ಅಂತರಾಷ್ಟ್ರೀಯ

ತಮ್ಮ ನಿವಾಸದ ಬಾತ್ ರೂಂನಲ್ಲಿ ಜಾರಿ ಬಿದ್ದು ನೆನಪಿನ ಶಕ್ತಿ ಕಳೆದುಕೊಂಡ ಬ್ರೆಜಿಲ್ ಅಧ್ಯಕ್ಷ

Pinterest LinkedIn Tumblr


ಸಾವೋ ಪೌಲೋ: ತಮ್ಮ ನಿವಾಸದ ಬಾತ್ ರೂಂನಲ್ಲಿ ಕಾಲುಜಾರಿ ಬಿದ್ದು ತಲೆ ಗೋಡೆಗೆ ಬಡಿದ ಪರಿಣಾಮ ನಾನು ನೆನೆಪಿನ ಶಕ್ತಿ ಕಳೆದುಕೊಂಡಿದ್ದೆ ಎಂದು ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೋನಾರೊ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಸೋಮವಾರ ರಾತ್ರಿ ಅಲ್ವೋರಾಡಾ ಅರಮನೆಯ ಸ್ನಾನ ಗೃಹದಲ್ಲಿ 64ರ ಹರೆಯದ ಜೈರ್ ಅವರು ಕಾಲು ಜಾರಿ ಬಿದ್ದಾಗ ತಲೆ ಗೋಡೆಗೆ ಬಡಿದಿತ್ತು ಎಂದು ವರದಿ ವಿವರಿಸಿದೆ. 2018ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ವೇಳೆ ಜೈರ್ ಮೇಲೆ ನಡೆದ ಚೂರಿ ದಾಳಿಯಲ್ಲಿ ಗಾಯಗೊಂಡಿದ್ದರು.

ಸ್ನಾನಗೃಹದಲ್ಲಿ ಬಿದ್ದ ನನಗೆ ನೆನಪಿನ ಶಕ್ತಿ ಹೋಗಿತ್ತು. ಆದರೆ ನನಗೀಗ ಹಲವು ನೆನಪುಗಳು ಮರುಕಳಿಸುತ್ತಿದೆ. ಸದ್ಯ ಆರೋಗ್ಯವಾಗಿದ್ದೇನೆ ಎಂದು ಬೋಲ್ಸೋನಾರೋ ಬ್ಯಾಂಡ್ ಟೆಲಿವಿಷನ್ ಗೆ ನೀಡಿರುವ ದೂರವಾಣಿ ಸಂದರ್ಶನದಲ್ಲಿ ಮಾಹಿತಿ ನೀಡಿದ್ದಾರೆ.

ನನಗೆ ನಿನ್ನೆ ಏನು ನಡೆಯಿತು ಎಂಬುದು ಗೊತ್ತಿಲ್ಲ ಎಂದು ತಿಳಿಸಿದ್ದಾರೆ. ಬೋಲ್ಸೋನಾರೋ ಸೋಮವಾರ ರಾತ್ರಿ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮಂಗಳವಾರ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿದ್ದರು. ಅಲ್ಲದೇ ಅಧ್ಯಕ್ಷ ಜೈರ್ ಗೆ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆಂದು ಪ್ರಕಟಣೆ ತಿಳಿಸಿದೆ.

Comments are closed.