ಅಂತರಾಷ್ಟ್ರೀಯ

ತಪ್ಪಾಗಿ ಗ್ರಹಿಸಿ ಉಕ್ರೇನ್ ವಿಮಾನ ಹೊಡೆದುರುಳಿಸಿದ್ದು ಕ್ಷಮಿಸಲಾಗದ ತಪ್ಪು-ಪ್ರಮಾದಕ್ಕೆ ತೀವ್ರ ವಿಷಾದ: ಇರಾನ್ ಅಧ್ಯಕ್ಷ

Pinterest LinkedIn Tumblr

ತೆಹ್ರಾನ್: ತಪ್ಪಾಗಿ ಗ್ರಹಿಸಿ ಉಕ್ರೇನ್ ವಿಮಾನವನ್ನು ಹೊಡೆದುರುಳಿಸಿದ್ದು, ಕ್ಷಮಿಸಲಾಗದ ತಪ್ಪಾಗಿದ್ದು, ಪ್ರಮಾದಕ್ಕೆ ತೀವ್ರ ವಿಷಾದ ವ್ಯಕ್ತಪಡಿಸುತ್ತೇವೆಂದು ಇರಾನ್ ಅಧ್ಯಕ್ಷ ಹಸನ್ ರೊಹಾನಿ ಹೇಳಿದ್ದಾರೆ.

ಉಕ್ರೇನ್ ವಿಮಾನವನ್ನು ತಪ್ಪಾಗಿ ಗ್ರಹಿಸಿದ ಕಾರಣ ಹೊಡೆದುರುಳಿಸಲಾಗಿತ್ತು. ದಾಳಿ ಉದ್ದೇಶಪೂರ್ವಕವಾಗಿರಲಿಲ್ಲ ಎಂದು ಇರಾನ್ ಸೇನಾಪಡೆ ತಪ್ಪೊಪ್ಪಿಕೊಂಡಿದೆ.

ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಇರಾನ್ ಅಧ್ಯಕ್ಷ ಹಸನ್ ರೊಹಾನಿಯವರು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್, ಇಂತಹ ಪ್ರಮಾದಕರ ತಪ್ಪನ್ನು ತೀವ್ರವಾಗಿ ವಿಷಾದಿಸುತ್ತದೆ. ಘಟನೆಯಲ್ಲಿ ತಮ್ಮ ಕುಟುಂಬಸ್ಥರನ್ನು ಕಳೆದುಕೊಂಡವರಿಗೆ ತೀವ್ರ ಸಂತಾಪವನ್ನು ಸೂಚಿಸುತ್ತೇನೆ. ಘಟನೆಗೆ ತೀವ್ರವಾಗಿ ಸಂತಾಪ ಸೂಚಿಸುತ್ತೇನೆಂದು ಹೇಳಿದ್ದಾರೆ.

ದಾಳಿ ಸಂಬಂಧ ತನಿಖೆಗೆ ಮುಂದುವರೆಯಲಿದ್ದು, ಇದೊಂದು ದೊಡ್ಡ ದುರ್ಘಟನೆ ಹಾಗೂ ಕ್ಷಮಿಸಲಾಗದಂತಹ ತಪ್ಪು ಎಂದು ತಿಳಿಸಿದ್ದಾರೆ.

ಬೋಯಿಂಗ್ 737 ಸರಣಿ ಉಕ್ರೇನ್ ವಿಮಾನ ಕಳೆದ ಬುಧವಾಕ ಬೆಳಿಕ್ಕೆ ಇರಾನ್ ನ ತೆಹ್ರಾನ್ ಇಮಾಮ್ ಕೊಮೆನಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬಿಟ್ಟು ಉಕ್ರೇನ್’ನ ಕೈವ್ ಬೋರಿಸ್ ಪಿಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟಿತ್ತು. ಆದರೆ, ಟೇಕಾಪ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನನಿಲ್ದಾಣದಲ ಬಳಿ ಪತನಗೊಂಡಿತ್ತು. ಪರಿಣಾಮ ವಿಮಾನದಲ್ಲಿದ್ದ 176 ಮಂದಿ ದಾರುಣವಾಗಿ ಸಾವನ್ನಪ್ಪಿದ್ದರು.

ವಿಮಾನ ಪತನಗೊಂಡ ಹಿನ್ನೆಲೆಯಲ್ಲಿ ಆರಂಭದಲ್ಲಿ ಇದನ್ನು ತಾಂತ್ರಿಕ ದೋಷವೆಂದೇ ಹೇಳಲಾಗುತ್ತಿತ್ತು. ಇದರನ್ನು ಉಕ್ರೇನ್ ಹಾಗೂ ಇರಾನ್ ಅಧಿಕಾರಿಗಳು ವಾದಿಸಿದ್ದರು. ಆದರೆ, ವಿಮಾನ ಟೇತಾಱ್ ಆದುವ ಮುನ್ನವೇ ಅಮೆರಿಕಾ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ದಾಳಿ ನಡೆಸಿದ್ದು, ಕೆಲ ಅನುಮಾನಗಳನ್ನು ಹುಟ್ಟು ಹಾಕಿತ್ತು.

ಇದಾದ ಬಳಿಕ ಉಕ್ರೇನ್ ಕೂಡ ವಿಮಾನದ ಮೇಲೆ ದಾಳಿ ಮಾಡಲಾಗಿದೆ ಎಂದು ಹೇಳಿತ್ತು. ಅಲ್ಲದೆ, ತನಿಖೆಗೆ ಆದೇಶಿಸಿತ್ತು.

ನಂತರ ಅಮೆರಿಕಾ ಪ್ರತಿಕ್ರಿಯೆ ನೀಡಿ, ಇರಾನ್ ಮೇಲೆ ಆರೋಪ ಮಾಡಿತ್ತು. ತಪ್ಪಾದ ಗ್ರಹಿಕೆಯಿಂದಾಗಿ ಇರಾನ್ ವಿಮಾನವನ್ನು ಹೊಡೆದುರುಳಿಸಿತ್ತು ಎಂದು ಹೇಳಿದ್ದರು. ಆದರೆ, ಇದನ್ನು ಇರಾನ್ ಒಪ್ಪಿಕೊಳ್ಳದೆ, ತಿರಸ್ಕರಿಸುತ್ತಾ ಬಂದಿತ್ತು. ಇದೀಗ ವಿಮಾನ ಪತನಕ್ಕೆ ತನ್ನ ಸೇನೆಯ ತಪ್ಪು ಗ್ರಹಿಕೆಯೇ ಕಾರಣ ಎಂದು ಒಪ್ಪಿಕೊಂಡಿದೆ.

Comments are closed.