
ಟೆಹ್ರಾನ್: ಅಮೆರಿಕದ ವೈಮಾನಿಕ ದಾಳಿಯಲ್ಲಿ ಇರಾನ್ ಜನರಲ್ ಕಮಾಂಡರ್ ಖಾಸಿಂ ಸೊಲೆಮನಿಯನ್ನು ಹತ್ಯೆಗೈದಿರುವುದಕ್ಕೆ ಪ್ರತೀಕಾರವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಲೆಗೆ 80 ಮಿಲಿಯನ್ ಅಮೆರಿಕನ್ ಡಾಲರ್ ಬಹುಮಾನ ಘೋಷಿಸಲಾಗಿದೆ ಎಂದು ವರದಿಯೊಂದು ತಿಳಿಸಿದೆ.
ಇರಾನ್ ಮಿಲಿಟರಿ ಮುಖ್ಯಸ್ಥ ಖಾಸಿಂ ಅಂತಿಮಯಾತ್ರೆಯ ಮೆರವಣಿಗೆ ಸಂದರ್ಭದಲ್ಲಿ ಸುದ್ದಿಯನ್ನು ಪ್ರಸಾರ ಮಾಡಿದ್ದ ಇರಾನ್ ನ ಅಧಿಕೃತ ಟಿವಿ ಚಾನೆಲ್ ಗಳಲ್ಲಿ, ದೇಶದ ಪ್ರತಿಯೊಬ್ಬ ಇರಾನಿ ಪ್ರಜೆ ಒಂದು ಡಾಲರ್ ಕೊಟ್ಟರೂ…ಅದನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ಹತ್ಯೆಗೈದವರಿಗೆ ಸೇರಲಿದೆ ಎಂದು ಯು.ಕೆ. ಮಿರರ್ ಡಾಟ್ ಕಾಂ ವರದಿ ತಿಳಿಸಿದೆ.
ಇರಾನ್ ನಲ್ಲಿ 80 ಮಿಲಿಯನ್ ಜನರಿದ್ದಾರೆ. ಹೀಗಾಗಿ ಇರಾನ್ ಜನಸಂಖ್ಯೆ ಆಧಾರದ ಮೇಲೆ ನಾವು 80 ಮಿಲಿಯನ್ ಡಾಲರ್ ಹಣ ಸಂಗ್ರಹಿಸಿ…ಯಾರು ಅಮೆರಿಕ ಅಧ್ಯಕ್ಷ ಟ್ರಂಪ್ ತಲೆ ತೆಗೆಯುತ್ತಾರೋ ಆ ಬಹುಮಾನದ ಮೊತ್ತ ಅವರಿಗೆ ನೀಡುವುದಾಗಿ ಘೋಷಿಸಿರುವುದಾಗಿ ವರದಿ ವಿವರಿಸಿದೆ.
ಜನವರಿ 3ರಂದು ಇರಾಕ್ ರಾಜಧಾನಿ ಬಾಗ್ದಾದ್ ವಿಮಾನ ನಿಲ್ದಾಣದ ಸಮೀಪ ಇರಾನ್ ಟಾಪ್ ಕಮಾಂಡರ್ ಖಾಸಿಂ ಸೊಲೆಮನಿ ಹಾಗೂ ಇರಾನ್ ಅರೆಸೇನಾಪಡೆಯ ಡೆಪ್ಯುಟಿ ಮುಖ್ಯಸ್ಥ ಅಬು ಮಹ್ದಿ ಅಲ್ ಮುಹಂಡಿಸ್ ಸೇರಿದಂತೆ ಹಲವು ನಾಯಕರನ್ನು ಅಮೆರಿಕ ವೈಮಾನಿಕ ದಾಳಿಯಲ್ಲಿ ಹತ್ಯೆಗೈದಿತ್ತು.
Comments are closed.