಟಿ ರೂ.ಗೆ ಹೊಸ ವ್ಯವಹಾರವನ್ನು ಪ್ರಾರಂಭಿಸಿದೆ. ನಾನು ಹುಕ್ಕಾ ಉತ್ಪನ್ನಗಳನ್ನು ಪೂರೈಸುವ ವ್ಯವಹಾರವನ್ನು ಹೊಂದಿದ್ದೇನೆ.
ಅಲೆಕ್ಸಾಂಡರ್ ಅವರ ತಂದೆ ಮಿಖಾಯಿಲ್ ಹಲವು ದೊಡ್ಡ ಮಾಲೀಕರಾಗಿದ್ದು, ಕೆಲವು ಚಿಲ್ಲರೆ ಅಂಗಡಿಗಳನ್ನು ಸಹ ಹೊಂದಿದ್ದಾರೆ. ಬೇರೆ ಗ್ರಾಹಕರಿಗೆ ಹೊರತುಪಡಿಸಿ ಅಲೆಕ್ಸಾಂಡರ್ ತಮ್ಮ ತಂದೆಯ ಚಿಲ್ಲರೆ ಅಂಗಡಿಗೂ ವಸ್ತುಗಳನ್ನು ಸಪ್ಲೈ ಮಾಡುತ್ತಾರೆ. ಜನರು ಅಲೆಕ್ಸಾಂಡರ್ ಅವರ ತಂದೆಯ ಹೆಸರಿನ ಬದಲಾಗಿ ಅವರ ಪರಿಶ್ರಮ ನೋಡಿ ಅವರು ಮಾರಾಟ ಮಾಡುವ ವಸ್ತುಗಳನ್ನು ಖರೀದಿಸುತ್ತಿದ್ದಾರೆ.
ನಿಮ್ಮ ತಂದೆಯಿಂದ ಏನನ್ನೂ ಕಲಿತ್ತಿದ್ದೀರಾ ಎಂದು ಅಲೆಕ್ಸಾಂಡರ್ ಅವರನ್ನು ಪ್ರಶ್ನಿಸಿದಾಗ, ನಾವು ನಮ್ಮ ವ್ಯವಹಾರವನ್ನು ನ್ಯಾಯಯುತ ರೀತಿಯಲ್ಲಿ ನಡೆಸುತ್ತೇವೆ. ನನ್ನ ತಂದೆ ಯಾವಾಗಲೂ ನನ್ನ ಎಲ್ಲ ಯೋಜನೆಗಳಲ್ಲಿ ಪಾಲುದಾರ ಅಂತಾ ಹೇಳುತ್ತಾರೆ ಎಂದು ಅಲೆಕ್ಸಾಂಡರ್ ತಿಳಿಸಿದ್ದಾರೆ.
Comments are closed.