ಅಂತರಾಷ್ಟ್ರೀಯ

180 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಉಕ್ರೇನ್ ನ ವಿಮಾನ ಟೆಹ್ರಾನ್ ಬಳಿ ಅಪಘಾತ !

Pinterest LinkedIn Tumblr
Boeing 737 with 180 passengers crashes near Imam Khomeini Airport in Tehran
A Ukrainian plane crashed near Imam Khomeini Airport in Tehran early Wednesday morning according to Iran???s semi-official news agency ISNA. The Boeing 737 belonging to the Ukrainian Airlines had 180 passengers and crew aboard and crashed shortly after take-off due technical difficulties, ISNA says. Preliminary reports suggest that the plane was en route to Kiev.
Link to picture: https://bit.ly/2QYkZ6H

ಟೆಹ್ರಾನ್: 180 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಉಕ್ರೇನ್ ನ ವಿಮಾನ ಬುಧವಾರ ಬೆಳಗ್ಗೆ ಟೆಹ್ರಾನ್ ವಿಮಾನ ನಿಲ್ದಾಣ ಹತ್ತಿರ ಅಪಘಾತಕ್ಕೀಡಾಗಿದೆ ಎಂದು ಇರಾನ್ ನ ಮಾಧ್ಯಮ ವರದಿ ಮಾಡಿದೆ.

ಯಾವುದೇ ಸಾವು ನೋವುಗಳುಂಟಾದ ಬಗ್ಗೆ ವರದಿಯಾಗಿಲ್ಲ. ಇಮಾಮ್ ಖೊಮೈನಿ ವಿಮಾನ ನಿಲ್ದಾಣದಿಂದ ಹೊರಟ ವಿಮಾನ ತಾಂತ್ರಿಕ ತೊಂದರೆಯಿಂದ ಅಪಘಾತಕ್ಕೀಡಾಗಿರಬಹುದು ಎಂದು ಪ್ರಾಥಮಿಕ ವರದಿ ಹೇಳಿದೆ.

ಟೆಹ್ರಾನ್ ನ ನೈರುತ್ಯ ಭಾಗದಲ್ಲಿ ಈ ಅಪಘಾತ ಸಂಭವಿಸಿದ್ದು ತನಿಖಾ ತಂಡ ಸದ್ಯ ಅಲ್ಲಿಗೆ ತಲುಪಿ ತನಿಖೆ ನಡೆಸುತ್ತಿದೆ ಎಂದು ನಾಗರಿಕ ವಿಮಾನಯಾನ ವಕ್ತಾರ ರೆಜಾ ಜಾಫರ್ಜಾಡೆ ತಿಳಿಸಿದ್ದಾರೆ.

ಉಕ್ರೇನ್ ನ 737-800 ವಿಮಾನ ಇಂದು ಬೆಳಗ್ಗೆ ಉಕ್ರೇನ್ ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ ಹೊತ್ತಿನಲ್ಲಿ ಸಂದೇಶ ರವಾನಿಸುವುದನ್ನು ನಿಲ್ಲಿಸಿತು ಎಂದು ಫೈಟ್ ರಾಡಾರ್ 24 ವೆಬ್ ಸೈಟ್ ವರದಿ ಮಾಡಿದೆ.
ಈ ಬಗ್ಗೆ ವಿಮಾನಯಾನ ಸಂಸ್ಥೆ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ.

ಇರಾನ್ ನ ಕ್ರಾಂತಿಕಾರಿ ನಾಯಕ ಜನರಲ್ ಖಾಸಿಮ್ ಸೊಲೈಮಾನಿಯ ಹತ್ಯೆಗೆ ಪ್ರತೀಕಾರವಾಗಿ ಇರಾಕ್ ನ ಅಮೆರಿಕಾ ಸೇನಾಪಡೆ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ ಸ್ವಲ್ಪ ಹೊತ್ತಿನಲ್ಲಿಯೇ ವಿಮಾನ ಅಪಘಾತಕ್ಕೀಡಾಗಿದೆ.

Comments are closed.