ಅಂತರಾಷ್ಟ್ರೀಯ

ಸೆಕ್ಸ್ ವೇಳೆ ಕಾಂಡೋಮ್ ಬಳಸದೇ ಇಲ್ಲದಿರುವುದಕ್ಕೆ ಅತ್ಯಾಚಾರ ದೂರು

Pinterest LinkedIn Tumblr


ಲಂಡನ್: ವೈದ್ಯನೊಬ್ಬ ಸೆಕ್ಸ್ ಮಾಡುವ ವೇಳೆ ಕಾಂಡೋಮ್ ಬಳಸದಿದ್ದಕ್ಕೆ ಯುವತಿ ತನ್ನ ಮೇಲೆ ಲೈಂಗಿಕವಾಗಿ ದೌರ್ಜನ್ಯ ಎಸಗಿದ್ದಾನೆ ಎಂದು ದೂರು ದಾಖಲಿಸಿದ್ದಾಳೆ.

ಮ್ಯಾಥ್ಯೂ ಸೆವೆಲ್ ಸೆಕ್ಸ್ ಮಾಡುವಾಗ ಕಾಂಡೋಮ್ ಬಳಸದೆ ಈಗ ಪೊಲೀಸರ ಅಥಿತಿಯಾಗಿದ್ದಾನೆ. ಸೆವೆಲ್ ಕಾಂಡೋಮ್ ಬಳಸಲಿಲ್ಲ ಮತ್ತು ಅಸುರಕ್ಷಿತ ಲೈಂಗಿಕ ಕ್ರಿಯೆಗೆ ತಾನು ಎಂದಿಗೂ ಒಪ್ಪುವುದಿಲ್ಲ ಎಂದು ಯುವತಿ ಆರೋಪಿಸಿದ್ದಾಳೆ. ಹೀಗಾಗಿ ಅತ್ಯಾಚಾರದ ಆರೋಪದ ಮೇರೆಗೆ ಸೆವೆಲ್ ನನ್ನು ಪೊಲೀಸರು ಬಂಧಿಸಿದ್ದಾರೆ.

23 ವರ್ಷ ಯುವತಿಯನ್ನು ಆರೋಪಿ ಸೆವೆಲ್ ಡೇಟಿಂಗ್ ಆ್ಯಪ್ ಟಿಂಡರ್ ಮೂಲಕ ಭೇಟಿಯಾಗಿದ್ದನು. ಅಲ್ಲಿ ಸೆವೆಲ್ ತನ್ನ ಪ್ರೊಫೈಲ್‍ನಲ್ಲಿ ತನಗೆ 27 ವರ್ಷ ಎಂದು ಹೇಳಿಕೊಂಡಿದ್ದನು. ಆದರೆ ವೈದ್ಯನಿಗೆ 36 ವರ್ಷ ವಯಸ್ಸಾಗಿತ್ತು.

ಆರೋಪಿ ವೈದ್ಯ ಸುಳ್ಳು ಹೇಳಿ ಮಿಡಲ್ಸ್ ಬರೋದಲ್ಲಿನ ಬಾರಿನಲ್ಲಿ ಯುವತಿಯನ್ನು ಭೇಟಿಯಾಗಿದ್ದನು. ಅಲ್ಲಿ ತನ್ನ ವಯಸ್ಸಿನ ಬಗ್ಗೆ ಸುಳ್ಳು ಹೇಳಿದ್ದಾಗಿ ಒಪ್ಪಿಕೊಂಡಿದ್ದನು. ಈ ವೇಳೆ ಸೆವೆಲ್ ಯುವತಿಯನ್ನು ತನ್ನ ಮನೆಗೆ ಬರುವಂತೆ ಕರೆದಿದ್ದನು.

ಮನೆಗೆ ಹೋದ ಬಳಿಕ ಯುವತಿ ಒಪ್ಪಿದ ಮೇಲೆ ಆರೋಪಿ ಸೆವೆಲ್ ಸೆಕ್ಸ್ ಮಾಡಲು ಮುಂದಾಗಿದ್ದಾನೆ. ಆದರೆ ಈ ವೇಳೆ ಸೆವೆಲ್ ಯುವತಿಗೆ ಗೊತ್ತಿಲ್ಲದಂತೆ ಕಾಂಡೋಮ್ ಅನ್ನು ತೆಗೆದು ಹಾಕಿದ್ದಾನೆ. ಆದರೆ ಯುವತಿ ಸೆವೆಲ್ ಕಾಂಡೋಮ್ ಬಳಸಿದ್ದಾನೆ ಎಂದುಕೊಂಡಿದ್ದಳು. ನಂತರ ಸೆವೆಲ್ ಕಾಂಡೋಮ್ ಬಳಸಿಲ್ಲೆಂದು ತಿಳಿಯುತ್ತಿದ್ದಂತೆ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ.

ಯುವತಿಯ ದೂರಿನ ಆಧಾರದ ಮೇರೆಗೆ ಪೊಲೀಸರು ಆತನ ವಿರುದ್ಧ ಪ್ರರಕರಣ ದಾಖಲಿಸಿಕೊಂಡು ಬಂಧಿಸಿದ್ದರು. ಆರೋಪಿ ಸೆವೆಲ್ ಕೂಡ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.