ಅಂತರಾಷ್ಟ್ರೀಯ

ಕಾಂಡೊಮ್ ಬಳಸಿದರೂ ಹೆಂಡತಿ ಗರ್ಭಿಣಿ: ನ್ಯಾಯಕ್ಕಾಗಿ ಗಂಡನ ಹೋರಾಟ!

Pinterest LinkedIn Tumblr


ಬೀಜಿಂಗ್: ಸುರಕ್ಷಿತ ಲೈಂಗಿಕತೆಗಾಗಿ ಕಾಂಡೊಮ್ ಗಳನ್ನು ಬಳಕೆ ಮಾಡಲಾಗುತ್ತದೆ. ಆದರೆ ಹೀಗೆ ಸುರಕ್ಷತೆಗಾಗಿ ಬಳಸಿದ ಕಾಂಡೊಮ್ ಗಳೇ ಕೈ ಕೊಟ್ಟರೆ? ಇಂತಹದ್ದೊಂದು ಘಟನೆ ಚೀನಾದಲ್ಲಿ ನಡೆದಿದೆ. ಈಗಾಗಲೇ ಎರಡು ಮಕ್ಕಳ ತಂದೆಯಾಗಿರುವ ವ್ಯಾಂಗ್ ತನ್ನ ಪತ್ನಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವ ಸಂದರ್ಭದಲ್ಲಿ ಪ್ರತಿಷ್ಠಿತ ಕಂಪೆನಿಯೊಂದರ ಕಾಂಡೊಮ್ ಬಳಸಿದ್ದಾನೆ. ಆದರೆ ವಿಚಿತ್ರವೆಂದರೆ ಕಾಂಡೊಮ್ ಧರಿಸಿ ಲೈಂಗಿಕ ಕ್ರಿಯೆ ನಡೆಸಿದ್ದರೂ ಆತನ ಪತ್ನಿ ಗರ್ಭಿಣಿಯಾಗಿದ್ದಾಳೆ.

ಈಗಾಗಲೇ ಎರಡು ಮಕ್ಕಳನ್ನು ಹೊಂದಿರುವ ವ್ಯಾಂಗ್ ದಂಪತಿಗೆ ಮೂರನೇ ಮಗು ಬೇಡವಾಗಿತ್ತು. ಹಾಗಾಗಿ ಅವರು ಲೈಂಗಿಕ ಕ್ರಿಯೆ ನಡೆಸುವ ಸಂದರ್ಭದಲ್ಲಿ ಸುರಕ್ಷತೆಗಾಗಿ ಕಾಂಡೋಮ್ ಮೊರೆ ಹೋಗಿದ್ದರು. ಆದರೆ ಅದೇ ಇದೀಗ ಕೈಕೊಟ್ಟಿರುವುದು ವ್ಯಾಂಗ್ ಚಿಂತೆಯನ್ನು ಹೆಚ್ಚಿಸಿದೆ. ತಾನು ಬಳಸಿದ್ದ ಕಾಂಡೋಮ್ ನಲ್ಲಿ ರಂಧ್ರವಿತ್ತು ಎಂಬುದು ವ್ಯಾಂಗ್ ಆರೋಪ!

ಈ ಎಡವಟ್ಟಿನಿಂದಾಗಿ ವ್ಯಾಂಗ್ ಪತ್ನಿ ಗರ್ಭ ಧರಿಸಿದ್ದು ಇನ್ನೊಂದು ಮಗುವನ್ನು ಹೆರಲು ಆಕೆಯ ಆರೋಗ್ಯ ಪೂರಕವಾಗಿಲ್ಲದಿದ್ದ ಕಾರಣ ಗರ್ಭಪಾತ ಮಾಡಿಸುವ ಅನಿವಾರ್ಯತೆ ವ್ಯಾಂಗ್ ಗೆ ಎದುರಾಗಿತ್ತು. ಇದೀಗ ಕಳಪೆ ಗುಣಮಟ್ಟದ ಕಾಂಡೋಮ್ ನಿಂದಾಗಿ ತನ್ನ ಪತ್ನಿ ಸಮಸ್ಯೆ ಎದುರಿಸುತ್ತಿದ್ದಾಳೆ ಎಂದು ವ್ಯಾಂಗ್ ಆರೋಪಿಸಿದ್ದಾನೆ.

ಮಾತ್ರವಲ್ಲದೇ ಪ್ರಾರಂಭದಲ್ಲಿ ಇದರ ಕುರಿತಾಗಿ ಗ್ರಾಹಕ ಹಿತರಕ್ಷಣಾ ವೇದಿಕೆಯ ಮೊರೆ ಹೋಗಿದ್ದ ವ್ಯಾಂಗ್ ಗೆ ಅಲ್ಲಿ ತನ್ನ ಆರೋಪವನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲ. ಕಾಂಡೋಮ್ ಬಳಸಿದ ವಿಧಾನದ ಕುರಿತಾಗಿ ಪ್ರಾಧಿಕಾರವು ವ್ಯಾಂಗ್ ಅನ್ನು ಪ್ರಶ್ನಿಸಿತ್ತು. ಆದರೆ ಅದನ್ನು ವಿವರಿಸಲು ಆತನಿಗೆ ಸಾಧ್ಯವಾಗಿಲ್ಲ.

ಬಳಿಕ ವ್ಯಾಂಗ್ ಬಳಸಿದ ಕಾಂಡೋಮ್ ಬ್ಯಾಚ್ ನ ಇನ್ನು ಕೆಲವು ಕಾಂಡೋಮ್ ಗಳನ್ನು ಪರೀಕ್ಷಿಸಲು ಪ್ರಾಧಿಕಾರ ಬಯಸಿತ್ತು. ಆದರೆ ಕಾಂಡೋಮ್ ತಯಾರಿಕಾ ಕಂಪೆನಿ 2018ರ ನವಂಬರ್ ಬ್ಯಾಚಿನಲ್ಲಿ ತಯಾರಾದ ಆ ಕಾಂಡೋಮ್ ಗಳೆಲ್ಲವೂ ಮಾರಾಟವಾಗಿದೆ ಎಂದು ಹೇಳಿದ್ದರಿಂದ ವ್ಯಾಂಗ್ ಸಂಕಷ್ಟ ಇನ್ನಷ್ಟು ಹೆಚ್ಚಾಗಿದೆ. ಇದೀಗ ತನ್ನ ಪತ್ನಿ ಅನುಭವಿಸಿದ ಸಂಕಟವನ್ನು ವಿವರಿಸಿ ಭಾವನಾತ್ಮಕ ನೆಲೆಯಲ್ಲಿ ತನಗೆ ನ್ಯಾಯ ಸಿಗುವುದೋ ಎಂಬ ನಿರೀಕ್ಷೆಯಲ್ಲಿ ವ್ಯಾಂಗ್ ನ್ಯಾಯಾಲಯದ ಮೊರೆ ಹೋಗಿದ್ದಾನೆ.

ಒಟ್ಟಿನಲ್ಲಿ ತಮ್ಮ ಲೈಂಗಿಕ ಸಂಪರ್ಕವನ್ನು ಸುರಕ್ಷಿತವಾಗಿಸುವ ನಿಟ್ಟಿನಲ್ಲಿ ತಾವು ಬಳಸಿದ ಕಾಂಡೋಮ್ ಒಂದು ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಬಹುದು ಎಂದು ವ್ಯಾಂಗ್ ದಂಪತಿ ನಿಜವಾಗಿಯೂ ಎಣಿಸಿರಲಿಕ್ಕಿಲ್ಲ!

Comments are closed.