
ಮೆಕ್ಸಿಕೋ ಸಿಟಿ: 38 ಜನರು ಪ್ರಯಾಣಿಸುತ್ತಿದ್ದ ಸಿ130 ಹರ್ಕ್ಯುಲಸ್ ಯುದ್ಧ ವಿಮಾನದ ಶೋಧ ಕಾರ್ಯಾಚರಣೆಯ ವೇಳೆ ಅದು ಪತನಗೊಂಡಿರುವುದು ಬೆಳಕಿಗೆ ಬಂದಿದ್ದು, ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ ಎಂದು ಚಿಲಿಯ ವಾಯು ಪಡೆ ತಿಳಿಸಿದೆ.
ಸಿ 130 ಹರ್ಕ್ಯುಲಸ್ ವಿಮಾನ ಸಂಪರ್ಕ ಕಳೆದುಕೊಂಡ ಏಳು ಗಂಟೆಗಳ ನಂತರ, ಅದು ಅಪಘಾತಕ್ಕೀಡಾಗಿದೆ ಎಂದು ತಿಳಿದಿದೆ ಎಂದು ಚಿಲಿಯ ರಕ್ಷಣಾ ಪಡೆಗಳು ವರದಿ ಮಾಡಿವೆ ಎಂದು ಟ್ವಿಟರ್‌ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಚಿಲಿಯ ವಾಯುಪಡೆ, ಲಭ್ಯವಿರುವ ಎಲ್ಲಾ ರಾಷ್ಟ್ರೀಯ ಮತ್ತು ವಿದೇಶಿ ವಿಮಾನಗಳು ಮತ್ತು ದುರಂತದ ಪ್ರದೇಶದಲ್ಲಿ ನೆಲೆಗೊಂಡಿರುವ ಹಡಗುಗಳೊಂದಿಗೆ ಜಂಟಿಯಾಗಿ, ಬದುಕುಳಿದವರಿಗಾಗಿ ಶೋಧ ಕಾರ್ಯ ಆರಂಭಿಸಿದೆ.
Comments are closed.