ಅಂತರಾಷ್ಟ್ರೀಯ

ತನ್ನ ಬಳಿಗೆ ಬರುತ್ತಿದ್ದ ಕ್ಯಾನ್ಸರ್ ಪೀಡಿತ ಮಹಿಳಾ ರೋಗಿಗಳಿಗೆ ಈ ವೈದ್ಯ ಮಾಡುತ್ತಿದ್ದದ್ದು ಏನು ಗೊತ್ತೇ…?

Pinterest LinkedIn Tumblr

ಲಂಡನ್: ತನ್ನ ಬಳಿಗೆ ಬರುತ್ತಿದ್ದ ಕ್ಯಾನ್ಸರ್ ಪೀಡಿತ ಮಹಿಳಾ ರೋಗಿಗಳಿಗೆ ಕ್ಯಾನ್ಸರ್ ಬಗೆಗಿರುವ ಅವರ ಭಯವನ್ನೇ ಬಂಡವಾಳವನ್ನಾಗಿಸಿಕೊಂಡು ಲೈಣ್ಗಿಕ ಕಿರುಕುಳ ನೀಡುತ್ತಿದ್ದ ಭಾರತೀಯ ಮೂಲದ ವೈದ್ಯನೊಬ್ಬ ಇದೀಗ ಯುಕೆ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದಾನೆ.

23 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪೂರ್ವ ಲಂಡನ್ ನ ಮೇವ್ನೇ ಮೆಡಿಕಲ್ ಸೆಂಟರ್ ನಲ್ಲಿ ವೈದ್ಯಕೀಯ ವೃತ್ತಿಯನ್ನು ನಿರ್ವಹಿಸುತ್ತಿದ್ದ ಮನೀಶ್ ಶಾ ಎಂಬಾತನು ಅಪರಾಧಿ ಎಂದು ಲಂಡನ್‌ನ ಓಲ್ಡ್ ಬೈಲಿ ನ್ಯಾಯಾಲಯ ಹೇಳಿದೆ.

ಹಾಲಿವುಡ್ ತಾರೆ ಏಂಜಲೀನಾ ಜೋಲೀ ಕ್ಯಾನ್ಸರ್ ಪ್ರಕರಣದ ಸುದ್ದಿಯನ್ನು ಶಾ ತನಗೆ ಬೇಕಾದಂತೆ ಬಳಸಿಕೊಂಡಿದ್ದು ತನ್ನತ್ತ ಬರುವ ಮಹಿಳಾ ರೋಗಿಗಳಿಗೆ ಸ್ತನ ಪರೀಕ್ಷೆ ನಡೆಸಿಕೊಳ್ಳುವಂತೆ ಪ್ರೇರಿಸುತ್ತಿದ್ದ. ಏಂಜಲೀನಾ ಜೋಲೀ ಕ್ಯಾನ್ಸರ್ ಚಿಕಿತ್ಸೆಗಾಗಿ ಮ್ಯಾಸ್ಟೆಕ್ಟಮಿ ಮಾಡಿಸಿಕೊಂಡಿರುವುದನ್ನು ಹೇಳಿ ನೀವೂ ಮಾಡಿಸಿಕೊಳ್ಲಬೇಕೆಂದು ಸಲಹೆ ನೀಡುತ್ತಿದ್ದ. ಹಾಗೆ ಸ್ತನ ಪರೀಕ್ಷೆಗೆ ಒಪ್ಪಿದ ಮಹಿಳೆಯರಿಗೆ ಸ್ತನ ಪರೀಕ್ಷೆ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿತ್ತಿದ್ದ.

ಮೇ 2009 ಮತ್ತು ಜೂನ್ 2013 ರ ನಡುವೆ ಶಾ ಪೂರ್ವ ಲಂಡನ್‌ನ ಮಾವ್ನಿ ವೈದ್ಯಕೀಯ ಕೇಂದ್ರದ ಆರು ರೋಗಿಗಳ ಮೇಲೆ ಹಲ್ಲೆ ನಡೆಸಿದ್ದಾನೆ. ಅದರಲ್ಲಿ 11 ವರ್ದ ಅಪ್ರಾಪ್ತೆಯೂ ಸೇರಿದ್ದಾಳೆ. ಅಲ್ಲದೆ ಬೇರೆಡೆ ಆತ 17 ಮಹಿಳೆಯರ ಮೇಲೆ ಇದೇ ಬಗೆಯಲ್ಲಿ ಅತ್ಯಾಚಾರ ಯತ್ನ ನಡೆಸಿದ್ದಾನೆ.ಇದೀಗ ನ್ಯಾಯಾಲಯ ಶಾ ಅಪರಾಧಿ ಎಂದು ತೀರ್ಪು ನೀಡಿದ್ದು ನ್ಯಾಯಾಧೀಶ ಅನ್ನಿ ಮೊಲಿನ್ಯೂಕ್ಸ್ಫೆಬ್ರವರಿ 7, 2020ರಂದು ಶಿಕ್ಷೆ ಪ್ರಮಾಣವನ್ನು ಪ್ರಕಟಿಸುವುದಾಗಿ ಹೇಳಿದ್ದಾರೆ.

Comments are closed.